ಬಾಗಲಕೋಟೆ :11-11-2024 ರಂದು, ಕರ್ನಾಟಕ ರಾಜ್ಯ ರೈತ ಸಂಘ ಗದ್ದನಕೇರಿ ಕ್ರಾಸ್ ನಲ್ಲಿ 3 ಗಂಟೆಗೆ ಏಕಾಏಕಿ ರೈತರು ಜಮಾಯಿಸಿ ಸರ್ಕಲ್ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿದರು, ರೈತರ ಕಬ್ಬಿನ ಬಿಲ್ ಕಟ್ ಬಾಕಿ ಇರುವುದರಿಂದ, ನವಂಬರ್ 26ರಂದು ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಿವೆ, ಸರ್ಕಾರ ಪಾರ್ಟಿ ಫಂಡ್ ಚಾಲು ಮಾಡಬೇಕಿತ್ತು, ಸರಕಾರ ದಿಢೀರನೆ ಬದಲಾವಣೆ ಮಾಡಲಾಯಿತು, ನಿರ್ದಿಷ್ಟ ಬಿಲ್ ಘೋಷಣೆ ಮಾಡಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಶ್ರೀಶೈಲ್ ನಾಯಕ್, ಉಪಾಧ್ಯಕ್ಷರು ಕುಮಾರ್ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಎಚ್ಚರಿಕೆ ಕೊಡುತ್ತೇವೆ, ಕೂಡಲೇ ಕಬ್ಬು ಬೆಳೆಗಾರರು ಕರೆಸಿ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರನ್ನು ಕರೆಸಿ ಬಾಕಿ ಇರೋ ಹಣವನ್ನು ವಸೂಲಿ ಮಾಡಿಕೊಡಬೇಕೆಂದು ಮತ್ತು ಮುಂದಿನ ಬಿಲ್ ಘೋಷಣೆ ಮಾಡುವರಿಗೂ ಧರಣಿ ಕೈ ಬಿಡುವುದಿಲ್ಲ, ಎಂದು ಕರ್ನಾಟಕ ರಾಜ್ಯ ರೈತ ಸಂಘ ,ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಕಡಕ್ ಸಂದೇಶ ರವಾನಿಸಿದರು.
ವರದಿ : ಎಸ್ ಎಸ್ ಬಾಳಿಕಾಯಿ




















