ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಚಿತ್ತರಗಿ ಗುರು ಮುಪ್ಪಿನ ಸ್ವಾಮಿ ಮಠದ ರಥೋತ್ಸವ

ಹುನಗುಂದ ತಾಲೂಕಿನ ಸುಕ್ಷೇತ್ರ ಚಿತ್ತರಗಿಯ ಕಾಶಿ ಪೀಠದ ಶಾಖಾಮಠದ ಗುರು ಮುಪ್ಪಿನ ಸಾಮಿ ಮಠದ 18ನೇ ಮಹಾರಥೋತ್ಸವ 9.03.2024 ಶನಿವಾರ ಸಾಯಂಕಾಲ ಸಕಲ ವಾದ್ಯ ಮೇಳದೊಂದಿಗೆ ಜರುಗಿತು.ರಥೋತ್ಸವಕ್ಕೂ ಪೂರ್ವದಲ್ಲಿ ಚಿಕ್ಕ ಮ್ಯಾಗೇರಿಯ ಹುನಗುಂದ ಮನೆತನದ ಬಂಧುಗಳು ಹಾಗೂ ಸಕಲ ಸದ್ಭಕ್ತರ ಕಳಸದ ಸೇವೆ ಚಿಕ್ಕಮ್ಯಾಗೇರಿ ಗ್ರಾಮದ ಪಾಟೀಲ ಹಾಗೂ ಗೌಡರ ಬಂಧುಗಳ ಹಾಗೂ ಸಕಲ ಸದ್ಭಕ್ತರ ಹಗ್ಗದ ಸೇವೆ ಪಂಚಾಕ್ಷರಯ್ಯ ಸಂಗಯ್ಯ ಹಿರೇಮಠ್ ಸಂಗನಬಸಯ್ಯ ಮುರುಗಯ್ಯ ಹಿರೇಮಠ್ ಸಿದ್ದಯ್ಯ ಮುರುಗಯ್ಯ ಹಿರೇಮಠ ಪರಯ್ಯ ಅಣ್ಣಯ್ಯ ಹಿರೇಮಠ್ ಕೊಳುರ್ ಇವರ ಬಾಳೆ ಕಂಬದ ಸೇವೆ ಗಂಗಾವತಿ ವರ್ತಕರಾದ ರುದ್ರಪ್ಪನವರು ಗಾಳಿಯವರ ಕಾಣಿಕೆ ಹೂವಿನ ಮಾಲೆ ಆಗಮಿಸಿದ ನಂತರ ಹಗ್ಗವನ್ನು ಎಳೆಯುವುದರ ಮೂಲಕ ಸಕಲವಾದ ಮೇಳದೊಂದಿಗೆ ರಥೋತ್ಸವಕ್ಕೆ
ಕಸಬಾ ಜಂಬಿಗಿಯ ರುದ್ರಮುನಿ ಶ್ರೀಗಳು ಗುಳೇದಗುಡ್ಡ ಮರಡಿಮಠದ ಕಾಡಸಿದ್ದೇಶ್ವರ ರುದ್ರಮುನಿ ಶ್ರೀಗಳು ಕೂಡಲಸಂಗಮ ಜಾತವೇದ ಮುನಿ ಶ್ರೀಗಳು ಬಿಲ್ ಕೆಲೂರ್ ಸಿದ್ದಲಿಂಗ ಶ್ರೀಗಳು ಮುಳ್ಳೂರು ಚಂದ್ರಶೇಖರ ಶ್ರೀಗಳು ಕಲಾದಗಿ ಮಹಾಂತ ದೇವರು ಮುತ್ತತ್ತಿ ವೀರ ರುದ್ರಮುನಿ ಶ್ರೀಗಳು ಕಮತಿಗಿಯ ಶಿವಕುಮಾರ ಶ್ರೀಗಳು
ಹುನಗುಂದ ಶಾಸಕ ವಿಜಯಾನಂದ ಎಸ್ ಕಾಶಪ್ಪನವರ ಯಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಶಿವಕುಮಾರ್ ಗಂಗಾಧರ ಶಾಸ್ತ್ರಿಗಳು ಹಿರೇಮಠ, ಕುಮಾರಸ್ವಾಮಿ ಮುಪ್ಪಯ್ಯ ಹಿರೇಮಠ
ಚಿತ್ತರಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಂತೇಶ ಬಾರಡ್ಡಿ ಉಪಾಧ್ಯಕ್ಷೆ ಅಕ್ಕಮಹಾದೇವಿ ಗಿರೀಶ ಪೂಜಾರಿ ಹಾಗೂ ಸದಸ್ಯರು ಸೇರಿದಂತೆ ಚಿತ್ತರಗಿ ಗ್ರಾಮದ ಗುರುಹಿರಿಯರು ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
ಜಾತ್ರೆಯ ನಿಮಿತ್ತ 8 3 2024ರಂದು ಶುಕ್ರವಾರ ರಾತ್ರಿ ಶಿವ ಭಜನೆ ನಡೆಯಿತು 9ರಂದು ಶನಿವಾರ ಬೆಳಿಗ್ಗೆ ಕರ್ತ ಗದ್ದೆಗೆ ರುದ್ರಭಿಷೇಕ ಹಾಗೂ ಅಯ್ಯಾಚಾರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ಮಧ್ಯಾಹ್ನ 12 ಗಂಟೆಗೆ ಮಹಾಗಣರಾಧನೆ ಹಾಗೂ ಜಾತ್ರೆಯ ನಿಮಿತ್ಯ ವಚನ ಸಂಗೀತ ಕಾರ್ಯಕ್ರಮ ಬಾಗಲಕೋಟೆಯ ಶ್ರೀ ಗುರು ಪಂಚಾಕ್ಷರ ಸಂಗೀತ ಶಾಲೆ ಯವರಿಂದ ನಡೆಯಿತು ಜಾತ್ರಾ ಮಹೋತ್ಸವದಲ್ಲಿ ಗುರು ಮುಪ್ಪಿನ ಸಾಮಿ ಮಠ ಸೇವಾ ಸಮಿತಿ ಅಧ್ಯಕ್ಷರು ಸದಸ್ಯರು ಎಂ ಎನ್ ಬಾವಿಮಠ ಸೇವಾ ಸಮಿತಿ ಅಧ್ಯಕ್ಷರು ಸದಸ್ಯರು ವಿಜಯ ಮಹಾಂತೇಶ್ವರ ಮಠ ಸೇವಾ ಸಮಿತಿ ಅಧ್ಯಕ್ಷರು ಸದಸ್ಯರು ಹಾಗೂ ತಿಮ್ಮಾಪುರ ಸೇರಿದಂತೆ ಗಂಗೂರ್ ಚಿಕ್ಕಮಗಿ ಪಾಪನಾಳ ಹಿರೇಮಳಗಾವಿ ಹಡಗಲಿ ಕಿರುಸೂರ ಗ್ರಾಮಗಳ ಸಕಲ ಸದ್ಭಕ್ತರು ಭಾಗವಹಿಸಿದ್ದರು ರಥೋತ್ಸವಕ್ಕೂ ಪೂರ್ವದಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಜಯಾನಂದ ಕಾಶಪ್ಪನವರ ಹಾಗೂ ಜಾತ್ರಾ ಮಹೋತ್ಸವಕ್ಕೆ ದಾಸೋಹ ಸೇವೆಗೆ ಗೈದ ನಾಲತವಾಡದ ರಾಯನಗೌಡ ಮ ತಾತರೆಡ್ಡಿ, ಗಂಗಾವತಿಯ ವರ್ತಕ ರುದ್ರಪ್ಪನವರು ಗಾಳಿ ಯವರನ್ನು ಸಮಿತಿಯಿಂದ ಸನ್ಮಾನಿಸಲಾಯಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ