ಸಿರಾ ಮಧುಗಿರಿ ನಗರದ ಮದ್ಯದಲ್ಲಿ
ಗುಳಿಗೇನಳ್ಳಿ ಪಕ್ಕದ ಬೋರಸಂದ್ರದಲ್ಲಿ
ಭಕ್ತ ಸಹೋದರ ಮೆಚ್ಚಿನ ಹೊಲದಲ್ಲಿ
ಏಳುಕೋಟಿ ಒಡೆಯ ನೆಲೆಸಿಹನು ಇಲ್ಲಿ.
ಮೈಲಾರಲಿಂಗ ದಯೆ ತೋರು ಬಾರಯ್ಯ
ಶರಣೆಂದ ನಮಗೆ ಕರುಣೆಯ ತೋರಯ್ಯ
ಬರಗಾಲ ಬಂದೈತೆ ಬವಣೆಯ ಹರಿಸಯ್ಯ
ಜೀವವು ನೊಂದೈತೆ ಜೀವನವ ನೀಡಯ್ಯ.
ಶಿವನ ಸ್ವರೂಪಿಯು ಮೈಲಾರ ಲಿಂಗಯ್ಯ
ಗೊರವನ ರೂಪದಿ ಕಾರಣಿಕ ನೀನಯ್ಯ
ಕಂಬಳಿ ಹೊದ್ದು,ಢಮರುಗ ನುಡಿಸಯ್ಯ
ಹಳದಿ ಭಂಡಾರದ ಪ್ರಿಯನು ನೀನಯ್ಯ.
ಮಾಘ ಮಾಸದ ಹುಣ್ಣಿಮೆ ದಿನದಲಿ
ಭಕ್ತರು ಬರುವರು ನಿನ್ನನು ನಂಬುತಲಿ
ಅಭಿಷೇಕ ಮಾಡಿ ಮಿಂದೆದ್ದು ಭಕ್ತಿಯಲಿ
ನೆಮ್ಮದಿ ಕಾಣುವರು ಸಂತಸ ಪಡುತಲಿ.

✍️ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ:-9740199896.



















