ಸ್ವ – ಉದ್ಯೋಗ ಪ್ರೆರಣೆ ಶಿಬಿರ ಕಾರ್ಯಕ್ರಮ
ಬಳ್ಳಾರಿ / ಕಂಪ್ಲಿ : ಮೆಟ್ರಿ ವಲಯದ ಮೆಟ್ರಿ ಬಸ್ ನಿಲ್ದಾಣ ಹತ್ತಿರದ ಕಾರ್ಯಕ್ಷೇತ್ರ ನವಚೇತನ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಬಟ್ಟೆ ಬ್ಯಾಗ್ ತಯಾರಿಕೆ ಕಾರ್ಯಗಾರವನ್ನು ಊರಿನ ಮುಖಂಡ ವಿರೇಶಸ್ವಾಮಿ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಮಹಿಳೆಯರು ಮನೆಯಿಂದಲೇ ಸ್ವಉದ್ಯೋಗ ಆರಂಭಿಸುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂದು ತಿಳಿಸಿದರು.
ವಿವಿಧ ಸ್ವಉದ್ಯೋಗ ಚಟುವಟಿಕೆಗಳು ಲಾಭದಾಯಕವಾಗಿದ್ದು, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರೂಪುಗೊಂಡಿರುವ ಯಶಸ್ವಿ ಉದ್ಯಮಿಗಳು ಇತರರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬಟ್ಟೆ ಬ್ಯಾಗ್ ತಯಾರಿಕೆ ತರಬೇತಿ ನೀಡಿದ ಸುಧಾರವರು ಬಟ್ಟೆ ಬ್ಯಾಗ್ ತಯಾರಿಕೆ ಕುರಿತು ಸಮಗ್ರ ಮಾಹಿತಿ ನೀಡಿದರು.
ಸ್ವಉದ್ಯೋಗ ಆರಂಭಿಸಲು ವಯಸ್ಸು ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದರು.
ಪ್ಲಾಸ್ಟಿಕ್ ಮುಕ್ತ ಸಮಾಜದಲ್ಲಿ ಬಟ್ಟೆ ಬ್ಯಾಗ್‌ಗಳಿಗೆ ಇರುವ ಭಾರಿ ಬೇಡಿಕೆ, ಯಶಸ್ವಿ ಮಹಿಳಾ ಉದ್ಯಮಿಗಳ ಸ್ಪೂರ್ತಿದಾಯಕ ಕಥೆಗಳ ಮೂಲಕ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ಮೂಲಕ ಸಿಗುವ ಪ್ರಗತಿನಿಧಿ ಸಾಲ ಮತ್ತು ಸರ್ಕಾರದ ಸೌಲಭ್ಯಗಳ ಮಾಹಿತಿಯನ್ನು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಮಂಜುಳಾರವರು ತಿಳಿಸಿದರು.
ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿಯ ಕೇಂದ್ರದ ಅವಿನಾಶ್ ಹಾಗೂ ಸದಸ್ಯರು ಸೇರಿದಂತೆ ಇತರರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















