ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅರಣ್ಯ ಅಧಿಕಾರಿಗಳಿಂದ ಗ್ರಾಮಸ್ಥರ ಮೇಲೆ ದಬ್ಬಾಳಿಕೆ :ಬಿ.ಎಸ್.ಪಿ. ತಾಲೂಕಾ ಅಧ್ಯಕ್ಷ ಶಂಕರ ಫುಲೆ ಕಿಡಿ

ಬೀದರ / ಬಸವಕಲ್ಯಾಣ ತಾಲೂಕಿನ ವಲಯ ಅರಣ್ಯ ಅಧಿಕಾರಿಗಳು ಹುಲಸೂರ ತಾಲೂಕಾ ವ್ಯಾಪ್ತಿಯಲ್ಲಿ ಬರುವ ಮಿರಖಲ ಹಾಗೂ ಮಿರಖಲ ತಾಂಡಾ ಜನರಿಗೆ ಕಿರುಕುಳ ನೀಡಿರುತ್ತಾರೆ. ಮಿರಖಲ ತಾಂಡಾ ಜನರು ಸುಮಾರು 75 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಅವರ ಹತ್ತಿರ ಸಿ. ಫಾರಂ ತಹಸೀಲ್ ಟ್ಯಾಕ್ಸ್ ಕಟ್ಟಿರುವ ಪಾವತಿ ಮತ್ತು ಸ್ಮಶಾನ ಭೂಮಿ ಇದ್ದು, ಅಂತಹ ಜಮೀನು ಕೂಡಾ ತೆರವುಗೊಳಿಸಿದ್ದಾರೆ ಜಮೀನುಗಳಲ್ಲಿ ಬೆಳೆದ ತೊಗರಿ ಬೆಳೆಯಲ್ಲಿ ಜೆ.ಸಿ.ಬಿ. ಹೊಡೆದು ಲಕ್ಷಾಂತರ ರೂಪಾಯಿಗಳ ನಷ್ಟ ಮಾಡಿದ್ದು, ಮತ್ತು ಹೆಚ್ಚಿಗೆ ಕೇಳಿದರೆ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಅರಣ್ಯ ಅಧಿಕಾರಿಗಳು ಅಲ್ಲಿನ ಜನರಿಗೆ ಹೆದರಿಸುತ್ತಿದ್ದಾರೆ ಮತ್ತು ಮಾನ್ಯ ತಹಸೀಲ್ದಾರರು ಹುಲಸೂರ ಇವರಿಗೆ ಅರಣ್ಯ ಅಧಿಕಾರಿ ವಿರುದ್ಧ ದೂರು ನೀಡಿದರೂ ಕೂಡಾ ತಹಸೀಲ್ದಾರರು ಕೂಡಾ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ ಮತ್ತು ಬೆಳೆ ಹಾನಿಯಾದ ಆ ಜನರಿಗೆ ಪರಿಹಾರ ಅರಣ್ಯ ಇಲಾಖೆ ವತಿಯಿಂದ ಒದಗಿಸಿಕೊಡಬೇಕು ಯಾವುದೇ ನೋಟಿಸ್ ನೀಡದೆ ಅರಣ್ಯ ಅಧಿಕಾರಿಗಳು ನಾಲ್ಕು ಜೆ.ಸಿ.ಬಿ ತಂದು ಅವರ ಜಮೀನನ್ನು ಅರಣ್ಯ ಅಧಿಕಾರಿಗಳು ಕಬ್ಜಾ ಮಾಡಿಕೊಂಡಿರುತ್ತಾರೆ. ಅಧಿಕಾರಿಗಳು ಯಾರಿಗೂ ಸಹ ಹೆದರದೆ ಗುಂಡಾ ವರ್ತನೆ ಮಾಡುತ್ತಿದ್ದಾರೆ, ಅವರನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಿ ಅಲ್ಲಿನ ಎಸ್.ಸಿ, ಎಸ್. ಟಿ ಬಂಜಾರ ಸಮಾಜದ ಜನರಿಗೆ ನ್ಯಾಯ ದೊರಕಿಸಿಬೇಕು. ಅದೇ ರೀತಿ ಹಲವು ಗ್ರಾಮಗಳಲ್ಲಿ ಯಾವುದೇ ನೋಟಿಸ್ ನೀಡದೆ ಜಮೀನನ್ನು ಸ್ವಾಧೀನ ಪಡೆಸಿಕೊಳ್ಳುತ್ತಿದ್ದಾರೆ, ರಾಜಕೀಯ ವ್ಯಕ್ತಿಗಳು ಹೇಳಿದಾಗ ಕೆಲ ಬಲಿಷ್ಠ ಜನರ ಜಮೀನನ್ನು ಹಾಗೆಯೇ ಬಿಟ್ಟಿರುತ್ತಾರೆ. ಇವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು ಮತ್ತು ಅಲ್ಲಿನ ಜನರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಬಸವಕಲ್ಯಾಣ ತಾಲೂಕಿನ ಬಿ.ಎಸ್.ಪಿ ತಾಲೂಕು ಅಧ್ಯಕ್ಷ ಶಂಕರ ಫುಲೆ ಅವರು ಮಾನ್ಯ ಸಹಾಯಕ ಆಯುಕ್ತರಿಗೆ ಮನವಿ ಪತ್ರ ಕೊಟ್ಟು ವಿನಂತಿಸಿಕೊಂಡರು.
ಒಂದು ವೇಳೆ ತಪ್ಪಿದ್ದಲ್ಲಿ ಕಛೇರಿಯ ಎದುರಗಡೆ ನಮ್ಮ ಪಕ್ಷದಿಂದ ಉಗ್ರ ಹೊರಾಟ ನಡೆಸಲಾಗುವುದು ಎಂದು ಎಚ್ಚರಿಗೆ ಸಂದೇಶ ಸಾರಿರುತ್ತಾರೆ. ಈ ಸಂಧರ್ಭದಲ್ಲಿ ಬಿ.ಎಸ್.ಪಿ. ತಾಲೂಕಾ ಅಧ್ಯಕ್ಷರಾದ ಶಂಕರ ಫುಲೆ, ಉಪಾಧ್ಯಕ್ಷರು ರಮೇಶ ರಾಠೋಡ,
ಪ್ರಧಾನ ಕಾರ್ಯದರ್ಶಿಗಳು ರವಿ ಉದಾತೆ, ಕಾರ್ಯದರ್ಶಿಗಳು ಮಹಾದೇವ ಗಾಯಕವಾಡ, ಚಂದ್ರಕಾಂತ ಲಂಗಡೆ, ನಗರಘಟಕ ಸಂಯೋಜಕರು ಮಸ್ತಾನಸಾಬ ಲದಾಫ,
ವಿಷ್ಣುಕಾಂತ ಸೂರ್ಯವಂಶಿ ಸೇರಿದಂತೆ ಇತರರು ಭಾಗಿಯಾಗಿದ್ದರು.
ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!