ವಿಜಯನಗರ/ ಕೊಟ್ಟೂರು: ಕನ್ನಡ ಭಾಷೆಯ ಸಂಸ್ಕೃತಿ, ಸಂಪ್ರದಾಯ ಹಾಗೂ ನೆಲ ಜಲ ಗಡಿ ರಕ್ಷಣೆಗೆ ನವ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆಯು ಕಂಕಣ ಬದ್ಧವಾಗಿದೆ. ಸಮಾಜಮುಖಿ ಚಿಂತನೆಯ ಜೊತೆಗೆ ವರ್ತಮಾನ ಸಮಸ್ಯೆಗಳಿಗೆ ಸ್ಪಂದಿಸಲು ಸಕ್ರಿಯವಾಗಿ ಹೋರಾಟ ಮಾಡುವ ಮೂಲಕ ಕನ್ನಡ ತಾಯಿಯ ಋಣ ತೀರಿಸಲು ಇದೊಂದು ಉತ್ತಮ ಅವಕಾಶ, ನಾಡಿನ ಪ್ರಗತಿ ವಿವಿಧತೆಯಲ್ಲಿ ಏಕತೆ ಶಾಂತಿ ವ್ಯವಸ್ಥೆ ಮತ್ತು ಸರ್ವ ಧರ್ಮ ಸಮನ್ವಯತೆಗೆ ಸಕ್ರಿಯವಾಗಿ ದುಡಿಯುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ ಈ ಹಿನ್ನೆಲೆಯಲ್ಲಿ, ನವ ಕರ್ನಾಟಕ ನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಮಂಜುನಾಥ ಬಿ. ಹಾಗೂ ಸಂಘಟನೆಯ ಜಿಲ್ಲಾಧ್ಯಕ್ಷರಾದ ಜಿ ಗಣೇಶ್ ಅಲಬೂರು, ಎಸ್ ಅವಿನಾಶ್ ನವ ಕರ್ನಾಟಕ ರಕ್ಷಣಾ ವೇದಿಕೆ (ಕಲ್ಯಾಣ ಕರ್ನಾಟಕ ಸಂಘಟನಾ ಕಾರ್ಯದರ್ಶಿ) ಅಲಬೂರು ಇವರುಗಳ ಸಮ್ಮುಖದಲ್ಲಿ ಕೊಟ್ಟೂರು ತಾಲೂಕಿನ ನೂತನ ನವ ಕರ್ನಾಟಕ ನಾಡ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರನ್ನಾಗಿ ಉತ್ತಂಗಿ ಕರಿಬಸಪ್ಪ ರಾಂಪುರ ಇವರನ್ನು ಅಧಿಕೃತವಾಗಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುತ್ತಾರೆ. ಈ ಸಂದರ್ಭದಲ್ಲಿ
ಎನ್ ಹೇಮಣ್ಣ ಸಿವಿಲ್ ಗುತ್ತಿಗೆದಾರರು ಅಲಬೂರು,
ಎಸ್ ಎಸ್ ಎಂ ಶಿವರುದ್ರಯ್ಯ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಎ. ಬಿ. ಜಂಬಣ್ಣ ಗ್ರಾಮ ಪಂಚಾಯಿತಿ ಸದ್ಯರು ಅಲಬೂರು,
ಪಿ ನಾಗರಾಜ ಚಿರಿಬಿ ಮಹಾಶಕ್ತಿ ಕೇಂದ್ರದ ಬಿ.ಜೆ.ಪಿ ಅಧ್ಯಕ್ಷರು ಹಾಗೂ ಎನ್. ಸುರೇಶ್ ಚಿರಿಬಿ ಮಹಾಶಕ್ತಿ ಕೇಂದ್ರದ ಬಿ.ಜೆ.ಪಿ ಕಾರ್ಯದರ್ಶಿ ಚಪ್ಪರದಹಳ್ಳಿ, ಉತ್ತಂಗಿ ಹಾಲೇಶ್, ಮಹೇಶ್ ಲಕ್ಕಿ ಡ್ರೆಸೆಸ್, ಎಸ್. ರೇವಣ್ಣ, ಗೆದ್ದಲಗಟ್ಟಿ ಕೊಟ್ರೇಶ್ ಕೊಟ್ಟೂರು, ಉಪಸ್ಥಿತರಿದ್ದರು.
ವರದಿಗಾರರು – ಎನ್. ಚಂದ್ರಗೌಡ




















