ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಂದ ಕುಂದುಕೊರತೆಗಳ 98 ಅರ್ಜಿ ಸ್ವೀಕರಿಸಲೆಂದು ಮಂಗಳವಾರ ಬೆಳಿಗ್ಗೆ ೯-೦೦ ಗಂಟೆಗೆ ವಿಜಯನಗರ ಜಿಲ್ಲಾಧಿಕಾರಿ ದಿವಾಕರ ಎಂ.ಎಸ್. ಪಟ್ಟಣಕ್ಕೆ ಆಗಮಿಸಿ ಇಲ್ಲಿನ ಗಾಂಧಿ ವೃತ್ತದಿಂದ ಸೈಕಲ್ ಸಂಚಾರ ಕೈಗೊಂಡು ಪಟ್ಟಣದೆಲ್ಲೆಡೆ ವೀಕ್ಷಣೆ ನಡೆಸಿದ್ದು ನಾಗರಿಕರ ಮೆಚ್ಚುಗೆಗೆ ಪಾತ್ರವಾಯಿತು.
ಬೆಳಿಗ್ಗೆ ೯-೦೦ ಯಿಂದ ಗಾಂಧಿ ವೃತ್ತದಿಂದ ತಾಲೂಕು ಆಡಳಿತದ ಅಧಿಕಾರಿಗಳೊಂದಿಗೆ ಸೈಕಲ್ ಸಂಚಾರ ಕೈಗೊಂಡ ಜಿಲ್ಲಾಧಿಕಾರಿಗಳ ಯಾತ್ರೆ ಕೊಟ್ಟೂರೇಶ್ವರ ದೇವಸ್ಥಾನದ ರಸ್ತೆ ಗಚ್ಚಿನ ಮಠ,ಊರಮ್ಮ ಗುಡಿ ಪ್ರದೇಶ,ತೇರು ಬಯಲಿನಲ್ಲಿ ಸಂತೆಯೂ ನಡೆಯುತ್ತದೆ ಮತ್ತು ತೇರು ಎಳೆಯಲಿಕ್ಕೆ ಅನುಕೂಲ ಆಗುವಂತೆ ಪ್ರಯತ್ನ ಮಾಡೋಣ,ಬಸ್‌ನಿಲ್ದಾಣ ವೀಕ್ಷಣೆ ಮಾಡಿ ಅಲ್ಲಿನ ಬಹುದಿನದ ಸಮಸ್ಯೆ ಮತ್ತು ಸ್ವಚ್ಛತೆ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು,ಬಾಲಾಜಿ ಕಲ್ಯಾಣ ಮಂಟಪ ರಸ್ತೆಸಾಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಲ್ಲಿನ ವೈದ್ಯರ ಸಮಸ್ಯೆ ಬಗ್ಗೆ ಮತ್ತು ಸ್ವಚ್ಛತೆಯ ಬಗ್ಗೆ ಎಚ್ಚರಿಕೆ ನೀಡಿದರು.ಎಪಿಎಂಸಿ ಪ್ರದೇಶಗಳನ್ನು ಸಂಚರಿಸಿ ನಂತರ ಶಾಸಕರಾದ ಕೆ ನೇಮಿರಾಜ್ ನಾಯ್ಕ್ ಜೊತೆ ಸೇರಿ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾರ್ವಜನಿಕರ ಆಹವಾಲು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಕೊಟ್ಟೂರಿನ 18ನೇ ವಾರ್ಡಿನ ನಿವಾಸಿಯಾದ ಜಯಪ್ರಕಾಶ್ ಕೆ ಎಸ್ ರವರು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತು ಶಾಸಕರಿಗೆ ಮನವಿ ಸಲ್ಲಿಸಿದರು ಇದರಿಂದ ಕೆ ನೇಮರಾಜ್ ನಾಯ್ಕ ಇನ್ನು 15 ದಿನಗಳಲ್ಲಿ ಕೆಲಸ ನಡೆಯಲಿದೆ 90 ಲಕ್ಷ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು ನಂತರ ಬಹುದಿನಗಳಿಂದ ಹ್ಯಾಳ್ಯಾ ಗ್ರಾಮದಲ್ಲಿ ಹರಿಜನ ಕಾಲೋನಿಯಲ್ಲಿ ಜಾಗದ ಸಮಸ್ಯೆ ಇದೆ ಇದನ್ನು ಆದಷ್ಟು ಬೇಗನೆ ಬಗೆಹರಿಸಿ ಕೊಡಬೇಕೆಂದು ಅಲ್ಲಿನ ಮುಖಂಡರು ಮನವಿ ಸಲ್ಲಿಸಿದರು.ಪಿ.ಎಂ.ಕೊಟ್ರಯ್ಯ, ಕರಿಬಸಪ್ಪ,ಮಂಜಪ್ಪ,ಮಲ್ಲನಾಯಕನಹಳ್ಳಿ ರೈತ ಮುಖಂಡರು ತೋಟಗಾರಿಕೆ ಇಲಾಖೆ ಪ್ರಾರಂಭ ಮಾಡಿ ಎಂದು ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿಗಳ ಸೈಕಲ್ ಸವಾರಿಯಲ್ಲಿ ತಹಶೀಲ್ದಾರ್ ಅಮರೇಶ್ ಜಿ.ಕೆ.,ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವೈ ರವಿಕುಮಾರ,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸರುಲ್ಲಾ,ಸಿಪಿಐ ವೆಂಕಟಸ್ವಾಮಿ,ಪಿಎಸ್ಐ ಗೀತಾಂಜಲಿ ಶಿಂಧೆ,ಪಟ್ಟಣ ಪಂಚಾಯತಿಯ ಅಧ್ಯಕ್ಷರು,ಸದಸ್ಯರು,ಸಾರ್ವಜನಿಕರು ಪಾಲ್ಗೊಂಡಿದ್ದರು.

ವರದಿ:ಮಹೇಶ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ