ರಾಯಚೂರು ಜಿಲ್ಲೆ ಲಿಂಗಸೂಗೂರ ತಾಲೂಕಿನ ಬೆಂಡೋಣಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಗ್ರಾಮ ದೇವತೆ ಆದ ಶ್ರೀ ಗಡ್ಡಿ ಗದ್ದೆಮ್ಮ ದೇವಿ ಹಾಗೂ ಆನೆಹೊಸೂರ ದ್ಯಾಮಮ್ಮ ದೇವಿ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಬೆಂಡೋಣಿ ಗ್ರಾಮದ ಗುರುಗಳಾದ ಶ್ರೀ ಅಮರಯ್ಯ ಎಂ ಹಿರೇಮಠ ಹಾಗೂ ನಂದಿಹಾಳ ಗ್ರಾಮದ ಗುರುಗಳಾದ ಸಿದ್ದರಾಮಯ್ಯ ಗುರುವಿನ ಹಾಗೂ ಗ್ರಾಮದ ಗುರು ಹಿರಿಯರ ಅಪ್ಪಣೆ ಮೇರೆಗೆ ಬೆಂಡೋಣಿ ಗ್ರಾಮದಲ್ಲಿ ಜಾತ್ರೆ ಕಾರ್ಯಕ್ರಮ ಜರುಗುವುದು.
ಜಾತ್ರೆ ಕಾರ್ಯಕ್ರಮದ ವಿವರಗಳು ಈ ಕೆಳಗಿನಂತಿವೆ
ದಿನಾಂಕ 02-05-2024 ಗುರುವಾರ ದೇವಿಯು ಬೆಂಡೋಣಿ ಗ್ರಾಮಕ್ಕೆ ಆಗಮಿಸುವಳು ಆಗಮಿಸಿದ ನಂತರ ಅದೇ ರಾತ್ರಿ 11.30 ಕ್ಕೆ ಶ್ರೀ ಶಂಕರಲಿಂಗನ ಗುಡಿ ಹತ್ತಿರ ಅಮ್ಮ ರಥವೇರಿ ಡೊಳ್ಳು ಮತ್ತು ಹೆಣ್ಣು ಮಕ್ಕಳು ಕಳಸ ಹಿಡಿದು ಪಟಾಕಿ ಸಿಡಿಸುತ್ತಾ ಬೆಳಗಿನ ಜಾವದವರೆಗೆ ಅತ್ಯಂತ ಸಂಭ್ರಮದಿಂದ ಮೆರವಣಿಗೆ ಮೂಲಕ ದೇವಿಯು ಗುಡಿಗೆ ಆಗಮಿಸುವಳು.ನಂತರ 03-05-2024 ಶುಕ್ರವಾರದಂದು ದೇವಿಗೆ ಮೊದಲ ಊರಿನ ದೈವದ ವತಿಯಿಂದ ದೈವದ ಹುಡಿ ತುಂಬಿ ದೈವದ ಸೀರೆ ಉಡಿಸುವ ಕಾರ್ಯಕ್ರಮ ನಂತರ ಜನರು ಊರಿನ ಗುರು ಹಿರಿಯರು ಸುತ್ತ ಮುತ್ತ ಹಳ್ಳಿಯ ಸಕಲ ಸದ್ಭಕ್ತರು ದೇವಿಗೆ ಸೀರೆ ಉಡಿಸಿ ಹುಡಿ ತುಂಬುವ ಕಾರ್ಯಕ್ರಮ ಜರಗುವದು ತದನಂತರ ರಾತ್ರಿ 10-30ಕ್ಕೆ ಭಜನಾ ಪದಗಳು ಡೊಳ್ಳಿನ ಪದಗಳು ಜರುಗುವುದು ಮಾರನೇ ದಿನ 04-05-2024 ಶನಿವಾರ ದಂದು ಬೆಳಿಗ್ಗೆ ದೇವಿಗೆ ಪೂಜೆ ಕಾರ್ಯಕ್ರಮ ರಾತ್ರಿ ಡೊಳ್ಳಿನ ಪದಗಳು ಭಜನಾ ಪದಗಳು ಜರಗುವದು ಅದೇ ರೀತಿಯಾಗಿ ನಾಲ್ಕನೇ ದಿನ ದಿನಾಂಕ 05-05-2024ರಂದು ರವಿವಾರ ಮದ್ಯಾಹ್ನ 12-30 ಕ್ಕೆ ಅಮ್ಮನ ಗುಡಿ ಮುಂದೆ ಊರಿನ ಗುರು ಹಿರಿಯರು ಬೆಂಡೋಣಿ ಗ್ರಾಮದ ಅಧ್ಯಕ್ಷರು ಉಪಾಧ್ಯಕ್ಷರು ಜಾತ್ರಾ ಕಮಿಟಿಯವರ ಮತ್ತು ಮಾರುತೇಶ್ವರ ಗೆಳೆಯರ ಬಳಗ ಊರಿನ ಸಕಲ ಸದ್ಭಕ್ತರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಸಮ್ಮುಖದಲ್ಲಿ ಅಮ್ಮನ ಗುಡಿ ಮುಂದೆ ಐದು ಜೋಡಿಗಳ ಸಾಮೂವಿಕ ವಿವಾಹ ನೆರೆವೆರಿದವು ನಂತರ ಶ್ರೀ ಗುರು ಶಂಕರಲಿಂಗನ ಗುಡಿಯ ಮುಂದೆ ಅನ್ನ ಪ್ರಸಾದ ಕಾರ್ಯಕ್ರಮ ಸಕಲ ಭಕ್ತರು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿ ಅಮ್ಮನ ಕೃಪೆಗೆ ಪಾತ್ರರಾದರು ಮತ್ತೆ ರಾತ್ರಿ 10-30ಕ್ಕೆ ಡೊಳ್ಳಿನ ಪದಗಳು ಭಜನಾ ಪದಗಳು ಜರಗುವದು ನಂತರ ದಿನಾಂಕ 06-5-2024 ಸೋಮವಾರ ಸಾಯಂಕಾಲ ದೇವಿಯನ್ನು ವಾಪಸ್ಸು ಕಳಿಸುವ ಕಾರ್ಯಕ್ರಮ ನಡೆಯುವದು ಕಾರಣ ಭಕ್ತಾದಿಗಳು ತನು ಮನದಿಂದ ಸೇವೆ ಸಲ್ಲಿಸಿ ಶ್ರೀ ದೇವಿ ಯವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ವರದಿ ನಿರಂಜನ ಅಂಗಡಿ




















