ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಾ ಸೋಲದಿದ್ದರೆ ಗೆಲ್ಲುತ್ತಿರಲಿಲ್ಲ: ತಿಮ್ಮಣ್ಣ ಹುಲುಮನಿ

ವಿಜಯನಗರ ಜಿಲ್ಲೆ ಕೊಟ್ಟೂರು: ಜೀವನಕ್ಕೆ ಒಂದು ಬಹುದೊಡ್ಡ ಕನಸಿರಬೇಕು, ಕನಸಿಗೆ ತಕ್ಕ ಪ್ರಯತ್ನವಿರಬೇಕು ವಿದ್ಯಾರ್ಥಿಗಳು ನಿಮ್ಮ ಜೀವನದಲ್ಲಿ ಯಶ್ಸಸ್ಸಿನ ಹಾದಿಯ ಪ್ರಯತ್ನದ ಪ್ರತಿರೂಪವಾಗಿ ನೀವು ಯಾವಾಗಲೂ ದಿನಕ್ಕೆ 10-12 ಗಂಟೆಗಳು ಸತತವಾಗಿ ನಿಮ್ಮ ಗುರಿ ಮುಟ್ಟುವ ಪ್ರಯತ್ನದಲ್ಲಿ ನೀವು ಇರಬೇಕು ಎಂದು ದಾವಣೆಗೆರೆ – ಹರಿಹರ ಅರ್ಬನ್ ಡೆವಲಪ್‌ಮೆಂಟ್ ಆಯುಕ್ತರಾದ ಶ್ರೀ ತಿಮ್ಮಣ್ಣ ಹುಲುಮನಿರವರು ತಿಳಿಸಿದರು.
ದಿನಾಂಕ 09-11-2024 ರಂದು ಪಟ್ಟಣದ ಇಂದು ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪುಸ್ತಕ ಓದಿದರೆ ಜೀವನ ಪೂರ್ತಿ ತಲೆ ಎತ್ತುವಂತೆ ಮಾಡುತ್ತದೆ, ಆದರೆ ಮೊಬೈಲ್ ನೋಡಿದರೆ ತಲೆ ಎತ್ತದಂತೆ ಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಪುಸ್ತಕದ ಮಹತ್ವನ್ನು ತಿಳಿಸಿದರು. ನಂತರ ತಮ್ಮ ಬಾಲ್ಯದ ದಿನಗಳಿಂದ ಪ್ರಸ್ತುತ ಆಯುಕ್ತರ ಹುದ್ದೆಗೆ ಬರುವವರೆಗೂ ತಮ್ಮ ಜೀವನದ ಎಲ್ಲಾ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಸಾಧನೆಗೆ ಬಡತನ ಎಂದೂ ಅಡ್ಡಿ ಬರುವುದಿಲ್ಲವೆಂದು ತಿಳಿಸಿದರು. ನಾನು ಇನ್ನೂ ಏನಾದರೂ ಸಾಧನೆ ಮಾಡಬೇಕೆಂಬ ಹಠ ಈಗಲೂ ಕಾಡುತ್ತಿದೆ. ಅದಕ್ಕಾಗಿ ಈಗಲೂ ಸಹ ದಿನಕ್ಕೆ 4 ತಾಸು ಓದುತ್ತೇನೆ. ಕಾರಣ ಸಾಧಸಿಬೇಕೆಂಬ ಎಂಬ ಹಂಬಲ. ಈಗ ನಾನು ಕೆ.ಎ.ಎಸ್. ಮಾಡಿ ತಹಶೀಲ್ದಾರ ಆಗಿ, ಎ.ಸಿ. ಆಗಿ ಈಗ ದಾವಣಗೆರೆ ಅರ್ಬನ್ ಡೆವಲಪ್‌ಮೆಂಟ್ ಕಮೀಷನರ್ ಆಗಿದ್ದರೂ ಸಹ ಇನ್ನೂ ನನ್ನ ಪ್ರಯತ್ನ ಮಾಡುತ್ತಲೇ ಇದ್ದೇನೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವೇದಿಕೆಯ ಮೇಲೆ ಸಂಸ್ಥೆಯ ಆಡಳಿತಾಧಿಕಾರಿಗಳಾದ ವೀರಭದ್ರಪ್ಪ ಹೆಚ್.ಎನ್., ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪವನ್ ಕುಮಾರ್ ಹೆಚ್., ಪದವಿ ಕಾಲೇಜಿನ ಪ್ರಾಂಶುಪಾಲರಾದ ವಾಗೀಶಯ್ಯ ಪಿ. ಎಂ., ಹಾಜರಿದ್ದರು. ಮಾನ್ಯ ಆಯುಕ್ತರಿಗೆ ಸಂಸ್ಥೆಯ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!