ಬೆಂಗಳೂರು: ಕರ್ನಾಟಕ ರಾಜ್ಯದ ಸರಕಾರಿ ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಕಂದಾಯ ಭವನ, ಕಚೇರಿ ಆವರಣದಲ್ಲಿ ಕಂದಾಯ ಇಲಾಖೆ ನೌಕರರ ಸಂಘದ ವತಿಯಿಂದ ದಿನಾಂಕ 19/06/2025ರಂದು ರಾಜ್ಯದ ಎಲ್ಲಾ ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಅನಿರ್ಧಿಷ್ಟ ಮುಷ್ಕರ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆಯಲ್ಲಿ ಗ್ರಾಮ ಸಹಾಯಕರ ರಾಜ್ಯಾಧ್ಯಕ್ಷರು ಮತ್ತು ಕಾರ್ಯದರ್ಶಿ ಅವರು ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಅಧ್ಯಕ್ಷರು, ತಾಲೂಕು ಕಾರ್ಯದರ್ಶಿ ಅವರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಕಂದಾಯ ಇಲಾಖೆಯ ಕಾರ್ಯದರ್ಶಿ ಅವರು ಸುನಿಲ್ ಕುಮಾರ್ ನಾಯಕ್ ಅವರು ಗ್ರಾಮ ಸಹಾಯಕರ ಮುಖ್ಯ ಬೇಡಿಕೆಗಳಾದ
1)ಗ್ರಾಮ ಸಹಾಯಕರನ್ನು ಡಿ, ದರ್ಜೆಗೆ ಸೇರಿಸಿ ಸೇವಾ ಭದ್ರತೆ ಒದಗಿಸಿ ಕನಿಷ್ಠ ವೇತನ 27,000 ಸಾವಿರ ಮಾಡುವುದು.
2)ಮರಣ ಹೊಂದಿದ ಗ್ರಾಮ ಸಹಾಯಕರಿಗೆ ಮತ್ತು ನಿವೃತ್ತಿ ಹೊಂದಿದ ಗ್ರಾಮ ಸಹಾಯಕರಿಗೆ ಹತ್ತು ಲಕ್ಷ ಹಿಡಿಗಂಟು ಕೊಡಬೇಕೆಂಬ ಈ ಎರಡು ಮುಖ್ಯ ಬೇಡಿಕೆಗಳ ಬಗ್ಗೆ ಸುನೀಲ ಕುಮಾರ ಅವರು ಆಶ್ವಾಸನೆ ಕೊಟ್ಟರು.
ತದ ನಂತರ ಕಾರ್ಯದರ್ಶಿಯವರಾದ ಮಾನ್ಯ ಕಲಾವತಿ ಅವರು ಸೇವಾ ಭದ್ರತೆ ವಿಚಾರವಾಗಿ ನಿಮ್ಮ ಬೇಡಿಕೆ ಸರಿ ಇದೆ, ನಿಮ್ಮ ಫೈಲ್ ನನ್ನ ಹತ್ತಿರ ಇದೆ ವಾರದೊಳಗಾಗಿ ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿ ನಂತರ ಎಲ್ಲಾ ಗ್ರಾಮ ಸಹಾಯಕರು ಮಾನ್ಯ ಕಲಾವತಿ ಅವರ ಮಾತಿಗೆ ಗೌರವಿಸಿ ಮತ್ತು ನಮ್ಮ ರಾಜ್ಯಾಧ್ಯಕ್ಷರು H.N. ದೇವರಾಜ್ ಅವರ ಮಾತಿಗೆ ಮುಷ್ಕರವನ್ನು ಹಿಂಪಡೆದರು.
ವರದಿ ಉಸ್ಮಾನ್ ಬಾಗವಾನ



















