ನಾ ಮೆಚ್ಚಿದ ಹುಡುಗ
ಮಲೆನಾಡಿನ ಚೆಲುವ
ರಾಮನ ಅವತಾರ
ನನ್ನ ಹುಡುಗ
ನಿನ್ನ ತೋಳಲ್ಲಿ
ಬಂದಿಯಾಗುವ ಅಸೆ
ಪ್ರಿಯತಮ
ಮಲೆನಾಡಿನ ಸುಂದರಾನೇ
ಕೇಳುವೆಯಾ
ಸಾವಿರವಿದೆ ಮಾತುಗಳು
ಒಮ್ಮೆ ಬರುವೆಯಾ
ಸನಿಹಕ್ಕೆ ಗೆಳೆಯ
ನೀ ಬಿಟ್ಟು ಹೋದ
ನೆನಪುಗಳು
ಕನಸಾಗಿ ಕಾಡಿಸಿದೆ
ಗೋಳು ಹಿಡಿಸಿದ ಹೃದಯಕ್ಕೆ
ಮತ್ತೆ ಕಾಡುವೆ ನೀನು
ತಿರುಗಿ ನೋಡದೆ ಹೋಗಿ
ನಿನ್ನ ಸ್ವಪ್ನದಲ್ಲಿ
ಬಾಗಿಯಾಗಬಹುದೆ ನಾನು
ಗೆಳೆಯ
ಮರಳಿ ಬರುವೆಯಾ
ಮಳೆಯಾಗಿ ನನ್ನ
ಈ ಮನಕೆ
-ರತ್ನಾ
ಹೊನ್ನನಾಯಕನಹಳ್ಳಿ



















