ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಗುಂಡಿಮಯವಾಗಿ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಆಗಿತ್ತು, ಇದರ ಬಗ್ಗೆ ಕರುನಾಡ ಕಂದ ಸುದ್ದಿ ಪ್ರಕಟಿಸಿತ್ತು ಹಾಗೂ ಕರ್ನಾಟಕ ಸರ್ಕಾರದ ಪಬ್ಲಿಕ್ ಗ್ರೇವಿಯನ್ಸ್ ಪೋರ್ಟಲ್ ಜನಸ್ಪಂದನ ಆನ್ಲೈನ್ ವಿಭಾಗಕ್ಕೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ದೂರು ಕೂಡಾ ಸಲ್ಲಿಸಿತ್ತು ವರದಿಯ ಪರಿಣಾಮವಾಗಿ ಕೆಲವು ಕಡೆ ಮಾತ್ರ ರಸ್ತೆ ಗುಂಡಿಗಳನ್ನು ಡಾಂಬರ್ ಮೂಲಕ ಮುಚ್ಚಲಾಗಿದೆ. ವಿಶೇಷವಾಗಿ ಮಹಾಲೆ ಮಿಲ್ ಮೂಲಕ ಕರಗಿನಕೊಪ್ಪ ಕಡೆ ತೆರಳುವ ಪ್ರಯಾಣಿಕರಿಗೆ ಸಂಚಾರ ದುಸ್ಥರ ವಾಗಿತ್ತು ಈಗ ಅಲ್ಲಿಯ ಸಮಸ್ಯೆ ಬಗೆಹರಿದಿದೆ,ಇನ್ನೂ ಬಾಚನಕಿ ರಸ್ತೆ ಹಾಗೂ ಬಂಕಾಪುರಕ್ಕೆ ತೆರಳುವ ರಸ್ತೆಯ ಗುಂಡಿಗಳು ಬಾಕಿ ಇದ್ದು,ಅರ್ಧಂಬರ್ಧ ಕಾಮಗಾರಿ ಪೂರ್ಣಗೊಳ್ಳಬೇಕಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.