ಬಳ್ಳಾರಿ / ಕಂಪ್ಲಿ : ಮಹಿಳೆಯರೆಲ್ಲಾ ನದಿ ದಡದಲ್ಲಿ ಬಟ್ಟೆ ತೊಳೆಯುತ್ತಿದ್ದರು. ಆದ್ರೆ ವೇದಮೂರ್ತಿ ಸ್ವಲ್ಪ ಮುಂದೆ ಹೋಗಿ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ತಾಲೂಕಿನ ಸಣಾಪುರ ಗ್ರಾಮದಲ್ಲಿ 16 ವರ್ಷದ ವೇದಮೂರ್ತಿ ತಂದೆ ವೇಣು ಎಂಬ ಬಾಲಕನ ಮೇಲೆ ಮೊಸಳೆ ದಾಳಿ ಮಾಡಿದ ಘಟನೆ ಮಂಗಳವಾರ ನಡೆದಿದೆ. ವೀರಭದ್ರೇಶ್ವರ ದೇವಸ್ಥಾನ ಹಿಂದುಗಡೆ ಇರುವ ನದಿಯಲ್ಲಿ ಸ್ನಾನ ಮಾಡಲು ನದಿಗೆ ತೆರಳಿದ್ದ ವೇದಮೂರ್ತಿ ಮೇಲೆ ಮೊಸಳೆ ದಾಳಿ ನಡೆಸಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ, ಕೂಡಲೇ ಮೊಸಳೆಯಿಂದ ಬಾಲಕ ವೇದಮೂರ್ತಿನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾಲಕ ಬದುಕುಳಿದಿದ್ದಾನೆ.
ಸದ್ಯ ಬಾಲಕ ವೇದಮೂರ್ತಿಗೆ ಗಂಗಾವತಿಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕರೆದುಕೊಂಡು ಹೋಗಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















