ಯಾದಗಿರಿ;ಅಂಬೇಡ್ಕರ್ ಸ್ವಾಭಿಮಾನ ಸೇನೆ ಯಾದಗಿರಿ ಜಿಲ್ಲಾ ಸಮಿತಿಯಿಂದ ಎರಡು ಮೂರು ದಿನಗಳಿಂದ ಸತ್ಯಾಗ್ರಹ ನಡೆಸಿದರು.
ಅಧಿಕಾರಿಗಳು ಬೇಡಿಕೆ ಈಡೇರಿಕೆಗಾಗಿ ಹಾಗೂ ಕೆಲ ಇಲಾಖೆಯ ಅಧಿಕಾರಿಗಳು ಸ್ಪಂದನೆ ಸಿಕ್ಕಿಲ್ಲ ಎಂದು ಖಂಡಿಸಿ ಅಂಬೇಡ್ಕರ್ ಸ್ವಾಭಿಮಾನ ಸೇನೆ ಯಾದಗಿರಿ ಜಿಲ್ಲಾ ಸಮಿತಿಯಿಂದ ನವೆಂಬರ್ 9 ರಂದು ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದರು.ಸಂಜೆ 6 ಗಂಟೆಗೆ ಸತ್ಯಾಗ್ರಹ ಸ್ಥಳಕ್ಕೆ ಎಸ್ಸಿ ಎಸ್ಟಿ ಆಯೋಗದ ಸದಸ್ಯರಾದ ಮತ್ತು ಕುಡಚಿ ಶಾಸಕರಾದ ಶ್ರೀ ಟಿ.ರಾಜೀವ್ ರವರು ಭೇಟಿ ನೀಡಿ ಅಂಬೇಡ್ಕರ್ ಸ್ವಾಭಿಮಾನ ಸೇನೆಯ ಜಿಲ್ಲಾ ಅಧ್ಯಕ್ಷರಾದ ಶ್ರೀ ಕಾಶಿನಾಥ್ ಹಾಗೂ ಕಾರ್ಯಕರ್ತರ ಜೊತೆ ಚರ್ಚೆಸಿ ತಮ್ಮ ಬೇಡಿಕೆಗಳನ್ನು ಆಯೋಗದ ಅಧ್ಯಕ್ಷರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿ ಮನವೊಲಿಸಿದರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಹೋರಾಟಗಾರರಿಗೆ ಕೆಲಸಗಳು ಬೇಗನೆ ಮಾಡಬೇಕು ಎಂದು ಸೂಚಿಸಿದರು ಜಿಲ್ಲಾಧಿಕಾರಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದಾಗ ಹೋರಾಟವನ್ನು ಹಿಂಪಡೆಯಲಾಯಿತು .
ವರದಿ
ರಾಜಶೇಖರ ಮಾಲಿ ಪಾಟೀಲ




















