ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಾಗೂರು ಸೋಣ್ಣೆನ್ನಹಳ್ಳಿಯ ಗೋಲ್ಡನ್ ಇಂಟರ್ ನ್ಯಾಷನಲ್ ಶಾಲೆಗೆ ಕೀರ್ತಿ ತಂದ ಕ್ರೀಡಾಪಟುಗಳು: ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ತಾಲ್ಲೂಕು ಮಟ್ಟಕ್ಕೆ ಹೆಮ್ಮೆಯ ಆಯ್ಕೆ.

ಕೋಲಾರ/ ಮಾಲೂರು : ತಾಲ್ಲೂಕಿನ ಲಕ್ಕೂರಿನಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಚಿಕ್ಕತಿರುಪತಿ ಸಮೀಪದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಗೋಲ್ಡನ್ ಇಂಟರ್ ನ್ಯಾಷನಲ್ ಶಾಲೆ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಗೆಲುವು ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.

ಗೋಲ್ಡನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ ನ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಸಿರಾಜ್ ಖಾನ್ ರವರು ಮಾತನಾಡಿ “ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಮೈದಾನದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ವಿಜಯಲಕ್ಷ್ಮಿಯನ್ನು ವರಿಸಿದ ಕ್ರೀಡಾ ರತ್ನಗಳಿಗೆ ಅಭಿನಂದನೆಗಳು. ನಿಮ್ಮ ಈ ಸಾಧನೆ ಇತರ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆಯಾಗಿದೆ, ನಿಮ್ಮ ಸಾಧನೆ ಹೀಗೆ ಮುಂದುವರೆಯಲಿ” ಎಂದರು.

ಈ ವಿಷಯದ ಕುರಿತು ಮಾತನಾಡಿದ ಗೋಲ್ಡನ್ ಇಂಟರ್ ನ್ಯಾಷನಲ್ ಶಾಲೆ, ರಾಜ್ಯ ಪಠ್ಯಕ್ರಮದ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲಕ್ಷಮ್ಮ ರವರು ಮಾತನಾಡುತ್ತಾ “ಕ್ರೀಡಾಕೂಟದಲ್ಲಿ ತಮ್ಮ ಅದ್ಭುತ ಕ್ರೀಡಾ ಕೌಶಲ್ಯ ಹಾಗೂ ಶಿಸ್ತಿನ ಆಟದ ಮೂಲಕ ವಿಜೇತರಾಗಿ ಹೊರಹೊಮ್ಮಿದ ನಮ್ಮ ಶಾಲೆಯ ಎಲ್ಲಾ ಹೆಮ್ಮೆಯ ಮಕ್ಕಳಿಗೆ ಹಾರ್ದಿಕ ಶುಭಾಶಯಗಳು. ನಿಮ್ಮ ಮುಂದಿನ ತಾಲ್ಲೂಕು ಮಟ್ಟದ ಕ್ರೀಡಾ ಪಯಣಕ್ಕೆ ನಮ್ಮ ಸಂಪೂರ್ಣ ಬೆಂಬಲ ಹಾಗೂ ಶುಭ ಹಾರೈಕೆಗಳು” ಎಂದರು.

ಇದೇ ಸಂದರ್ಭದಲ್ಲಿ ‌ಮಕ್ಕಳ ಕ್ರೀಡಾ ಕ್ಷೇತ್ರದ ಸಾಧನೆಯ ಕುರಿತು ಮಾತನಾಡಿದ ಗೋಲ್ಡನ್ ಇಂಟರ್ ನ್ಯಾಷನಲ್ ಶಾಲೆ ಸಿ.ಬಿ.ಎಸ್.ಇ ಮುಖ್ಯೋಪಾಧ್ಯಾಯರಾದ ಹುಸ್ನ ಹುಸೇನ್ ರವರು “ನಮ್ಮ ಶಾಲೆಯ/ಸಂಸ್ಥೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಥ್ರೋಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಕೀರ್ತಿ ತಂದಿದ್ದಾರೆ. ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿದ ಎಲ್ಲಾ ವಿಜೇತ ಕ್ರೀಡಾಪಟುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು” ಎಂದರು.

ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುವ ಅನೀಸ್, ಆರೀಜ್, ಪರಿಣಿತ್, ವಿಕ್ರಮಾಧಿತ್ಯ, ಸೈಯದ್ ಆಶೀಮ್, ಮೋಹಿತ್, ಅಯ್ಮನ್, ಫಾಜೀಮ್,,ಧನುಷ್, ಮೋಹಿತ್,ತನುಷ್ ರೆಡ್ಡಿ, ಭಗತ್, ಸೈಯದ್ ಅರ್ಹನ್, ಸಮೀರ್, ಶೇಕ್ ಉಮರ್ ಫಾರೂಕ್, ಆಕ್ಯೂಬ್ ಮಕ್ಕಳು ಭಾಗವಹಿಸಿ ಬಹುಮಾನ ಗೆದ್ದು ತಾಲ್ಲೂಕು ಮಟ್ಟಕ್ಕೆ ಆಯ್ಕೆ ಆಗಿರುವುದು ಸಂತಸ ಎಂದು ಎಲ್ಲಾ ಶಿಕ್ಷಕರು ಸಂಭ್ರಮ ಪಟ್ಟರು.

ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ನಡೆದ ಸ್ಪರ್ಧೆಗಳಾದ ಥ್ರೋಬಾಲ್ ನಲ್ಲಿ ಪ್ರಥಮ ಬಹುಮಾನ, ಅಥ್ಲೆಟಿಕ್ಸ್ ಗಳಾದ 800 ರನ್ನಿಂಗ್ ನಲ್ಲಿ ಪ್ರಥಮ ಬಹುಮಾನವನ್ನು, 100 ರನ್ನಿಂಗ್ ನಲ್ಲಿ ದ್ವೀತಿಯ ಬಹುಮಾನವನ್ನು, 3000 ಮೀಟರ್ ರನ್ನಿಂಗ್ ನಲ್ಲಿ ಪ್ರಥಮ ಬಹುಮಾನವನ್ನು, ತೃತೀಯ ಬಹುಮಾನವನ್ನು, 400 ಮೀಟರ್ ರನ್ನಿಂಗ್ ನಲ್ಲಿ ದ್ವೀತಿಯ ಬಹುಮಾನವನ್ನು ಪಡೆಯುವ ಮೂಲಕ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ.

ಇದೇ ಸಂದರ್ಭದಲ್ಲಿ ಗೋಲ್ಡನ್ ಗ್ರೂಪ್ ಆಫ್ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಇಕ್ಬಾಲ್ ಖಾನ್, ಗೋಲ್ಡನ್ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸೈಯದ್ ನಿಖಾತ್, ರಹಮತ್ ಉಲ್ಲಾ, ದೈಹಿಕ ಶಿಕ್ಷಕರಾದ ದೊಡ್ಡಣ್ಣ, ಪದ್ಮವಾತಿ, ಶಾಲೆಯ ಎಲ್ಲಾ ಶಿಕ್ಷಕರು, ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಶುಭ ಹಾರೈಸಿದ್ದಾರೆ.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!