ಇಂಡಿ-ರಿಪಬ್ಲಿಕ್ ನ ಪಾರ್ಟಿ ಆಪ್ ಇಂಡಿಯಾ(ಅಂಬೇಡ್ಕರ್) ಘಟಕದ ಇಂಡಿ ತಾಲ್ಲೂಕಿನ ಸರ್ವ ಸದಸ್ಯರು ಹಾಗೂ ಸಾವ೯ನಿಕ ನಾಯಕರು ಸೇರಿಕೊಂಡು,ವಿಜಯಪುರ ಜಿಲ್ಲೆಯಲ್ಲಿನ ಇಂಡಿಯು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದ ತೀರ ಹಿಂದುಳಿದ ಪ್ರದೇಶಗಳಲ್ಲೊಂದಾಗಿದ್ದು,ಇಲ್ಲಿ ಶೈಕ್ಷಣಿಕವಾಗಿ,ಸಾಮಾಜಿಕವಾಗಿ,ಆರ್ಥಿಕವಾಗಿ ಇನ್ನು ಪ್ರಗತಿ ಕಾಣಬೇಕಾಗಿದೆ ಆಡಳಿತಾತ್ಮಕ ದೃಷ್ಟಿಯಿಂದ ಇಂಡಿ ಪ್ರತ್ಯೇಕ ಜಿಲ್ಲೆಯ ರಚನೆಗೆ ಸಂಭಂದಿಸಿದಂತೆ ಜಿಲ್ಲೆಗೆ ಬೇಕಾಗಿರುವ ಪೂರಕ ಅಂಶಗಳು ಸಾಕಷ್ಟು ಇರುತ್ತವೆ,ಅದರಂತೆ ಹಲವಾರು ವರ್ಷಗಳಿಂದ ಅಭಿವೃದಿ ಕಾಣದೆ ತೀರ ಹಿಂದುಳಿದ ಗಡಿ ಭಾಗವಾಗಿದು ಇಲ್ಲಿ ಪದವಿ ಕಾಲೇಜುಗಳು/ತಾಂತ್ರಿಕ ವ ಇಂಜನಿಯರಿಂಗ/ಡಿಪ್ಲೊಮಾ ಕಾಲೇಜುಗಳು,ಪ್ಯಾರಾ ಮೇಡಿಕಲ/ನರ್ಸಿಂಗ ಕಾಲೆಜು ಹಾಗೂ ಸ್ನಾತಕೋತ್ತರ ವ ಪೋಸ್ಟ್ ಗ್ರಾಜುವೇಟ್ ಕಾಲೇಜುಗಳು ಹೀಗೆ ಹಲವಾರು ವೈವಿಧ್ಯಮಯ ಸ್ವರೂಪದ ಕಾಲೇಜುಗಳ ಸ್ಥಾಪನೆಗೆ ಹಾಗೂ ಅವುಗಳ ಸಂಭಂಧಿತ ಗಡಿನಾಡು ಅಭಿವೃದ್ಧಿಗಾಗಿ ಸದರ ಇಂಡಿಯನ್ನು ಪ್ರತ್ಯೇಕ ಜಿಲ್ಲಾ ಕೆಂದ್ರವಾಗಿ ಘೋಷಣೆ ಮಾಡಲು ಆಗ್ರಹಿಸುತ್ತದೆ ಹಾಗೂ ಸಂವಿಧಾನ ವಿಧಿ 371 (ಜೆ) ಗೆ ಸೆರ್ಪಡೆ ಹಕ್ಕೋತಾಯ ಮಾಡುತ್ತಾ ಸೂಕ್ತ ನಿರ್ಣಯ ಕೈಗೊಂಡು ಇಂಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಯವರಿಗೆ ಮಾನ್ಯ ಉಪವಿಭಾಗಾಧಿಕಾರಿಗಳು ಇಂಡಿ ಇವರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಮೇಲಿನಮನಿ,ಶ್ರೀ ರಾಮಚಂದ್ರ ಕಾಂಬಳೆ,ವಿಶ್ವನಾಥ ವಾಘ್ಮೋರೆ,ಸುರೇಶ ಕಾಂಬಳೆ,ಪರಶುರಾಮ ಭಾವಿಕಟ್ಟಿ,ವಿಕಾಸ ಗುಡಮಿ,ಎಸ್.ಬಿ.ಹರಿಜನ,ಪರಶುರಾಮ ಉಕ್ಕಲಿ,ವೆಂಕಟೇಶ ಇತರರು ಉಪಸ್ಥಿತರಿದ್ದರು.
ವರದಿ-ಅರವಿಂದ್ ಕಾಂಬಳೆ ಇಂಡಿ



















