ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೇಡಿಕೆ ಈಡೇರಿಕೆಗೆ ಸರ್ಕಾರದ ಸ್ಪಂದನೆ : ಧರಣಿ ವಾಪಸ್: ಪಟಾಕಿ ಸಿಡಿಸಿ ಸಂಭ್ರಮಿಸಿದ ಬಸವಾಭಿಮಾನಿಗಳು

ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಳೆಯ ತಹಸಿಲ್ದಾರ್ ಕಚೇರಿಯ ಮುಂದೆ ಪಟ್ಟಣದಲ್ಲಿ ಬಸವ ಭವನ ನಿವೇಶನ ಮಂಜೂರಿಗೆ ಮೂರು ದಿನಗಳಿಂದ ನಡೆಯುತ್ತಿದ್ದ ಧರಣಿ ಸತ್ಯಾಗ್ರಹವನ್ನು ಅಧಿಕಾರಿಗಳ ಭರವಸೆ ಮೇರೆಗೆ ವಾಪಸ್ ಪಡೆಯಲಾಗಿದೆ. ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ, ಡಿ ವೈ ಎಸ್ ಪಿ ಸಂಗಮನಾಥ ಹಿರೇಮಠ ತಹಶೀಲ್ದಾರ್‌ ಹಳೆಯ ಕಚೇರಿ ಎದುರಿಗಿದ್ದ ಧರಣಿ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರ ಮನವೊಲಿಸಿದರು. ನಂತರ ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಘಟಕ ಮತ್ತು ಬಸವಪರ ಸಂಘಟನೆಗಳ ಅಧ್ಯಕ್ಷ ಶರಣು ಪಾಟೀಲ ನೇತೃತ್ವದಲ್ಲಿ ನಡೆಸುತ್ತಿದ್ದ ಧರಣಿಯನ್ನು ಹಿಂಪಡೆಯಲಾಯಿತು. ಪಟಾಕಿ ಸಿಡಿಸಿ, ಸಿಹಿ ತಿಂದು ಸಂಭ್ರಮಿಸಿದರು. ಚಿಂಚೋಳಿ ಪಟ್ಟಣ ವ್ಯಾಪ್ತಿಯ ನೀಮಾ ಹೊಸಳ್ಳಿ ಕ್ರಾಸ್‌ನಲ್ಲಿ ಬರುವ ಸ. ನಂ. 242ರಲ್ಲಿ ಬರುವ ಸರ್ಕಾರಿ ಗಾಯರಾಣ ಜಮೀನಿನಲ್ಲಿ 2 ಎಕರೆ ಜಮೀನು ಮಂಜೂರಾತಿಯ ಭರವಸೆ ನೀಡಿದ್ದಾರೆ. ಜೂನ್‌ 21ರ ರಾತ್ರಿ ತಹಶೀಲ್ದಾರ್‌ ಹಳೆಯ ಕಚೇರಿ ಆವರಣದಲ್ಲಿ ಬಸವ ಭವನದ ಫಲಕ ನೆಟ್ಟು ಧ್ವಜ ಕಟ್ಟಲಾಗಿತ್ತು. ಇದನ್ನು ತಾಲ್ಲೂಕು ಆಡಳಿತ ಸೋಮವಾರ ತೆರವುಗೊಳಿಸಿತ್ತು. ಇದನ್ನು ಖಂಡಿಸಿ ಸೋಮವಾರ ರಾತ್ರಿಯಿಂದಲೇ ಧರಣಿ ಆರಂಭಿಸಲಾಗಿತ್ತು.


ಧರಣಿಯಲ್ಲಿ ವೀರಣ್ಣ ಗಂಗಾಣಿ, ವೀರೇಶ್ ಯಂಪಳ್ಳಿ, ಶಿವರಾಜ ಪಾಟೀಲ ಗೊಣಗಿ, ಸೂರ್ಯಕಾಂತ ಹುಲಿ, ವೀರೇಶ, ಶಿವಶರಣಪ್ಪ, ನಂದಿಕುಮಾರ, ಸುಭಾಷ ಸೀಳಿನ್, ಸಂತೋಷ ಕಶೆಟ್ಟಿ, ಸುರೇಶ ದೇಶಪಾಂಡೆ, ಬಸವರಾಜ ಪುಣ್ಯಶೆಟ್ಟಿ, ಕಾಶಿನಾಥ ಹುಣಜೆ, ಗುರು ಪಡಶೆಟ್ಟಿ, ಶಿವು ಸ್ವಾಮಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ವರದಿ ಚಂದ್ರಶೇಖರ್ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!