ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಮೃತರಾದವರಿಗೆ ಶ್ರದ್ಧಾಂಜಲಿ

ವಿಜಯನಗರ / ಹೊಸಪೇಟೆ : ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಇಂದು ಹೊಸಪೇಟೆ ನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಕ್ಯಾಂಡಲ್ ಹಚ್ಚಿ ಸಂತಾಪ ಸೂಚನೆ ಮಾಡಿ, ಮೃತ ನಾಗರೀಕರಿಗೆ ಆತ್ಮಕ್ಕೆ ಶಾಂತಿ ಕೋರಿ, ಶ್ರದ್ಧಾಂಜಲಿ ನಮನಗಳು ಸಲ್ಲಿಸಲಾಯಿತು.

ಜೀವನದಲ್ಲಿ ಒತ್ತಡಗಳನ್ನು ಮರೆಯಲು, ಮಗನ ಉತ್ತಮ ಫಲಿತಾಂಶ ಸಂಭ್ರಮಿಸಲು, ನವ ದಂಪತಿಗಳು ಮಧುಚಂದ್ರಕ್ಕೆ ಎಂದು, ರಜೆಗಳನ್ನು ಸಂಭ್ರಮಿಸಲು ಪ್ರವಾಸಿ ತಾಣಗಳಿಗೆ ಪ್ರವಾಸಕ್ಕೆ ಹೋದವರ ಮೇಲೆ, ಅಮಾನುಷವಾಗಿ ಜೀವ ತೆಗೆಯುವ ಮಟ್ಟಕ್ಕೆ ಇಳಿದ ಭಯೋತ್ಪಾದಕರ ಹುಟ್ಟನ್ನು ಅಡಗಿಸುವ ಕೆಲಸ ತ್ವರಿತವಾಗಿ ಆಗಬೇಕು. ಈ ಕೃತ್ಯದಿಂದ ಪ್ರವಾಸಿಗರು ಪ್ರವಾಸ ತಾಣಗಳಿಗೆ ಹೋಗಲು ಹಿಂದೂ ಮುಂದು ಆಲೋಚಿಸಬೇಕಾಗುವ ವಾತಾವರಣ ಸೃಷ್ಟಿ ಆಗಲಿದೆ. ಸರ್ಕಾರದಿಂದ ಕೂಡಲೇ ಇದಕ್ಕೆ ಪ್ರತ್ಯುತ್ತರ ನೀಡಿ ಪ್ರವಾಸಿಗರಿಗೆ, ಭಾರತೀಯರಿಗೆ ಮುಕ್ತ ವಾತಾವರಣ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಬಕೆಂದು ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕೆ. ಎಂ .ಹಾಲಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಜಿಲ್ಲಾ ಉಪಾಧ್ಯಕ್ಷ ಕೆ.ರಮೇಶ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್.ಮೋಹಮ್ಮದ ಇಮಾಮ್ ನಿಯಾಜಿ‌, ಜಿಲ್ಲಾ ವಕ್ಫ್ ಸಲಹಾ ಸಮಿತಿ ಜಿಲ್ಲಾಧ್ಯಕ್ಷ ಕೆ.ಎಸ್.ದಾದಪೀರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್, ಸೇವಾದಳ ಜಿಲ್ಲಾ ಸಂಘಟಕ ಬಿ.ಮಾರೆಣ್ಣ, ಶಿಕ್ಷಕರ ವಿಭಾಗದ ಜಿಲ್ಲಾಧ್ಯಕ್ಷ ಸಣ್ಣ ಈರಪ್ಪ, ನಗರಸಭಾ ಸದಸ್ಯರಾದ ಬಿ.ನಾರಾಯಣ, ದಾದಾ ಖಲಂದರ್, ಯುವ ಕಾಂಗ್ರೆಸ್ ಸಮಿತಿ ಜಿಲ್ಲಾ ಉಪಾಧ್ಯಕ್ಷರುಗಳಾದ ಶೇಖ್ ತಾಜುದ್ದೀನ್, ಕೆ.ಇಮ್ತಿಯಾಜ್, ಸಿ.ಆರ್.ಭರತ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಶಿವಕುಮಾರ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹೆಚ್.ಸೋಮಶೇಖರ,ಜಿಲ್ಲಾ ಕಾರ್ಯದರ್ಶಿ ಸದ್ದಾಂ ಹುಸೇನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮರಡಿ ಮಂಜುನಾಥ, ಗೋವಿಂದಪ್ಪ,ತಾರಾ ಭಾಷ ,ಎಂ.ಡಿ.ರಫೀಕ್, ಹೆಚ್.ಪರಶುರಾಮ, ಮಾಜಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆನಂತ, ಅಲನ ಭಕ್ಷೀ, ಧನರಾಜ್ ಮೋಹಮ್ಮದ ಜಾವೇದ್, ಪ್ರಮೋದ್ ಪುಣ್ಯ ಮೂರ್ತಿ,ಎಂ.ಡಿ.ಗೌಸ್ , ಪ್ರಶಾಂತ ಕುಮಾರ್, ಶೇಕ್ಷಾವಲಿ, ಸೈಹೀದ್,ಬುಡೇನ್, ಹೊನ್ನೂರ ಸಾಬ್, ಯೋಗ ಲಕ್ಷ್ಮಿ, ಇಂದುಮತಿ, ಎಸ್ ರಾಣಿ ಶ್ರೀಮತಿ ಅನಿತಾ ಗಂಗಮ್ಮ ಮೋಹ್ಮದ್, ರಾಜಾ ಸಾಬ್, ಹನುಮಂತಪ್ಪ, ಮೂಂಚೂಣಿ ಘಟಕಗಳ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ಹಿರಿಯ ಮುಖಂಡರು
ಮತ್ತಿತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ