ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿದ್ಯಾವಂತರಲ್ಲೇ ಸಂಸ್ಕಾರದ ಕೊರತೆ ಇದೆ

ಶಿವಮೊಗ್ಗ : ನಮ್ಮಲ್ಲಿ ಸರಿಯಾದ ಸಂಸ್ಕಾರ ಇಲ್ಲದಿದ್ದರೆ ಪಡೆದ ಶಿಕ್ಷಕ್ಕೇನು ಬೆಲೆ? ಇಂದು ಪಠ್ಯದ ಜೊತೆ ಓದಿ ಹೆಚ್ಚಿನ ಅಂಕಪಡೆಯುವ ಮಕ್ಕಳಿಗೆ ಸಂಸ್ಕಾರ ಕಲಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪಠ್ಯದ ಜೊತೆ ಮಕ್ಕಳಲ್ಲಿ ನೈತಿಕತೆ, ಧಾರ್ಮಿಕತೆ, ಆದ್ಯಾತ್ಮಿಕತೆ ಹಾಗೂ ಸಾಮಾಜಿಕ ಪ್ರಜ್ಞೆ ಮೂಡಿಸುವ ಕೆಲಸ ಅಗಬೇಕು ಎಂದು ತರಳಬಾಳು ಜಗದ್ಗುರು ಸಾಣೇಹಳ್ಳಿ ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ಅವರಿಂದು ಮಧ್ಯಾಹ್ನ ಅನುಪಿನಕಟ್ಟೆಯ ಶ್ರೀರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ನಡೆದ ಮಕ್ಕಳಿಂದ ತಂದೆ ತಾಯಿಯರಿಗೆ ಪಾದಪೂಜೆ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇಂದಿನ ಜಗತ್ತಿನಲ್ಲಿ ಭ್ರಷ್ಟಾಚಾರ ದುರಾಚಾರಗಳು ಹೆಚ್ಚುತ್ತಿದ್ದು, ಇದನ್ನು ವಿದ್ಯೆ ಇಲ್ಲದ ಯಾವುದೋ ಕೂಲಿಕಾರ, ಕೃಷಿಕ ಮಾಡೋದಿಲ್ಲ. ಸಾಕಷ್ಟು ದೊಡ್ಡ ದೊಡ್ಡ ವಿದ್ಯಾಭ್ಯಾಸ ಮಾಡಿ ಪದವಿ ಪಡೆದವರು ಇಂತಹ ದುರಾಚಾರಗಳಿಗೆ ಕಾರಣರಾಗುತ್ತಿದ್ದಾರೆ. ಇದಕ್ಕೆ ಕಾರಣ ಅವರಲ್ಲಿ ಸಂಸ್ಕಾರ ಇಲ್ಲದಿರುವುದು ಅವರಿಗೆ ಸಕಾಲದಲ್ಲಿ ಸಂಸ್ಕಾರ ದೊರೆಯದಿರುವುದು ಎಂದರೆ ತಪ್ಪಾಗಲಿಕ್ಕಿಲ್ಲ. ಈ ನಿಟ್ಟಿನಲ್ಲಿ ರಾಮಕೃಷ್ಣ ಶಾಲೆಯ ಕಾರ್ಯಕ್ರಮ ನಿಜಕ್ಕೂ ಅರ್ಥಗರ್ಭಿತವಾದದ್ದು ಎಂದರು.
ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ಚೂಡಾಮಣಿಯಾಗು, ಜಗಕ್ಕೆ ಜ್ಯೋತಿಯಾಗು ಕಂದ ಎಂದ ತಾಯಿಯ ಮಾತನ್ನು ಮಕ್ಕಳು ಅಳವಡಿಸಿಕೊಳ್ಳಬೇಕು ಅದಕ್ಕೆ ಪೋಷಕರು ಸಹ ಪೂರಕವಾದ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು. ಮಕ್ಕಳು ಮೊದಲು ತಂದೆ ತಾಯಿಯರನ್ನು ಅನುಕರಿಸುತ್ತಾರೆ ಇಲ್ಲಿಯವರೆಗೆ ಮಾಡಿದ ದುರಾಭ್ಯಾಸಗಳನ್ನು ಇಂದಿನಿಂದಲಾದರೂ ಬಿಟ್ಟು ಬಿಡುವ ಬಿಡುವ ಕಂಕಣ ತೊಟ್ಟುಕೊಳ್ಳಿ ಎಂದರು.
ಇಂದಿನ ದಿನಮಾನಗಳಲ್ಲಿ ಕೆಲವರ ದೇಹ ಕೊಳಚೆಗುಂಡಿಯಾಗಿದೆ. ಕುಡಿಯಬಾರದನ್ನು ಕುಡಿಯುವುದು, ತಿನ್ನಬಾರದನ್ನು ತಿನ್ನೋದು ಹೆಚ್ಚಾಗಿರುವುದು ಇದಕ್ಕೆ ಕಾರಣ. ಹಾಗಾಗಿಯೇ ಭಗವಂತನ ಒಲುಮೆಗೆ ಮೀಸಲಾಗಿರುವ ಶರೀರವನ್ನು ಭಗವಂತನಿಗೆ ಅರ್ಪಿಸಲು ಅದು ಪವಿತ್ರವಾಗಿರಬೇಕು ಎಂದು ತಿಳಿಸಿದರು.

ತಂದೆ, ತಾಯಿ, ಗುರುಗಳಿಗೆ ಸದಾ ಗೌರವಿಸಿದರೆ ಎಂದಿಗೂ ಅಪಕೀರ್ತಿ ಬರೊಲ್ಲ- ಜಿ.ಎಸ್ ನಟೇಶ್
ತಾಯಿ ಜೀವ ಕೊಡುತ್ತಾಳೆ, ತಂದೆ ಜೀವನ ಕೊಡುತ್ತಾನೆ, ಗುರುಗಳು ಮಾರ್ಗದರ್ಶನ ಕೊಡುತ್ತಾರೆ. ಎಲ್ಲಿವರೆಗೆ ಈ ಮೂವರನ್ನು ನೀವು ಗೌರವಿಸುವುದಿಲ್ಲವೋ ಅಲ್ಲಿಯವರೆಗೆ ನಿಮಗೆ ಅಪಕೀರ್ತಿ ಕಟ್ಟಿಟ್ಟ ಬುತ್ತಿ ಎಂದು ಪ್ರವಚನಕಾರ ಹಾಗೂ ವಾಗ್ಮಿ ಜಿಎಸ್ ನಟೇಶ್ ತಿಳಿಸಿದರು.
ಸಂಸ್ಕಾರ ನಮ್ಮನ್ನು ಬಾಳಿಸುತ್ತದೆ, ಸಂಸ್ಕಾರ ಪಡೆದರೆ ಮಾತ್ರ ವ್ಯಕ್ತಿತ್ವ ಬೆಳೆಯಲು ಸಾಧ್ಯ. ಮಕ್ಕಳಿಂದ ಏನನ್ನೂ ನಿರೀಕ್ಷಿಸದೇ ಬೆಳೆಸುವ ಪೋಷಕರ ಕರ್ತವ್ಯವನ್ನು ನೀವು ಕಣ್ಣಾರೆ ಕಂಡಿದ್ದೀರಿ. ಅದನ್ನ ಗೌರವಿಸಿ ಎಂದರು.
ರಾಮಾಯಣ ಮಹಾಭಾರತ ಮತ್ತು ಇದಿನ ದಿನಮಾನಗಳಲ್ಲಿ ದೇಶಗಳ ಮದ್ಯ ನಡೆಯುತ್ತಿರುವ ಕದನಗಳನ್ನು ಗಮನಿಸಿದರೆ ಅದರಿಂದ ಯಾರಿಗೆ ಒಳ್ಳೆಯದಾಗುತ್ತದೆ. ಒಳ್ಳೆಯ ಕೆಲಸದಿಂದ ಮಾತ್ರ ಎಲ್ಲೆಡೆ ನೆಮ್ಮದಿ ಲಭಿಸುತ್ತದೆ. ಒಳ್ಳೆಯ ಕೆಲಸ ಮಾಡುವ ಮೂಲಕ ಜನರಲ್ಲಿ ನಮ್ಮನ್ನು ನಾವು ಬೆಳೆಸಿಕೊಳ್ಳಬಹುದು ಎಂದರು.
ಸುಬ್ರಾಯ ಭಟ್ಟರ ಪೌರೋಹಿತ್ಯದಲ್ಲಿ ಏಳು ನೂರಕ್ಕೂ ಹೆಚ್ಚು ಮಕ್ಕಳು ತಂದೆ ತಾಯಿಯರ ಪಾದಪೂಜೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಹಿಂದಿನ ವಿದ್ಯಾರ್ಥಿ, ಪ್ರಸ್ತುತ ಸರ್ಜಿ ಆಸ್ಪತ್ರೆಯ ಡಾ. ಸುಮನ್ ಪಟೇಲ್ ಜಿ ಎಚ್ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ಅಧ್ಯಕ್ಷ ಡಾ. ಡಿ ಆರ್ ನಾಗೇಶ್ ವಹಿಸಿದ್ದು, ಸದಸ್ಯ ಸಿಎಂ ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ರೂವಾರಿ, ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ವೆಂಕಟರಮಣ, ಕೋ ಆರ್ಡಿನೇಟರ್ ಗಳಾದ ಕೆಎಚ್ ಅರುಣ್, ಶರತ್ ಕೆ.ಡಿ. ಹಾಗೂ ಇತರರು ಉಪಸ್ಥಿತರಿದ್ದರು.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!