ಉತ್ತರ ಕನ್ನಡ/ ಮುಂಡಗೋಡ : ಕಳೆದ ಎರಡು ದಿನಗಳ ಹಿಂದೆ ಅತ್ತಿವೇರಿ ಅರಣ್ಯ ಭಾಗದಲ್ಲಿ ಎರಡನೇ ಬಾರಿಯ ಶ್ರೀಗಂಧ ಮರಗಳ ಕಳ್ಳತನ ಪ್ರಕರಣ ಕುರಿತು ಬೀಟ್ ವ್ಯಾಪ್ತಿಯ ಫಾರೆಸ್ಟರ್ ಬಳಿ ಮಾಹಿತಿ ಪಡೆಯಲು ಪತ್ರಕರ್ತರು ತೆರಳಿದಾಗ ಅವರಿಗೆ ಗೊತ್ತೇ ಇಲ್ಲದಂತೆ ಅರಣ್ಯ ಇಲಾಖೆ ವಡಗಟ್ಟಾ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಉಮೇಶ್ ಕುರ್ತಕೋಟಿ ಎಂಬ ವಾಚರ್ ವೊಬ್ಬರು ಫಾರೆಸ್ಟಾರ್ ಬಳಿ ಮಾಹಿತಿ ಸಂಗ್ರಹ ಮಾಡುತ್ತಿದ್ದ ಪತ್ರಕರ್ತರ ಫೋಟೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಅಲ್ಲದೆ, ಏನು ಮಾತನಾಡುತ್ತಾರೆ ,ಯಾವ ವಿಷಯದ ಬಗ್ಗೆ ಮಾತನಾಡುತ್ತಾರೆ ಎಂಬ ಕುರಿತಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಬೇಕಂತಲೇ ಫೋಟೋ ತೆಗೆದಿದ್ದೇನೆ ಎಂಬ ಉದ್ಧಟತನದ ಮಾತುಗಳನ್ನು ಆಡಿದ್ದಾರೆ ,ಸುದ್ದಿ ಸಂಗ್ರಹ ಮಾಡುವ ಪತ್ರಕರ್ತರನ್ನು ಟ್ರ್ಯಾಪ್ ಮಾಡುವ ಹೊಸ ವರಸೆಯನ್ನೂ ಅರಣ್ಯ ಇಲಾಖೆ ಸಿಬ್ಬಂದಿಗಳು ಶುರು ಮಾಡಿಕೊಂಡಿದ್ದು, ಸ್ಥಳದಲ್ಲೇ ಇದ್ದ ಡಿ ಆರ್ ಎಫ್ ಒ ಕೂಡಾ ಈ ಬಗ್ಗೆ ಪ್ರಶ್ನಿಸುವ ಗೋಜಿಗೆ ಹೋಗದಿರುವುದು ನೋಡಿದರೆ ಉದ್ದೇಶಪೂರ್ವಕವಾಗಿ ಟ್ರ್ಯಾಪ್ ಮಾಡುವ ಮನೋಭಾವ ಬಗ್ಗೆ ತಿಳಿಯುತ್ತದೆ. ಸರ್ಕಾರ ನೀಡುವ ಸಂಬಳ, ಸವಲತ್ತು ಪಡೆಯುವ ಈ ಸಿಬ್ಬಂದಿಗಳು ಸರ್ಕಾರಕ್ಕೆ ನಿಷ್ಟರಾಗಿರದೆ, ಮೂರನೆಯ ವ್ಯಕ್ತಿಗಳಿಗೆ ಮಾಹಿತಿ ವಿನಿಮಯ ಮಾಡುವ ಏಜೆಂಟರಂತೆ ಕೆಲಸ ಮಾಡುವುದು ನೋಡಿದರೆ ಇವರು ಇನ್ಯಾವ ಮಟ್ಟಿಗೆ ಅರಣ್ಯ ಸಂರಕ್ಷಣೆ ಮಾಡಿಯಾರು ಎಂಬ ಅನುಮಾನ ಮೂಡುತ್ತಿದೆ. ನಿಜಕ್ಕೂ ಇಂತಹ ಸಿಬ್ಬಂದಿಗಳ ಮೇಲೆ ಅಧಿಕಾರಿಗಳು ಯಾವ ಕ್ರಮ ಕೈಗೊಂಡಾರು ಎಂಬುದನ್ನು ನೋಡಬೇಕಿದೆ…
- ಕರುನಾಡ ಕಂದ



















