ಬೀದರ್ : ದಿನಾಂಕ 2.03.2025 ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಜಿಲ್ಲಾ ಸಂಚಾಲಕರಾದ ರಮೇಶ ಮಂದಕನಳ್ಳಿ ರವರ ನೇತೃತ್ವದಲ್ಲಿ ಜಿಲ್ಲಾ ಸಮಿತಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮಾರ್ಚ್ 20ರಂದು ಮಹಡ್ ಸತ್ಯಾಗ್ರಹ ಮೂಲ ಸ್ಥಳಕ್ಕೆ ಚೌಡರ ಕೆರೆಗೆ ಬೀದರ್ ಜಿಲ್ಲೆಯಿಂದ ಸುಮಾರು 25ಜನ ಹೋಗುವುದು ಹೋಗಿ ಬಂದ ಮೇಲೆ ರಾಜ ಸಮಿತಿ ಆದೇಶದಂತೆ 25ನೇ ಮಾರ್ಚ್ ಬೀದರ್ ನಗರದಲ್ಲಿ ಜಿಲ್ಲಾ ಮಟ್ಟದ ಬಹಿರಂಗ ಸಭೆ ಆಯೋಜಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಭೀಮ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ವಿನಂತಿಸಿಕೊಳ್ಳುತ್ತೇನೆ ಎಂದು ರಮೇಶ ಮಂದಕನಳ್ಳಿ ಹೇಳಿದರು. ಈ ಸಮಿತಿ ಅಧ್ಯಕ್ಷತೆ ರಾಜ್ಯ ಸಂಘಟನಾ ಸಂಚಾಲಕರಾದ ರಮೇಶ್ ಡಾಕುಳಗಿ ವಹಿಸಿದ್ದರು. ಅದೇ ರೀತಿ ಮಹಿಳಾ ಘಟಕದ ಸಂಚಾಲಕಿಯರಾದ ರಂಜಿತಾ ಜೈನೂರ್ ಮತ್ತು ವಿಭಾಗ ಸಂಘಟನಾ ಸಂಚಾಲಕರಾದ ರಾಜಕುಮಾರ್ ಬನ್ನೇರ್, ಬಸವರಾಜ್ ಕಾಂಬಳೆ, ಬಾಬು ಮಾಲಿ, ಸಿದ್ದಾರ್ಥ್ ಕಾಂಬಳೆ, ವಿಠ್ಠಲ್ ಲಡ್ಕರ್, ಕೈಲಾಸ್ ಮೇಟಿ, ಸೂಪನರಾವ್ ಲಾದ, ರಾಜು ಕಾಳೇಕರ್, ಲಕ್ಷ್ಮಣ್ ಹೊನ್ನಡಿ, ಹುಮ್ನಾಬಾದ್ ತಾಲೂಕ ಸಂಚಾಲಕರು ರಾಹುಲ್ ಉದ್ದ, ಔರಾದ್ ತಾಲೂಕ ಸಂಚಾಲಕರು ಮಾರುತಿ ಜಗದಾಳಿ, ಭಾಲ್ಕಿ ತಾಲೂಕ ಸಂಚಾಲಕರು ಘಳೆಪ್ಪಾ ಮೈಲೂರೆ, ಕಮಲನಗರ ತಾಲೂಕು ಸಂಚಾಲಕರು ಶಾಲಿವನ್ ಡೊಂಗ್ರಿ , ಬಸವಕಲ್ಯಾಣ ತಾಲೂಕು ಸಂಚಾಲಕರು ಮಾದೇವ ಗಾಯಕ್ವಾಡ್, ಉತ್ತಮ್ ಸುತಾರ್ ಮುಂತಾದವರು ಭಾಗವಹಿಸಿದ್ದರು.
ವರದಿ: ರೋಹನ್ ವಾಘಮಾರೆ




















