ಸಿಂಧನೂರು ತಾಲೂಕಿನ ಮುಚ್ಚಳ ಕ್ಯಾಂಪ್ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಹನುಮ ಮಾಲಧಾರಿಗಳು ಶ್ರೀ ಸಾಯಿ ಆಂಜನೇಯ ಪೀಠ 3ನೇ ವರ್ಷದ ಮಹಾಮಂಡಲ ಪೂಜೆ ಮತ್ತು ಮಹಾಪ್ರಸಾದ ಕಾರ್ಯಕ್ರಮದಲ್ಲಿ ತೆಂಗಿನ ಗಿಡ ನೆಟ್ಟು ಹಾಗೂ ವನಸಿರಿ ತಂಡದ ಸಮವಸ್ತ್ರಗಳನ್ನು ಹನುಮ ಮಾಲಾಧಾರಿಗಳಿಂದ ಉದ್ಘಾಟಿಸಲಾಯಿತು.
ಇದೇ ಸಂದರ್ಭದಲ್ಲಿ ಸಸಿನೆಟ್ಟು ಮಂಡಲ ಪೂಜೆ ನೆರವೇರಿಸಿ ವನಸಿರಿ ಫೌಂಡೇಶನ್ ಸದಸ್ಯರ ಟೀ ಶರ್ಟಗಳನ್ನು ಬಿಡುಗಡೆ ಮಾಡುವ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಪರಿಸರ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ,ಯುರೇಕಾ ಸ್ಪೋರ್ಟ್ಸ್ ಅಂಗಡಿ ಮಾಲಿಕರಾದ ಮಂಜುನಾಥ,ರಮೇಶಗೌಡ ಹರ್ವಾಪೂರ ಹಾಗೂ ಹನುಮ ಮಾಲಾಧಾರಿಗಳು ಮತ್ತು ಅಯ್ಯಪ್ಪ ಮಾಲಾಧಾರಿಗಳು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.



















