ಕಲ್ಬುರ್ಗಿ ಸುದ್ದಿ:ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಬ್ಬ ಪ್ರಜೆಗಳು ಅಲ್ಪ ಆಮಿಷಗಳಿಗೆ ಬಲಿಯಾಗಿ ಚಿಲ್ಲರೆ ಕಾಸಿಗೆ ಮತದಾನವನ್ನು ಮಾರಿಕೊಂಡ ಪರಿಣಾಮ ಈ ಅವ್ಯವಸ್ಥೆ ಮುಂದುರೆಯುತ್ತಿದೆ ದೇಶದ ಹಾಗೂ ರಾಜ್ಯದ ಪ್ರತಿಯೊಬ್ಬ ಸಾಮಾನ್ಯ ಜನರು ಅಸಮಾನತೆ ಹಾಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡಿದಾಗ ಮಾತ್ರ ನಮ್ಮ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬದಲಾವಣೆ ಕಾಣಬಹುದು ಇಲ್ಲದಿದ್ದರೆ ಪ್ರತಿಯೊಂದು ಇಲಾಖೆಯ ದೇಶದ ಪ್ರತಿಯೊಬ್ಬ ನಾಗರಿಕರ ತೆರಿಗೆ ದುಡ್ಡು ಸಾಮಾನ್ಯ ಪ್ರಜೆಗಳ ಪಾಲಾಗದೆ ಹಗಲು ದರೋಡೆ ಕೋರರ ಹಾಗೂ ಅವರ ಹಿಂಬಾಲಕರ ಪಾಲಾಗುತ್ತಿದೆ ಇಂತಹ ಭ್ರಷ್ಟ ಅವ್ಯವಸ್ಥೆ ತಪ್ಪಿಸಬೇಕಾದರೆ ಪ್ರತಿಯೊಂದು ಇಲಾಖೆಯ ಪ್ರತಿಯೊಂದು ತೆರಿಗೆ ದುಡ್ಡಿನ ಲೆಕ್ಕ ಪ್ರತಿಯೊಬ್ಬ ಸಾಮಾನ್ಯ ನಾಗರಿಕರು ಕೇಳಬೇಕು ಹಾಗೂ ಪ್ರತಿಯೊಬ್ಬ ಅಧಿಕಾರಿಗಳಿಗೆ ಪ್ರಶ್ನೆ ಮಾಡಬೇಕು? ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬ್ರಷ್ಟಾಚಾರಕ್ಕೆ ಹೊಂದಿಕೊಂಡ ಮನಸ್ಥಿತಿಗಳಿಗೆ ಬದಲಾವಣೆ ತರುವ ಮನಸ್ಥಿತಿ ಬದಲಾಗಬೇಕಿದೆ. ಹಾಗೂ ಈ ವ್ಯವಸ್ಥೆಯನ್ನು ಬದಲಾಯಿಸಬೇಕಿದೆ. ಆದ್ದರಿಂದ ಪ್ರಜ್ಞಾವಂತ ಯುವಕರು ಕಟ್ಟ ಕಡೆಯ ನಾಗರಿಕರಿಗೆ ಸರಕಾರಿ ಸೌಲಭ್ಯಗಳನ್ನು ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಯಾವುದೇ ರೀತಿಯಿಂದ ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಮಾಧ್ಯಮಗಳ ಮುಖಾಂತರ ಹಾಗೂ ಅವರು ಮಾಡುತ್ತಿರುವ ಕರ್ಮಕಾಂಡವನ್ನು ಬಹಿರಂಗವಾಗಿ ಹರಾಜು ಹಾಕಬೇಕು ಇಂಥಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತರಬೇಕು ಅವರು ಸರಿಯಾಗಿ ಬುದ್ಧಿ ಕಲಿಸುತ್ತಾರೆ ನ್ಯಾಯ ಸಮ್ಮತವಾದ ಹೋರಾಟಕ್ಕೆ ನಮ್ಮ ಸಮ್ಮತಿ ಇದೆ ಇನ್ನು ಕೆಲವು ಹೆಸರಿನಲ್ಲಿ ರೋಲ್ ಕಾಲ್ ಮಾಡುವ ಹಾಗೂ ಬಹಿರಂಗವಾಗಿ ಪ್ರಾಮಾಣಿಕ ಅಧಿಕಾರಿಗಳಿಗೆ ಧಮ್ಕಿ ಹಾಕುವ ವಿಷಯ ತಿಳಿದು ಬಂದರೆ ಗೌಪ್ಯವಾಗಿ ವಿಡಿಯೋ ಮಾಡಿಕೊಂಡು ಪೊಲೀಸ್ ಇಲಾಖೆಗೆ ದೂರು ಕೊಡಬಹುದು ಇದಕ್ಕೆ ನಾವು ಪರೋಕ್ಷವಾಗಿ ಬೆಂಬಲಿಸುತ್ತೇವೆ ನಮ್ಮ ಹೋರಾಟ ಭ್ರಷ್ಟಾಚಾರದ ವಿರುದ್ಧ,ವ್ಯಕ್ತಿಯ ವಿರುದ್ಧವಲ್ಲ ಅಥವಾ ಪಕ್ಷದ ವಿರುದ್ಧವಲ್ಲ ನಮ್ಮ ಹೋರಾಟ ಅವ್ಯವಸ್ಥೆಯ ವಿರುದ್ಧ ಭ್ರಷ್ಟಾಚಾರದ ವಿರುದ್ದ ರಾಜ್ಯಮಟ್ಟದಲ್ಲಿ ಯಾರೇ ಧ್ವನಿಯೆತ್ತಲಿ ನಾವು ಪರೋಕ್ಷವಾಗಿ ಬೆಂಬಲ ಕೊಡುತ್ತೇವೆ ಎಂದು ಕನಕ ಕಾರ್ಮಿಕ ಕಲ್ಯಾಣ ಸಂಘದ(ರಿ.) ಯುವ ಘಟಕದ ರಾಜ್ಯಾಧ್ಯಕ್ಷರಾದ ಮಲ್ಲಣ್ಣ ಎಂ ಪೂಜಾರಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.