ಮುಧೋಳ : ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ರವಿವಾರ ದಿ.29 ರಂದು ಮುಂಜಾನೆ 8 ಗಂಟೆಗೆ ದಾಸ ಶ್ರೇಷ್ಠರಾದ ಸಂತ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮವು ಆಶ್ರಮದ ಪೂಜ್ಯರಾದ ಶರಣಬಸವ ಶ್ರೀಗಳ ಸಮ್ಮುಖದಲ್ಲಿ ಜರುಗುವದು.
ಇದೆ ಸಂದರ್ಭದಲ್ಲಿ 176 ನೇ ರವಿವಾರದ ಸತ್ಸಂಗ ಆರೂಢರ ಪಾದುಕಾ ಪಂಚಾಮೃತ ಅಭಿಷೇಕ.ಪಾರಾಯಣ. ಭಜನೆ.ಓಂಕಾರ. ನಾಮಸ್ಮರಣೆ.ಮಂಗಲ ಪ್ರಸಾದ ಜರುಗುವುದೆಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಕು.ಗುರುಪ್ರಸಾದ ಸ್ವಾಮೀಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




















