“ಓ ಮನಸೆ ಒಳ್ಳೆಯಜನರನ್ನು ಭೇಟಿಯಾಗೋಣ್ವಾ?”
ಆಗಿದ್ದರೆ ಆ ಜನ ಸಮಾಜದಲ್ಲಿ ಇದ್ದಾರಾ?
ಇದ್ದರೆ ಅವರು ಮಾನವರೇನಾ ?
ಮಾನವರೆಂದಾದರೆ ಅವರು ಹೇಗಿರುವರು ?
ಪ್ರತಿಯೊಂದರಲ್ಲೂ ನಿಸ್ವಾರ್ಥಿಯಾಗಿರುವರಾ?
ಅಂದರೆ ನಿಸ್ವಾರ್ಥಿಗಳೆ ಒಳ್ಳೆಯವರಾ.!?
ಅಥವಾ
ಈ ಸಮಾಜದಲ್ಲಿ ಬಹುತೇಕ ಜನರು ಒಳ್ಳೆಯವರಾ?
ಆದ್ರೆ ಅವಶ್ಯಕತೆಗೆ ಅನುಗುಣವಾಗಿ ಬದಲಾಗುವರಾ?
ಅಂದರೆ ಮಾನವನು ಅವಶ್ಯಕತೆಯ ಜೀವಿನಾ?
ಆಗಿದ್ದರೆ ಬಂಧು, ಮಿತ್ರ, ಸ್ನೇಹ, ಇತ್ಯಾದಿ ಡಾಂಭಿಕವಾ?
ಅಂದ್ರೆ ಇದು ಬಹಿರಂಗದಲ್ಲಿ ಡಾಂಭಿಕ ಸಮಾಜವಾ?
ಅಥವಾ ಆಂತರಿಕ ಶತ್ರುಇರುವ ಸಮಾಜವಾ?
ಅಥವಾ ಈ ಎಲ್ಲಾನೂ ಒಳಗೋಂಡು ಸಮಾಜವಾ?
ಹೆ ಹುಚ್ಚು ಮನಸ್ಸೇ ಕೊನೆಗೂ ನೀನು ಒಳ್ಳೆಯವನಾ?
ಮನಸ್ಸಿನ ಆಂತರಿಕವನ್ನು ಅರಿಯುವವರ್ಯಾರು?
ಓ ಮನಸೆ ಕೋನೆಗೂ ನೀನು ಒಳ್ಳೆಯ ಜನರನ್ನು ಭೇಟಿಯಾಗುವಿಯಾ?
ಅಥವಾ ಪ್ರಶ್ನೆಗಳ ಸುರಿಮಳೆಯಲ್ಲೇ ಹುಡುಕುವೆಯಾ?
ಇನ್ನೂ ಮುಂದುವರೆಯಲಿದೆ…….✍️
- ಮುಮ್ಮಡಿ ರಾಜಾ ವಿಶ್ವನಾಯಕ..✍️
7676048053




















