ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಗು ಮುಖದ ನಟ, ಸಮಾಜ ಸೇವಕ ಹಣ್ಮು ಪಾಜಿ

ಹಣ್ಮು ಪಾಜಿ (ಹಣಮಂತ) ಎಂದರೆ ಸಾಮಾಜಿಕ ಮತ್ತು ಕನ್ನಡಕ್ಕಾಗಿ ದ್ವನಿ ಎತ್ತುವ ಯುವ ಹೋರಾಟಗಾರರೆಂದೇ ಜಿಲ್ಲೆಗೆ ಚಿರಪರಿಚಿತರು.
ತಮ್ಮ ಬದುಕನ್ನೇ ಸಮಾಜಕ್ಕಾಗಿ, ಕಷ್ಟದಲ್ಲಿರುವವರಿಗೆ ಕೈ ಚಾಚುವ ನಿಸ್ವಾರ್ಥ ನಿಷ್ಕಲ್ಮಶ ಮನಸಿನ ಯುವಕ ಹಣ್ಮು ಪಾಜಿಯವರು.
ಅವರು ಮಾಡಿರುವ ಸಾಮಾಜಿಕ ಹಾಗೂ ಮಾನವೀಯ ಕೆಲಸಗಳನ್ನು ಪಟ್ಟಿ ಮಾಡಿ ನೂರು ಪುಟಗಳಷ್ಟು ಬರೆದರೂ ಹಾಳೆ ಸಾಕಾಗುವುದಿಲ್ಲ ಹಾಗಾಗಿ ನನಗೆ ತಿಳಿದು ಬಂದಿದ್ದು ಹಾಗೂ ನಾನು ಕಂಡಿದ್ದು ಒಂದಿಷ್ಟು ನನ್ನ ಭಾವನೆಯನ್ನು ನುಡಿಯ ಮೂಲಕ ಓದುಗರ ಮುಂದೆ ಇಡಲು ಪ್ರಯತ್ನಿಸಿರುತ್ತೇನೆ.

ಬೀದರ ತಾಲೂಕಿನ ಶಹಾಪುರ ಗ್ರಾಮದ ತಂದೆ ನಿರಂಜಪ್ಪ ತಾಯಿ ಶ್ರೀದೇವಿ ದಂಪತಿಗಳ ಮಗನಾದ ಹಣಮಂತ(ಹಣ್ಮು ಪಾಜಿ) ೨೦. ೪. ೧೯೯೪ ರಲ್ಲಿ ಜನಿಸಿದರು.
ಬಿ ಎಸ್ ಸಿ ಪದವೀಧರರಾದ ಇವರು ಕನ್ನಡ ಸೇವೆ, ಕನ್ನಡ ಶಾಲೆಗಳ ಉಳಿವಿಗಾಗಿ ಪಣತೊಟ್ಟವರು, ರೈತಪರ ಧ್ವನಿ ಎತ್ತುವ ಇವರು ಕಾರಂಜ ಸಂತ್ರಸ್ತರ ಪರ ಹೋರಾಟ ಮಾಡಿದವರು, ಇಶಾ ಫೌಂಡೇಶನ್ ರವರು ಮಣ್ಣು ಉಳಿಸಿ ಅಭಿಯಾನಕ್ಕೆ ಬೆಂಬಲವಾಗಿ ನಿಂತವರು, ಕರೋನಾ ಸಮಯದಲ್ಲಿ ತಮ್ಮದೇ ಗೆಳೆಯರ (ಹಣ್ಮುಪಾಜಿ ಗೆಳೆಯರ ಬಳಗ) ಬಳಗವನ್ನು ಕಟ್ಟಿಕೊಂಡು ಹಸಿದ ನಿರ್ಗತಿಕರಿಗೆ ಅನ್ನದಾನದ ಮೂಲಕ ಅವರಿಗೆ ಬಟ್ಟೆ, ಬರೆ ವಿತರಣೆ ಮಾಡಿರುವುದು, ರಾಜ್ಯೋತ್ಸವದ ಪ್ರಯುಕ್ತ ಶಾಲೆ ಮಕ್ಕಳ ಜ್ಞಾನಾರ್ಜನೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಭಂದ ಸ್ಪರ್ಧೆ, ರಸಪ್ರಶ್ನೆ, ಮುಂತಾದ ಕಾರ್ಯಚಟುವಟಿಕೆಗಳ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹಧನ ಮತ್ತು ಗೌರವ ಪುರಸ್ಕಾರ ನೀಡಿ ಅವರ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು, ಪ್ರತಿ ವರುಷ ಸ್ವತಂತ್ರ್ಯೋತ್ಸವ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಮತ್ತು ತಮ್ಮದೇ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಗೆಳೆಯರ ಬಳಗದಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಿ ಸುಮಾರು ಇದುವರೆಗೂ ನಾಲ್ಕು ನೂರಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿರುವುದು ಬೀದರ್ ಜಿಲ್ಲೆಯಲ್ಲಿಯೇ ಮಾದರಿ ಕಾರ್ಯವಾಗಿದೆ. ಅದೇ ರೀತಿ ಇವರಲ್ಲಿ ಯಾರೇ ಸಮಸ್ಯೆಗಳನ್ನು ಹೊತ್ತು ಬಂದರೆ ಕೈಲಾದಷ್ಟು ಸಮಸ್ಯೆಗೆ ತಮ್ಮದೇ ಶೈಲಿಯಲ್ಲಿ ಸ್ಪಂದನೆ ನೀಡುವ ವ್ಯಕ್ತಿ ಹಣ್ಮು ಪಾಜಿಯವರು.

ಕನ್ನಡ ಕಟ್ಟಾಳು

ಪ್ರಕೃತಿಯೇ ಪರಮಾತ್ಮವೆಂದು ತಿಳಿಯುವ ಹಣ್ಮು ಪಾಜಿಯವರು ಕನ್ನಡ ಸೇವೆಯ ಜೊತೆಗೆ ಪ್ರಕೃತಿ ಆರಾಧಕರು ಕೂಡಾ ಆಗಿರುವ ಇವರು ಶ್ರೀ ಕೇತಕಿ ಶೈಕ್ಷಣಿಕ ಸಾಮಾಜಿಕ, ಮತ್ತು ಸಾಂಸ್ಕೃತಿಕ ಸಂಸ್ಥೆಯ ಮೂಲಕ ಪ್ರತಿವರುಷ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬಹಳ ಅದ್ದೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ ಮತ್ತು ಪ್ರಶಸ್ತಿ ನೀಡಿ ಗೌರವಿಸಿದ್ದರಲ್ಲದೆ, ಸುಮಾರು ವಿವಿಧ ಶಾಲೆಯ ಮಕ್ಕಳ ಮೆರವಣಿಗೆ, ಸುಮಾರು ಒಂದು ಸಾವಿರ ಮೀಟರ್ ಕನ್ನಡ ಬಾವುಟವನ್ನು ನಗರದೆಲ್ಲಡೆ ಮೆರವಣಿಗೆ ಯಾತ್ರೆ ಮಾಡಿರುವುದು, ಹಾಸ್ಯ ಕಲಾವಿದರಾದ ನಿಂಗರಾಜ ಸಿಂಗಾಡಿ, ಮಲ್ಲು ಜಮಖಂಡಿ, ಪ್ರಾಣೇಶ, ಮುಂತಾದವರನ್ನು ವೇದಿಕೆಗೆ ಕರೆಯಿಸಿ ಬೀದರ ಕೀರ್ತಿಯನ್ನು ಎಲ್ಲಡೆ ಹರಡಲು ಕಾರಣೀ ಭೂತರಾದವರು ಹಣ್ಮು ಪಾಜಿಯವರು. ಇದುವರೆಗೆ ಸುಮಾರು ೩೦೦ ರಕ್ಕೂ ಹೆಚ್ಚು ಎಲೆಮರೆ ಕಾಯಿಯಂತೆ ಇರುವ ಸಾಧಕರನ್ನು ಗುರುತಿಸಿ ಅವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ, ನೀಡಿ ಗೌರವಿಸುತ್ತಿರುವುದರ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದು ಅವರು ನೀಡಿರುವ ಪ್ರಶಸ್ತಿಗೆ ನಾನೂ ಕೂಡ ಪ್ರಾತನಾಗಿದ್ದೇನೆ.

ಹವ್ಯಾಸ

ಕನ್ನಡ ಚಲನಚಿತ್ರ ನಟರಾದ ಸುದೀಪ್, ಅರ್ಜುನ ಕಿಶೋರ್, ಆದರ್ಶ ಗೌಡ ಸೇರಿದಂತೆ ಹಲವಾರು ಕಲಾವಿದರೊಂದಿಗೆ ನಂಟು ಹೊಂದಿರುವ ಹಣ್ಮು ಪಾಜಿಯವರು ಕನ್ನಡದ ಪ್ರಖ್ಯಾತ ನಟ ಸುದೀಪ್ ರವರ ಕಟ್ಟಾ ಅಭಿಮಾನಿಯಾದ ನಗು ಮುಖದ ಹಣ್ಮು ಪಾಜಿಯವರು ಅವರಂತೆ ಕೇಶವಿನ್ಯಾಸ ಮಾಡಿಸಿದ್ದಾರೆ, ಗಡ್ಡ ಮೀಸೆ ಬಿಟ್ಟಿದ್ದಾರೆ,ತಮ್ಮ ಮೋಹಕ ನಗುವಿನಿಂದ ಎಲ್ಲರನ್ನೂ ಸೆಳೆಯುವ ಇವರು ಕನ್ನಡಮ್ಮನ ಸೇವೆ, ಸಮಾಜದ ಕೈಂಕರ್ಯದ ಜೊತೆ ಜೊತೆಗೆ ನಟನಾಗುವ ಹುಚ್ಚು ಹಿಡಿಸಿಕೊಂಡಿರುವರು.

ಸುದೀಪ್ ಪ್ರಧಾನ ಪಾತ್ರದ ದಿ ವಿಲನ್, ಉಪೇಂದ್ರ- ಸುದೀಪ್ ಅಭಿನಯದ ಮುಕುಂದ ಮುರಾರಿ, ಲೈಫ್ 360 ,ಗಾಂಚಲಿ ಮುಂತಾದ ಚಿತ್ರಗಳಲ್ಲಿ ಸಹ ನಟರಾಗಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

ಚಿತ್ರರಂಗದಲ್ಲಿ ಏಳು ಬೀಳನ್ನು ಕಂಡಿರುವ ಹಣ್ಮು ಪಾಜಿಯವರು ಸ್ವಂತ ನಿರ್ದೇಶನದಲ್ಲಿ “ಹೈಜಾಕ್” (2013-16)ಚಿತ್ರವನ್ನು ಬಿ. ವಿ. ಬಿ. ಕಾಲೇಜು ಸೇರಿದಂತೆ ಬೀದರ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದರು, ಅದೇ ರೀತಿ “ರೋಹಿಣಿ” ಚಿತ್ರವನ್ನು ಚಿತ್ರೀಕರಣಕ್ಕಾಗಿ ಕೈಗೆತ್ತಿಕೊಂಡರು ಆದರೆ ಕಾರಣಾoತರಗಳಿಂದ ಎರಡೂ ಚಲನಚಿತ್ರಗಳನ್ನು ಪೂರ್ಣಗೊಳಿಸಲು ಆಗಲಿಲ್ಲ ಅನ್ನುವ ಬೇಸರವನ್ನು ಹಣ್ಮು ಪಾಜಿಯವರು ವ್ಯಕ್ತಪಡಿಸುತ್ತಾರೆ. ಆದರೆ ಯಾವುದಕ್ಕೂ ನಿರಾಶರಾಗದ ಅವರು ಒಂದಿಲ್ಲ ಒಂದು ದಿನ ಚಿತ್ರರಂಗದಲ್ಲಿ ಅದ್ರಷ್ಟ ಒಲಿಯಬಹುದು ಎನ್ನುವ ನಿರೀಕ್ಷೆಯಲ್ಲಿಯೇ ತಮ್ಮ ಪಯಣ ಮುಂದುವರೆಸಿರುವ ಇವರು ಸದ್ಯ “ಸಖಿ” ಅನ್ನುವ ವಿಡಿಯೋ ಆಲ್ಬಮ್ ಸಾಂಗ್ ನಲ್ಲಿ ನಿರತರಾಗಿದ್ದಾರೆ.

ಹಣುಮಂತ ಹಣ್ಮು ಪಾಜಿಯಾದ ಕಥೆ

ಹಣುಮಂತ ಹಣ್ಮು ಪಾಜಿಯಾದ ಕಥೆ ಒಂದು ರೀತಿ ಸ್ವಾರಸ್ಯಕರವಾಗಿದೆ. ಹಣಮಂತನವರು ಬಾಬುವಾಲಿಯಯವರ ಒಡೆತನದ ಕನ್ನಿಕಾ ಪರಮೇಶ್ವರಿ ಪ್ರಾಥಮಿಕ ಶಾಲೆಯಲ್ಲಿ ೭ನೇ ತರಗತಿಯಲ್ಲಿ ಓದುತ್ತಿರುವಾಗ ಶಾಲೆ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಸಿಕ್ಕ (ಪಾಜಿ) ವೇಷದ ಪಾತ್ರಧಾರಿಯಾಗಿ ಅಭಿನಯ ಮಾಡಿದ ಕಾರಣಕ್ಕಾಗಿ ಶಾಲೆ ಶಿಕ್ಷಕ ವೃoದವರಿಂದ ಮತ್ತು ಎಲ್ಲಾ ಶಾಲೆಯ ಸಹಪಾಠಿಗಳಿಂದ ಪ್ರಶಂಸೆಗೆ ಪಾತ್ರರಾದರು. ಮೊದಲೇ ಹಣಮಂತ ಅಂತ ಹೆಸರಿದ್ದ ಕಾರಣಕ್ಕೆ ಪಾಜಿ ಅಂತ ಸೇರಿಸಿ ಹಣ್ಮು ಪಾಜಿಯಂದು ಕರೆಯಲಾರಂಭಿಸಿದರು. ಹೀಗಾಗಿ ಅಂದಿನಿಂದ ಹಣ್ಮು ಪಾಜಿಯಾಗಿ ಜಿಲ್ಲೆಯಲ್ಲಿ ಖ್ಯಾತನಾಮರಾದರೆಂದು ಹೇಳಬಹುದು.

ಸೇವಾಸಂಸ್ಥೆಗಳು

೧) ಅಧ್ಯಕ್ಷರು :ಕೇತಕಿ ಶೈಕ್ಷಣಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ.
೨)ಅಧ್ಯಕ್ಷರು :ಕನ್ನಡ ಮನಸುಗಳ ಪ್ರತಿಷ್ಠಾನ ಸಂಸ್ಥಾಪಕ.
೩)ಅಧ್ಯಕ್ಷರು :ಜಿಲ್ಲಾ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ
೪)ಅಧ್ಯಕ್ಷರು :ಉತ್ತರ ಕರ್ನಾಟಕ ಹೋರಾಟ ಸಮಿತಿ ಯುವ ಘಟಕ.
ಮೂಲಕ ತನ್ನದೇಯಾದ ಛಾಪನ್ನು ಮೂಡಿಸಿರುವ ಇವರು ಮೊದಲೇ ಹೇಳಿದ ಹಾಗೆ ಅಪಾರ ಗೆಳೆಯರ ಬಳಗದ ಮೂಲಕ ಗುರುತಿಸಿಕೊಂಡಿರುವ ಇವರು ನಮ್ಮ ಬೀದರ ಜಿಲ್ಲೆಯ ಕೀರ್ತಿಯನ್ನು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಹರಡಿಸಿದ್ದಾರೆ.

ಹಣ್ಮು ಪಾಜಿಯವರ ಕನ್ನಡ ಪರ ರೈತಪರ ನೊಂದವರ ಪರ ಹೋರಾಟ ಸೇವೆಯನ್ನು ಗುರುತಿಸಿ ಹಲವಾರು ಕನ್ನಡ ಪರ ಸಂಘಟನೆಗಳು ಗೌರವ ಪುರಸ್ಕಾರ ನೀಡಿ ಗೌರವಿಸಿವೆ.

ಪ್ರಶಸ್ತಿ ಪುರಸ್ಕಾರಗಳು

೧)ಸಾಧಕ ರತ್ನ ಪ್ರಶಸ್ತಿ : ಜಿಲ್ಲಾ ಕರ್ನಾಟಕ ಸಂಘಟನಾ ವೇದಿಕೆ ಕಲ್ಬುರ್ಗಿ
೨)ಕರ್ನಾಟಕ ರತ್ನ ಪುನೀತ್ ರಾಜಕುಮಾರ ರಾಜ್ಯ ಪ್ರಶಸ್ತಿ :ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಬೀದರ್
೩)ಧರಿ ನಾಡು ರಾಜ್ಯ ಪ್ರಶಸ್ತಿ
೪)ಕಾಯಕ ರತ್ನ ಪ್ರಶಸ್ತಿ
೫)ಕನ್ನಡ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಭಾಜನರಾದ ಇವರು ತಮ್ಮ ಬದುಕಿನಲ್ಲಿ ಸಂಕಷ್ಟದ ದಿನಗಳು ಬಂದರೂ ಅದನ್ನು ಸಂತೋಷದಿಂದ ಸ್ವೀಕರಿಸಿ ಸಾಗಿಸುವ ಸರಳ ಹೃದಯಿ ಹಣ್ಮು ಪಾಜಿಯವರ ಬದುಕು ಹಸನಾಗಲಿ ಅವರ ನಟನಾಗುವ ಕನಸು ನನಸಾಗಲೆಂದು ಹಾರೈಸುವೆ.

  • ಓಂಕಾರ ಪಾಟೀಲ
    ಕಾರ್ಯದರ್ಶಿ: ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ್
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!