ಯಾದಗಿರಿ ಜಿಲ್ಲೆಯಲ್ಲಿ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಮುದಾಯ ಆರೋಗ್ಯ ಅಧಿಕಾರಿಗಳಾದ ಕ್ರಿಸ್ಟಫರ್ ರವರು ನವಂಬರ್ 18ರಂದು ರಾಜ್ಯದ್ಯಂತ ಸಮುದಾಯ ಆರೋಗ್ಯ ಅಧಿಕಾರಿಗಳಾದ ನಾವೆಲ್ಲರೂ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುತ್ತದೆ. ನಮ್ಮ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಖಾಯಂ ಮಾಡುವಂತೆ ಹಾಗೂ ತುಟ್ಟಿಬದ್ಧವನ್ನು ಹೆಚ್ಚಳ ಮಾಡುವಂತೆ ಸರಕಾರದ ನಿಯಮಗಳ ಪ್ರಕಾರ ಸರಿಯಾಗಿ ತಿಂಗಳಿಗೊಮ್ಮೆ ಪೇಮೆಂಟ್ ಮಾಡುವಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು. ನಮ್ಮ ಸಂಘದ ವತಿಯಿಂದ ರಾಜ್ಯದ್ಯಂತ ಪ್ರತಿಭಟನೆ ಮಾಡುವುದಾಗಿ ಹೇಳಿದರು. ಜಿಲ್ಲಾಧ್ಯಕ್ಷರಾದ ಕ್ರಿಸ್ಟೋಫರ್. ಹಾಗೂ ಬಸವಾನಂದ್ ಹಾಗೂ ದುಂಡು ಚೌಹಾಣ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿ
ರಾಜಶೇಖರ ಮಾಲಿ ಪಾಟೀಲ ಶಹಾಪುರ




















