ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಾವನ್ನು ಕೊಲ್ಲದೆ ಸಂರಕ್ಷಿಸಲು ಉರಗ ರಕ್ಷಕ ಅಂಜಪ್ಪ ಕಂದೂರ್ ಮನವಿ

ಉರಗ ರಕ್ಷಣೆಗೆ ಸದಾ ಸಿದ್ದ!

ಯಾದಗಿರಿ/ಗುರುಮಠಕಲ್: ಮಳೆಗಾಲ ಬಂತೆಂದರೆ ಅಲ್ಲಲ್ಲಿ ಜೀವಜಂತುಗಳು ಜನವಸತಿ ಪ್ರದೇಶದತ್ತ ನುಗ್ಗುವದು ಸಾಮಾನ್ಯವಾಗಿದೆ.

ನಗರೀಕರಣದ ಹೆಸರಿನಲ್ಲಿ ಅರಣ್ಯ ಪ್ರದೇಶ ನಾಶದಿಂದ ಹಾವುಗಳು ಅಲ್ಲಲ್ಲಿ ಕಂಡು ಬರುತ್ತವೆ, ಜನರಿಗೆ ಹಾವಿನ ಕುರಿತು ಕಡಿಮೆ ತಿಳಿವಳಿಕೆ ಮತ್ತು ಅನಗತ್ಯ ಭಯದ ಕಾರಣದಿಂದ ಜನವಸತಿ ಪ್ರದೇಶ ಕಡೆಗೆ ಬಂದರೆ ಮೊದಲು ಸಾಯಿಸಲು ಮುಂದಾಗುತ್ತಾರೆ. ಆದರೆ ಗುರುಮಠಕಲ್ ಪಟ್ಟಣದ 20 ವರ್ಷದ ಯುವಕ ಅಂಜಪ್ಪ ಹಾವುಗಳನ್ನು ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಡುವ ಮಾನವೀಯ ಕೆಲಸಕ್ಕೆ ತೊಡಗಿಸಿಕೊಂಡಿರುವುದು ಶ್ಲಾಘನೀಯ ಸಂಗತಿ.

ಹಾವುಗಳು ಕಂಡರೆ ಧೈರ್ಯಗೆಡುವವರೇ ಹೆಚ್ಚು, ಇದಕ್ಕೆ ಅಪವಾದವೆಂಬಂತೆ ಅಂಜಪ್ಪ ಕಂದೂರ್ ಯಾವ ಭಯವೂ ಇಲ್ಲದೇ ನಾಗರ ಹಾವು, ಕೇರೆ ಹಾವು, ಹಸಿರು ಹಾವು, ಕೊಳಕು ಮಂಡಲ, ನೀರ ಹಾವು ಸೇರಿದಂತೆ ನಾನಾ ಜಾತಿಯ 2000 ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುವ ಮೂಲಕ ಸೈ ಎನಿಸಿದ್ದಾರೆ. ಅವುಗಳಿಗೆ ಯಾವುದೇ ಗಾಯ ಮಾಡದೇ ಪ್ಲಾಸ್ಟಿಕ್ ಚೀಲ, ಡಬ್ಬದಲ್ಲಿ ಹಾಕಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬರುತ್ತಾರೆ.

ಹಾವುಗಳ ರಕ್ಷಣೆ ಸಮಯದಲ್ಲಿ ಮೂರು ಬಾರಿ ಅವುಗಳಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆದು ಮತ್ತೆ ಅದೇ ಪ್ರವೃತ್ತಿಯಲ್ಲಿ ಮುಂದುವರೆದಿದ್ದಾರೆ, ಹಾವು ಬಂದಿದೆ ಎಂದು ಯಾರೇ ಕರೆ ಮಾಡಿದರೂ ಸ್ಥಳಕ್ಕೆ ಧಾವಿಸಿ, ಹಾವನ್ನು ಹಿಡಿದು ಹಾವುಗಳನ್ನು ಸಾಯಿಸದೇ ಅವುಗಳಿಗೂ ಬದುಕುವ ಅವಕಾಶ ನೀಡಿ ಎಂದು ಜನರಿಗೆ ತಿಳಿ ಹೇಳುತ್ತಾನೆ, ಹಾವು ಕೈಯಿಂದಲೇ ಅದರ ಬಾಲ ಹಿಡಿದು ಅದನ್ನು ಚೀಲಕ್ಕೆ ಹಾಕಿ ಊರಿನ ಹೊರ ವಲಯದಲ್ಲಿ ಬಿಟ್ಟು ಬರುವುದು ನಾಲ್ಕು ವರ್ಷಗಳಿಂದ ಮಾಡುತ್ತಿರುವುದು ನನಗೆ ಖುಷಿ ತಂದಿದೆ ಎಂದು ನಗುತ್ತಾ ಹೇಳುತ್ತಾರೆ ಅಂಜಪ್ಪ.

ಅಂಜಪ್ಪನ ಸೇವೆಗೆ ನಾಗರೀಕರು ಪ್ರಶಂಸೆ ಸಲ್ಲಿಸಿದ್ದಾರೆ, ನಿಮ್ಮ ಸೇವೆಗೆ ನಮ್ಮದೊಂದು ಸಲಾಮ್.. ನಿಮ್ಮ ಈ ಸೇವೆ ಹೀಗೆಯೇ ಮುಂದುವರೆಯಲಿ ಎಂಬುದು ಎಲ್ಲರ ಮನದಾಶಯ.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!