ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಎಎಸ್ ಟಿವಿ ಸಂಪಾದಕರಾದ ಡಾ. ಅಬ್ದುಲ್ ಶುಕೂರ್ ಅವರು ತಮ್ಮ ಕಚೇರಿಯಲ್ಲಿ ಸಮಾಜಸೇವಕರು, ಶಿಕ್ಷಕರು ಹಾಗೂ ಪತ್ರಕರ್ತರಾದ ಸತ್ಯನಾರಾಯಣ ಮತ್ತು ಉನ್ನತಿ ಫೌಂಡೇಶನ್ ಮುಖ್ಯ ಕಾರ್ಯದರ್ಶಿ ನಂದಿನಿ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಬ್ದುಲ್ ಶುಕೂರ್ ಅವರು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸತ್ಯನಾರಾಯಣ ಹಾಗೂ ನಂದಿನಿ ದಂಪತಿಯ ಸೇವೆ ಶ್ಲಾಘನೀಯವಾಗಿದೆ. ದೇವರು ಅವರಿಗೆ ಉತ್ತಮ ಆರೋಗ್ಯ, ಐಶ್ವರ್ಯ ಹಾಗೂ ಇನ್ನಷ್ಟು ಸಮಾಜಸೇವೆ ಮಾಡುವ ಶಕ್ತಿಯನ್ನು ನೀಡಲಿ ಎಂದು ಹಾರೈಸಿದರು.
ಸರಳವಾಗಿ ನಡೆದ ಈ ಸನ್ಮಾನ ಸಮಾರಂಭದಲ್ಲಿ ವರದಿಗಾರರಾದ ಶಮೀರ್, ಇಮ್ರಾನ್, ಶಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















