ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಯಡ್ರಾಮಿ ತಾಲೂಕಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಕಾರ್ಯ ಮತ್ತು ಪಾಲನ ಉಪ ವಿಭಾಗ ಅಧಿಕಾರಿಗಳಿಗೆ ಜೈ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜೈ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಅಮರನಾಥ್ ಸಾಹೂ ಕುಳಗೇರಿ ಅವರು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು ಅಧಿಕಾರಿಗಳೇ ವ್ಯವಸ್ಥೆಯನ್ನು ಸರಿಪಡಿಸಿ ಇಲ್ಲ ಕುರ್ಚಿ ಖಾಲಿ ಮಾಡಿ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಈ ಸಂದರ್ಭದಲ್ಲಿ ಅವ್ಯವಸ್ಥೆ ವಿರುದ್ಧ ಧಿಕ್ಕಾರ ಕೂಗಿದರು ಹಾಗೂ ಯಡ್ರಾಮಿ ತಾಲೂಕಿನ ವ್ಯಾಪ್ತಿಯ ಪ್ರತಿ ಹಳ್ಳಿ ಹಳ್ಳಿಯಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು ಕೂಡಲೇ ಸರಿಪಡಿಸುವಂತೆ ತಾಕಿತು ಮಾಡಿದರು ಅಷ್ಟೇ ಅಲ್ಲದೆ ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ನೀಡಲು ಲೈನ್ ಮ್ಯಾನ್ ಗಳು ಹಣ ಸುಲಿಗೆ ಮಾಡುತ್ತಿರುವುದು ಕಂಡುಬಂದಿದ್ದು ಇದನ್ನು ಸರಿಪಡಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು ಅಷ್ಟೇ ಅಲ್ಲದೆ ತಮ್ಮ ಇಲಾಖೆಯ ಸಿಬ್ಬಂದಿಗಳು ಕರ್ತವ್ಯ ಪಾಲನೆಯಲ್ಲಿ ಕರ್ತವ್ಯ ಲೋಪವೆಸಗುತ್ತಿರುವುದು ಕಂಡುಬಂದಿದ್ದು ಇದು ಸರಿಪಡಿಸಬೇಕೆಂದು ಈ ಸಂದರ್ಭದಲ್ಲಿ ತಿಳಿ ಹೇಳಿದರು ಹಾಗೂ ತಮ್ಮ ಇಲಾಖೆಯಲ್ಲಿ ಖಾಸಗಿ ವ್ಯಕ್ತಿಗಳಿಗೆ ತಮ್ಮ ಇಲಾಖೆಯ ಸಿಬ್ಬಂದಿಗಳು ಬಳಸುತ್ತಿರುವುದು ಕಂಡುಬಂದಿದ್ದು ಕಾನುನಾತ್ಮಕವಾಗಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದ್ದರು ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಲೋಕಾಯುಕ್ತ ಇಲಾಖೆಗೆ ದೂರು ಸಲ್ಲಿಸಲಾಗುವುದು ಎಂದು ಈ ಸಂದರ್ಭದಲ್ಲಿ ಮಾತನಾಡಿದರು ಅದೇ ರೀತಿಯಾಗಿ ಹೊಸ ಬಡಾವಣೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡಬೇಕು ಅದೇ ರೀತಿಯಾಗಿ ಪ್ರತಿ ಟಿಸಿಗಳಿಗೂ ರಕ್ಷಾ ಕವಚ ಅಳವಡಿಸಬೇಕು ಒಂದು ವೇಳೆ ಏನಾದರೂ ಅನಾಹುತವಾದರೆ ಅಥವಾ ಪ್ರಾಣ ಹಾನಿಯಾದರೆ ತಮ್ಮ ಇಲಾಖೆಯ ಅಧಿಕಾರಿಯನ್ನು ನೇರ ಹೊಣೆಗಾರನಾಗಿ ಮಾಡಿ ದೂರು ಸಲ್ಲಿಸಿ ಅಮಾನತು ಆಗುವವರೆಗೂ ಹೋರಾಟ ಮಾಡಲಾಗುವುದು ಎಂದು ತಾಲೂಕ ಅಧ್ಯಕ್ಷರಾದ ಅಮರನಾಥ್ ಸಾಹು ಕುಳಗೇರಿ ಅವರು ಮನವಿ ಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಯಡ್ರಾಮಿ ಪೊಲೀಸ್ ಠಾಣಾ ಆರಕ್ಷಕ ಅಧಿಕಾರಿ ವಿಶ್ವನಾಥ್ ಮುದರೆಡ್ಡಿ ಅವರು ಭಾಗವಹಿಸಿದ್ದರು ಹಾಗೂ ಶಫೀ ಉಲ್ಲಾ ದಖನಿ ಈರಣ್ಣ ಭಜಂತ್ರಿ ಲಾಳೆ ಸಾಬ್ ಮನಿಯರ್ ಹಣಮಂತ್ ಗುತ್ತೇದಾರ್ ಜಗದೀಶ್ ದ್ಯಾಮ ಹಣಮಂತರಾಯ ಕಡಕೋಳ ಸಲೀಂ ಕಡಕೋಳ ಅಕ್ಷಯ್ ಕುಮಾರ್ ಯಡ್ರಾಮಿ ನಾಗು ದೊಡ್ಡಮನಿ ಹಾಗೂ ಸ್ಥಳೀಯ ನಾಗರಿಕರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.




















