ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಧೃವನಾರಾಯಣ್ ರ ಕನಸನ್ನು ನನಸು ಮಾಡಲು ನನಗೊಂದು ಅವಕಾಶ ನೀಡಿ:ಜಿ ಸಿ ಕಿರಣ್

ಹನೂರು:ದೇಶ ಕಂಡಂತಹ ಅಪರೂಪದ ರಾಜಕಾರಣಿಗಳಲ್ಲೊಬ್ಬರಾದ ರಾಜೀವ್ ಗಾಂಧಿಯವರ ಅಭಿಮಾನಿಯಾಗಿ ನಾನು ರಾಜಕೀಯ ಪಾದಾರ್ಪಣೆ ಮಾಡುತ್ತಿದ್ದೇನೆ ಜನರ ಸೇವೆಯೆ ಜನಾರ್ದನ ಸೇವೆ ಎಂಬ ವಾಕ್ಯದಲ್ಲಿ ಅಂಬೇಡ್ಕರ್ ರವರ ಸಂವಿಧಾನದ ಪ್ರಕಾರ ನಮ್ಮೆಲ್ಲರಿಗೂ ಪ್ರಜಾಪ್ರಭುತ್ವದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ ಅದರಂತೆ ನಾನು ಚಾಮರಾಜನಗರ ಲೋಕಸಭಾ ಕ್ಷೇತ್ರ ಆಕಾಂಕ್ಷಿಯಾಗಿದ್ದೇನೆ ಎಂದು ಕೆಪಿಸಿಸಿ ರಾಜ್ಯ ಕಾರ್ಮಿಕ ಘಟಕದ ಕಾರ್ಯದರ್ಶಿಯಾದ ಜಿ.ಸಿ ಕಿರಣ್ ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮಲ್ಲಿನ ಹೊಸತನವನ್ನು ಕಂಡು ನಮ್ಮ ಹಿತೈಷಿಗಳಾದ ದಿವಂಗತ ಆರ್.ಧೃವನಾರಾಯಣ್ ರವರ ಆಶಯದಂತೆ ಜನರ ಸೇವೆಗೆ ನಾನು ಮುಂದೆ ಬಂದಿದ್ದೆನೆ ಹಾಗೂ ಈ ಕ್ಷೇತ್ರದ ಜನರಿಗೆ ನಾನು ಅಭಾರಿಯಾಗಿದ್ದೇನೆ,ನನ್ನ ಒಳ್ಳೆಯ ಉದ್ದೇಶ ಪೂರ್ವಕವಾಗಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದೇನೆ ಎಲ್ಲರೂ ಸಹಕಾರ ನೀಡಬೇಕು ಚಾಮರಾಜನಗರ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರ ಮಾಡಲು ಪಣ ತೊಡೋಣ ಮತ್ತು ಬೆಂಗಳೂರಿನಲ್ಲಿ ನಮ್ಮ ಕ್ಷೇತ್ರದ ಜನರಿಗಾಗಿ ಚಾಮರಾಜನಗರ ಭವನ ಮಾಡಲು ಸ್ವಂತ ಹಣದಿಂದ ನಿರ್ಮಿಸಲಾಗುವುದು ಹಾಗೂ ಜಿಲ್ಲೆಯದ್ಯಾಂತ ಅತಿ ಹೆಚ್ಚು ಗಡಿ ಪ್ರದೇಶಗಳಿವೆ ಕಾಡಂಚಿನ ಗ್ರಾಮಗಳ ಕುಗ್ರಾಮಗಳಿವೆ,ಅಲ್ಲಿನ ಗ್ರಾಮಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ನಮ್ಮ ಹುಟ್ಟುರು ನಂಜನಗೂಡು,ನನ್ನ ಮಡದಿ ಮಾದಾಪುರ ಮತ್ತೊಮ್ಮೆ ಮಾದರಿ ಕ್ಷೇತ್ರ ಮಾಡಲು ಒಂದು ಅವಕಾಶ ದೊರೆಯುವಂತಗಲಿ,ದೃವನಾರಾಯಣ್ ರವರು ಮರಣದ ಮುನ್ನ ಕೊನೆಯ ದಿನಗಳಲ್ಲಿ ಅವರಿಗೆ ಕೊಟ್ಟ ಮಾತಿಗಾಗಿ ನಾನು ಸ್ಪರ್ಧೆ ಮಾಡುತ್ತೇನೆ,ಪ್ರತಿ ಕ್ಷೇತ್ರದ ಕಿರಿಯ ಹಾಗೂ ಹಿರಿಯನ ನಾಯಕರ ವಿಶ್ವಾಸದಿಂದ ನಾನು ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು ಇದೇ ಸಮಯದಲ್ಲಿ ಶಿವಮೂರ್ತಿ,ಯೋಗಪ್ಪ,ಬಸಲಿಂಗಯ್ಯ,ಮಹೇಶ್ ನಟರಾಜು,ಬಸವರಾಜು,ಪ ಪ ಸದಸ್ಯರಾದ ಸಂಪತ್ತು,ಸುದೇಶ್,ಮುಖಂಡರುಗಳಾದ ಜಗದೀಶ್,ಮಾದೇವ್,ಕೃಷ್ಣ,ಹನೂರು ಪ ಪ ಯು ಕಾ ಅಧ್ಯಕ್ಷ ಮಂಜೇಶ್,ಗೋವಿಂದು ಸೇರಿದಂತೆ ಇತರರು ಹಾಜರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ