ಬೈಕ್ ರ್ಯಾಲಿ ವೇಳೆ ಬಿದ್ದು ಗಾಯಗೊಂಡ ಮಾಜಿ ಸಚಿವ
ದಾವಣೆಗೆರೆ : ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಬೈಕ್ ರ್ಯಾಲಿಯಲ್ಲಿ ಬಿದ್ದು, ಗಾಯಗೊಂಡು, ಆಸ್ಪತ್ರೆ ಸೇರಿದ್ದಾರೆ. ಭದ್ರಾ ಬಲದಂಡೆ ನಾಲೆ ಕಾಮಗಾರಿ ವಿರೋಧಿಸಿ ಬೃಹತ್ ಪ್ರತಿಭಟನೆ, ಬೈಕ್ ಬೈಕ್ ರ್ಯಾಲಿ ಕೈಗೊಳ್ಳಲಾಗಿತ್ತು. ಈ ವೇಳೆ ದಾವಣಗೆರೆ ಮಹಾನಗರ ಪಾಲಿಕೆ ಕಚೇರಿ ಬಳಿಯ ಕೆಳಸೇತುವೆ ಬಳಿ ರೇಣುಕಾಚಾರ್ಯ ತೆರಳುತ್ತಿದ್ದ ಬೈಕ್ ಸ್ಕಿಡ್ ಆಗಿದೆ.
ನಾಳೆ ದಾವಣಗೆರೆ ಬಂದ್ಗೆ ರೈತ ಸಂಘಟನೆಗಳು ಕರೆ ನೀಡಿದ್ದವು. ಬಂದ್ಗೆ ಸಹಕರಿಸಲು ಬೈಕ್ ರ್ಯಾಲಿ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಲಾಗ್ತಿತ್ತು. ದಾವಣಗೆರೆಯ ಹಳೆಯ ಪ್ರವಾಸ ಮಂದಿರದಿಂದ ಶುರುವಾಗಿದ್ದ ರ್ಯಾಲಿಯಲ್ಲಿ ರೇಣುಕಾಚಾರ್ಯ ಸೇರಿದಂತೆ ಹಲವರು ಭಾಗಿಯಾಗಿದ್ದರು. ಮೊದಲು ಬುಲೆಟ್ ಏರಿ ಬೈಕ್ ರ್ಯಾಲಿಯಲ್ಲಿ ರೇಣುಕಾಚಾರ್ಯ ಭಾಗಿಯಾಗಿದ್ರು. ಬಳಿಕ ಎಲೆಕ್ಟ್ರಿಕ್ ಸ್ಕೂಟರ್ ಏರಿ ಬೈಕ್ ರ್ಯಾಲಿಯಲ್ಲಿ ರೇಣುಕಾಚಾರ್ಯ ಸವಾರಿ ಮಾಡುತ್ತಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















