ಉತ್ತರ ಕನ್ನಡ/ ಶಿರಸಿ : ಸಮೀಪದ ಚಂದಗುಳಿಯ ಶ್ರೀ ಸಿದ್ಧಿ ವಿನಾಯಕ ದೇವರ ಅಷ್ಟಬಂಧ ಮಹೋತ್ಸವ, ಶಿಖರ ಪ್ರತಿಷ್ಠೆ, ಧ್ವಜಪ್ರತಿಷ್ಠೆ, ಯಾಗಶಾಲೆ, ನೂತನ ದೇವಾಲಯದ ಹಾಗೂ ಗುರುಭವನದ ಲೋಕಾರ್ಪಣೆಯು ಇಂದು ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಶಾಸ್ತ್ರೋಕ್ತ ವಿಧಿ – ವಿಧಾನಗಳೊಂದಿಗೆ ನೆರವೇರಿತು.
ನೂತನವಾಗಿ ನಿರ್ಮಾಣಗೊಂಡು ಶ್ರೀಗುರುಗಳಿಗೆ ಸಮರ್ಪಿಲ್ಪಪಟ್ಟ ಗುರುಭವನದಲ್ಲಿ ಇಂದು ಶ್ರೀಗಳು ಶ್ರೀಸಂಸ್ಥಾನದ ಶ್ರೀ ದೇವರುಗಳ ಪೂಜಾ ಕೈಂಕರ್ಯವನ್ನು ನೆರವೇರಿಸಿದರು.
ಯಾಗಶಾಲೆಯಲ್ಲಿ ಬ್ರಹ್ಮಣಸ್ಪತಿ ಸೂಕ್ತ ಹವನದ ಪೂರ್ಣಾಹುತಿಯು ನೆರವೇರಿತು.
ಇಂದಿನ ಕಾರ್ಯಕ್ರಮದಲ್ಲಿ ನಡೆದ ಎಲ್ಲ ಕಾರ್ಯಕ್ರಮಗಳನ್ನು ಸಾಗರೋಪಾದಿಯಲ್ಲಿ ನೆರೆದ ಭಕ್ತರು ಕಣ್ತುಂಬಿಕೊಂಡರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















