ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮೂಲಭೂತ ಸೌಲಭ್ಯಗಳೇ ಕಾಣದ ಜೇವರ್ಗಿ ತಾಲೂಕಿನ ಭಗವಂತರಾಯ ಲೇಔಟ್:ಸಿದ್ದಲಿಂಗ ಪೂಜಾರಿ ಹಾಲಗಡ್ಲಾ ಆಕ್ರೋಶ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನ್ಯಾಯಾಲಯದ ಪಕ್ಕದಲ್ಲಿರುವ ನೂರಂದೇಶ್ವರ ಕಾಲೇಜಿನ ಎದುರುಗಡೆ ಇರುವ ಭಗವಂತರಾಯ ಲೇಔಟ್ ನಲ್ಲಿ ಇದುವರೆಗೂ ಈ ವಾರ್ಡಿನಲ್ಲಿ ಸಿಸಿ ರಸ್ತೆ ಅಥವಾ ಚರಂಡಿ ನಿರ್ಮಾಣ ಮಾಡಿರುವುದಿಲ್ಲ ಈ ವಾರ್ಡಿನ ಪಟ್ಟಣ ಪಂಚಾಯಿತಿಯಿಂದ ಆಯ್ಕೆಯಾದ ಸದಸ್ಯರು ಅಥವಾ ಅಧ್ಯಕ್ಷರು ಇತ್ತ ಕಡೆ ಗಮನ ಹರಿಸದಿರುವದು ವಿಷಾದನೀಯ ಸಂಗತಿ.
ರಾತ್ರಿಯ ಸಮಯದಲ್ಲಿ ವೃದ್ಧರು ಅಥವಾ ಮಕ್ಕಳು ಹೊರಗಡೆ ಬರಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಯಾಕೆಂದರೆ ಈ ವಾರ್ಡಿನಲ್ಲಿ ಸರಿಯಾದ ವಿದ್ಯುತ್ ದೀಪದ ವ್ಯವಸ್ಥೆ ಇರುವುದಿಲ್ಲ ಇದುವರೆಗೂ ಒಂದು ಸಿ.ಸಿ ರಸ್ತೆಯು ಕೂಡಾ ನಿರ್ಮಾಣ ಮಾಡಿಲ್ಲ ಈ ವಾರ್ಡಿನಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಪಟ್ಟಣ ಪಂಚಾಯತ್ ಅಧಿಕಾರಿಯಾದ ಶಂಭುಲಿಂಗ ದೇಸಾಯಿ ಅವರಿಗೆ ಹಲವಾರು ಬಾರಿ ಮನವಿ ಪತ್ರವನ್ನು ಸಲ್ಲಿಸಿದ್ದು ಅಲ್ಲದೆ ಹಲವಾರು ಬಾರಿ ಈ ವಿಷಯದ ಕುರಿತು ಪಟ್ಟಣ ಪಂಚಾಯತ್ ಅಧಿಕಾರಿ ಗಮನಕ್ಕೂ ತರಲಾಗಿದ್ದರು ಕೂಡಾ ಜಾಣ ಕುರುಡರಂತೆ ವರ್ತಿಸುತ್ತಿರುವುದು ಯಾವ ಪುರುಷಾರ್ಥಕ್ಕೊ ಗೊತ್ತಾಗುತ್ತಿಲ್ಲ ಶಾಸಕರಾದ ಡಾ.ಅಜಯ್ ಸಿಂಗ್ ಅವರ ಗಮನಕ್ಕೂ ತರಲಾಗಿದ್ರೂ ಕೂಡಾ ಯಾವುದೇ ರೀತಿಯಿಂದ ಪ್ರಯೋಜನವಾಗಿಲ್ಲ ಇನ್ನು ಮುಂದಾದರು ಕೂಡಲೇ ಎಚ್ಚೆತ್ತುಕೊಂಡು ಈ ನಮ್ಮ ವಾರ್ಡಿಗೆ ಸಿಸಿ ರಸ್ತೆ ನಿರ್ಮಾಣ ವಿದ್ಯುತ್ ದ್ವೀಪದ ವ್ಯವಸ್ಥೆ ಮಾಡಬೇಕು ಒಂದು ವೇಳೆ ನಿರ್ಲಕ್ಷ ವಹಿಸಿದರೆ ಭಗವಂತರಾಯ ಲೇಔಟ್ ನ ಸಮಸ್ತ ನಾಗರಿಕರೊಂದಿಗೆ ಪಟ್ಟಣ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪಟ್ಟಣ ಪಂಚಾಯತಿಗೆ ಬೀಗ ಜಡಿದು ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಭಗವಂತ ರಾಯ್ ಲೇಔಟ್ ನ ನಿವಾಸಿಯಾದ ಸಿದ್ದಲಿಂಗ/ಹಣಮಂತ ಪೂಜಾರಿ ಹಾಲಗಡ್ಲಾ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಖಡಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ