ಬೆಳಗಾವಿ:ಪ್ರವಾಹ ಪರಿಶೀಲನೆಗೆ ಗೋಕಾಕ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಇಂದು ನಗರದ ಗೃಹಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ನಂತರ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಭಾಗವಹಿಸಿದ ಬಳಿಕ ಗೋಕಾಕ ನಗರದ ಲೋಳಸೂರ ಸೇತುವೆಗೆ ಭೇಟಿ ನೀಡಿದರು.
ಈ ವೇಳೆ ಲೋಕೋಪಯೋಗಿ ಇಲಾಖೆಯ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ,ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್,ಚಿಕ್ಕೊಡಿಯ ಸಂಸದರಾದ ಹಾಗೂ ಸಹೋದರಿ ಶ್ರೀ ಪ್ರಿಯಾಂಕ್ ಜಾರಕಿಹೊಳಿ ,ವಿಧಾನ ಪರಿಷತ್ ಸದಸ್ಯರಾದ ಶ್ರೀ ಲಖನ್ ಜಾರಕಿಹೊಳಿ, ಶಾಸಕರುಗಳಾದ ಶ್ರೀ ಆಸೀಫ್ ಸೇಠ್, ಶ್ರೀ ಬಾಬಾಸಾಹೇಬ ಪಾಟೀಲ, ಶ್ರೀ ವಿಶ್ವಾಸ ವೈದ್ಯ, ಸಹೋದರ ಹಾಗೂ ಯುವ ಮುಖಂಡರಾದ ರಾಹುಲ್ ಜಾರಕಿಹೊಳಿ ಅವರು ಉಪಸ್ಥಿತರಿದ್ದರು.
ವರದಿ ಧರಿಯಪ್ಪ ಎಲ್ ಕೆ



















