ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಸಾಂಸ್ಕೃತಿಕ ಕಾರ್ಯಕ್ರಮ

ಬಳ್ಳಾರಿ / ಕಂಪ್ಲಿ : ಜನಪದ ಕಲೆಯು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು ನಾಡಿನ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಶಾಸಕ ಜೆ.ಎನ್. ಗಣೇಶ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ದಿನಗಳ ಜನಪದ ಉತ್ಸವ 2025 ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ ಅದರಲ್ಲಿಯೂ ಕಂಪ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಬಯಲಾಟ, ರಂಗಕಲೆ, ನಾಟಕಗಳಿಗೆ ಪ್ರಸಿದ್ಧವಾಗಿದೆ ಈ ಕಲೆಗಳು ನಮ್ಮ ನಾಡಿನ ಇತಿಹಾಸವನ್ನು ಅಂದಿನ ಜನ ಜೀವನದ ನೆಲೆಗಳನ್ನು ಅರಿಯಲು ನಮಗೆ ನೆರವಾಗುತ್ತದೆ ಇಂದಿನ ದೂರದರ್ಶನ ಮತ್ತು ಮೊಬೈಲ್ ಹಾವಳಿಗಳಿಂದ ಈ ಕಲೆಗಳು ದೊರೆಯಬೇಕಾದ ಪ್ರೋತ್ಸಾಹ ಮತ್ತು ಸಹಕಾರಗಳು ನಿರೀಕ್ಷಿತ ಮಟ್ಟದಲ್ಲಿ ದೊರೆಯುತ್ತಿಲ್ಲ, ಇವುಗಳ ಬಗ್ಗೆ ಯುವ ಜನತೆಗೆ ಜಾಗೃತಿ ಮೂಡಿಸಬೇಕಾದ ಅಗತ್ಯತೆ ಇದೆ ಈ ರೀತಿಯ ಕಾರ್ಯಕ್ರಮಗಳು ಯುವಕರಲ್ಲಿ ಜೀವನ ಉತ್ಸಾಹವನ್ನು ತುಂಬುತ್ತವೆ ಮತ್ತು ಹೊಸ ಚೈತನ್ಯವನ್ನು ನೀಡುತ್ತವೆ ಎಂದು ಹಾಗೂ ಕಂಪ್ಲಿ ಭಾಗದ ಶೈಕ್ಷಣಿಕ ಅಭಿವೃದ್ಧಿಗಾಗಿ ರೂಪಾಯಿ 200 ಕೋಟಿಗಳನ್ನು ವ್ಯಯಿಸಲಾಗುತ್ತಿದೆ ಈ ಬಜೆಟ್ ನಲ್ಲಿ ಸರ್ಕಾರಿ ಟೂಲ್ಸ್ ಮತ್ತು ತರಬೇತಿ ಕಾಲೇಜನ್ನು ಕಂಪ್ಲಿಗೆ ಮಂಜೂರು ಮಾಡಲಾಗಿದೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಭಿವೃದ್ಧಿಗಾಗಿ ಎಂಟು ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಲ್ಲಾ ಪ್ರಯತ್ನಗಳ ಫಲವನ್ನು ನಮ್ಮ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ತಂದೆ ತಾಯಿಗಳ ಸಮಾಜದ ಆಶಯವನ್ನು ಪೂರೈಸಬೇಕೆಂದರು. ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಬಯಲಾಟ ಕಲಾವಿದರಾದ H. ಹುಲುಕುಂಟೆಪ್ಪ T. ಮಹೇಶ, ಕುರುಬರ ಪಾಂಡುರಂಗಪ್ಪ ಅವರು ರಂಗಗೀತೆಗಳನ್ನು ಬಯಲಾಟದ ವಿವಿಧ ಪಾತ್ರಗಳನ್ನು ಅಭಿನಯಿಸಿದರು. ಇದೇ ಸಂದರ್ಭದಲ್ಲಿ ಕಲಾವಿದರಿಗೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ. ಕಾಂ. ಆರನೇ ಸೆಮಿಸ್ಟರ್ ವಿದ್ಯಾರ್ಥಿಯಾದ ಗಣೇಶ ರಾಜ್ಯಮಟ್ಟದ ಕಬ್ಬಡಿ ತಂಡದ ನಾಯಕನಾಗಿ ಆಯ್ಕೆಯಾಗಿದ್ದಕ್ಕೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು ಸಂಚಾಲಕರಾದ ಡಾಕ್ಟರ್ ಅನ್ನಪೂರ್ಣ ಗುಡುದೂರು ಡಾ. ಜೆ. ಕೃಷ್ಣ , ಬಾಲಾಜಿ ಎಂ.ಪಿ. ರಾಜ್ಮ ಟಿ. ಎಂ. ಆರ್. , ಮಮತಾ ಜೆ .ಎಂ. ವೀರಭದ್ರಪ್ಪ , ಎ. ಜಿ. ಗ್ರಂಥಪಾಲಕರು ಕೆ ಕುಮಾರ, ಡಾ.ಡಿ . ಬಸವರಾಜ ಡಾ. ಲಕ್ಷ್ಮೀಬಾಯಿ, ಮೈನುದ್ದೀನ ಭಾಷಾ, ಡಾ. ಸಂದೀಪ ಕುಮಾರ ಕಾರ್ಯಕ್ರಮದಲ್ಲಿ ಬಿಎ ಮತ್ತು ಸೇರಿದಂತೆ ಬಿಕಾಂನ ಎಲ್ಲಾ ಸೆಮಿಸ್ಟರ್ ವಿದ್ಯಾರ್ಥಿಗಳು ಹಾಗೂ ಬೋಧಕ ಭೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

ವರದಿ : ಜಿಲಾನ್ ಸಾಬ್ ಬಡಿಗೇರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ