ಕಲಬುರಗಿ/ಚಿತ್ತಾಪುರ: ನಾಲವಾರ ವಲಯದ ಸುಕ್ಷೇತ್ರ ಸುಗೂರ (ಎನ್) ಗ್ರಾಮದ ಸದ್ಗುರು ಶ್ರೀ ಭೋಜಲಿಂಗೇಶ್ವರರ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ದಿವ್ಯ ಸಾನಿಧ್ಯದಲ್ಲಿ ಅಭಿನವ ಶ್ರೀ ಡಾ.ಕುಮಾರ ಭೋಜರಾಜನ 29 ನೇ ವರ್ಷದ ಜನ್ಮ ದಿನದ ನಿಮಿತ್ತ ಇದೇ ಜನೆವರಿ 3 ರಂದು ಶುಕ್ರವಾರ ದಿನದಂದು ಸಂಜೆ -5 ಗಂಟೆಗೆ ಶ್ರೀ ಮಠದ ಆವರಣದಲ್ಲಿ ‘ 1008″ ಜನ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ನಾಣ್ಯದ ತುಲಾಭಾರ ನಡೆಯಲಿದೆ. ಬೆಳಿಗ್ಗೆ ಭೋಜಲಿಂಗೇಶ್ವರರ ಕತೃ ಗದ್ದುಗೆಗೆ ರುದ್ರಾಭೀಷೇಕ ಬಿಲ್ವಾರ್ಚನೆ, ಮಹಾ ಮಂಗಳಾರತಿ ಪೂಜೆ ಜರುಗಲಿದೆ. ಸಂಜೆ ಶ್ರೀ ಮಠದ ಆವರಣದಲ್ಲಿ ಜನ್ಮ ದಿನದ ನಿಮಿತ್ತ 1008 ಜನ ಸುಮಂಗಲಿಯರಿಗೆ ಅರಿಶಿಣ, ಕುಂಕುಮ, ಹೂವು, ಹಣ್ಣು, ಕುಪ್ಪಸ ಖಣ , ಬಳೆ, ಕೊಬ್ಬರಿ ಬಟ್ಟಲುಗಳಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯುವುವದು. ನಂತರ ನಡೆಯುವ ಧರ್ಮ ಸಭೆಯಲ್ಲಿ ಶ್ರೀ ಡಾ.ಕುಮಾರ ಭೋಜರಾಜರಿಗೆ ನಾಣ್ಯದ ಮತ್ತು ಸೇಬು ಹಣ್ಣು , ಬಾಳೆ ಹಣ್ಣು ಮತ್ತು ಕುಪ್ಪಸ ಕಣದಿಂದ ತುಲಾಭಾರ ಜರುಗುವುದು. ಸಮಸ್ತ ಶ್ರೀ ಭೋಜಲಿಂಗೇಶ್ವರ ಮಠದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಅಭಿನವ ಶ್ರೀ ಡಾ.ಕುಮಾರ ಭೋಜರಾಜನ ಜನ್ಮ ದಿನ ಆಚರಣೆಯಲ್ಲಿ ಅನೇಕ ರಾಜಕೀಯ ಗಣ್ಯರು ಭಾಗವಹಿಸುವರು. ಪೂಜ್ಯರ ಹುಟ್ಟು ಹಬ್ಬಕ್ಕೆ ತಾವೆಲ್ಲರೂ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಶ್ರೀ ಮಠದ ಸದ್ಬಕ್ತರಾದ ಶ್ರೀ ವಿಶ್ವನಾಥ ಪಾಟೀಲ ಸುಗೂರ ಎನ್, ಶ್ರೀ ಭೀಮರೆಡ್ಡಿಗೌಡ ಪಾಟೀಲ ಕುರಾಳ ಸುಗೂರ ಎನ್, ಸಿದ್ದರಾಜ ಪಾಟೀಲ ಬೆನಕನಹಳ್ಳಿ, ಬಾಬು ಪಾಟೀಲ ಸುಗೂರ ಎನ್ . ಪ್ರವೀಣ ಪಾಟೀಲ ತುಮಕೂರು, ರಾಜೇಂದ್ರ ನಾಯ್ಕೊಂಡಿ, ಸಿದ್ದುಗೌಡ ಕುರಾಳ ಹಾಗೂ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಪತ್ರಿಕೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




















