
ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಕಾರ ಹುಣ್ಣಿಮೆಯನ್ನು ಎಲ್ಲರೂ ಒಗ್ಗಟ್ಟಿನಿಂದ ಇಡೀ ಗ್ರಾಮವು ಸಂಭ್ರಮಿಸಿದ್ದಾರೆ. ವರ್ಷದ ಮುಂಗಾರಿನಲ್ಲಿ ಬರುವ ಕಾರ ಹುಣ್ಣಿಮೆಯ ಮೊದಲ ಹಬ್ಬವಾಗಿದೆ. ಈ ಕಾರ ಹುಣ್ಣಿಮೆಯನ್ನು ರೈತರು ಸಂಭ್ರಮಿಸುವ ಹಬ್ಬವಾಗಿದೆ. ಈ ಮುಂಗಾರಿನ ಮೊದಲ ಹಬ್ಬವೇ ರೈತರಿಗೆ, ಎತ್ತುಗಳಿಗೆ ಗೌರವ ಸಲ್ಲಿಸುವ ಹಬ್ಬವಾಗಿದೆ. ಅನ್ನದಾತ ಎಲ್ಲರಿಗೂ ಅನ್ನವನ್ನು ನೀಡುತ್ತಾನೆ, ಅನ್ನದಾತನಿಗೆ ಸಾಥ್ ಕೊಡುವ ಎತ್ತುಗಳಿಗೆ ಗೌರವಿಸುವ ಸಲುವಾಗಿ ನಮ್ಮ ಹಿರಿಯರು ಕಾರ ಹುಣ್ಣಿಮೆಯನ್ನು ಆಚರಿಸುತ್ತಾ ಬಂದಿದ್ದಾರೆ. ಹೀಗಾಗಿ ಇಂದಿನ ಪೀಳಿಗೆಯವರು ಈ ಕಾರ ಹುಣ್ಣಿಮೆಯನ್ನು ಆಚರಿಸುತ್ತಾ ಬರಬೇಕು ಗ್ರಾಮದ ರೈತರು ಎತ್ತುಗಳಿಗೆ ಬಣ್ಣ ಬಣ್ಣಗಳಿಂದ ಅಲಂಕಾರ ಮಾಡಿ, ಔಷಧಿ ಗುಣವುಳ್ಳ ಘೋಟಿ ಕುಡಿಸಿ, ಪೂಜೆ ಮಾಡಿ ಎತ್ತುಗಳಿಗೆ ಆಹಾರವನ್ನು ಉಣಿಸುವುದು, ಹೋಳಿ ಹುಣ್ಣಿಮೆ ಮೀಸಲು, ಕಾರಹುಣ್ಣಿಮೆ ಎಂಜಲುಯಾಗಿ ರಟಕಲ್ ಗ್ರಾಮದಲ್ಲಿ ಅದ್ದೂರಿಯಾಗಿ ಕಾರ ಹುಣ್ಣಿಮೆ ಆಚರಣೆ ಮಾಡುತ್ತೇವೆ. ಊರಿನ ಚಾಜದ ಗೌಡರಾದ ಸುಭಾಷ ಪಾಟೀಲ್ ರವರ ಮನೆಯಿಂದ ಬಂದು ಊರ ಪ್ರಮುಖ ಬೀದಿಯಲ್ಲಿ ಬಾಜಾ, ಭಜಂತ್ರಿಯೊಂದಿಗೆ ಚಿಕ್ಕ ಅಗಸಿಯಲ್ಲಿ ಕರಿ ಕಡಿಯುವ ಮೂಲಕ ಹನುಮಾನ್ ದೇವಸ್ಥಾನದಲ್ಲಿ ಹೋಗುವ ರೈತರು ಸಂಭ್ರಮಿಸುತ್ತಾರೆ ಮತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು ಎಂದು ವೀರಣ್ಣ ಗಂಗಾಣಿ ರೈತ ತಾಲೂಕಾಧ್ಯಕ್ಷರು ರೈತ ಸೇನೆ ಹಾಗೂ ರೈತ ಸಂಘ ಹೇಳಿದರು.
ಈ ಸಂದರ್ಭದಲ್ಲಿ ರೈತರುಗಳಾದ ಮಹೇಶ್ ಬಿಜ್ಜನಹಳ್ಳಿ, ರೇವಣಸಿದ್ದಪ್ಪ ಕುರಕೋಟ, ಚಂದ್ರಕಾಂತ್ ಭೀಮಳ್ಳಿ ಶಾಂತಯ್ಯ ಸ್ವಾಮಿ, ತಿಪ್ಪಣ್ಣ ಚಿಕ್ಕ ಅಗಸಿ, ಶೇಟಪ್ಪ ದತ್ತರಗಿ ಬಸವರಾಜ ಹಡಪದ,ವೀರಣ್ಣ ಸಿಗಿ,ಹುಚ್ಚಪ್ಪ ಹಂದ್ರಳ್ಳಿ, ನಾಗಯ್ಯ ಸ್ವಾಮಿ,ಹಣಮಂತ ಚಿಕ್ಕಅಗಸಿ. ಪ್ರಕಾಶ್ ಹಲಗಿ, ವೈಜನಾಥ ತಳವಾರ್ ಇನ್ನೂ ಅನೇಕ ರೈತರು ಭಾಗಿಯಾಗಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್



















