ಬಳ್ಳಾರಿ / ಕಂಪ್ಲಿ : ನಗರ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ವಿವಿಧ ಕಡೆಗಳಲ್ಲಿ ಮೊಹರಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಹುಲಿ ವೇಷಧಾರಿಗಳ ಕುಣಿತದ ಮೆರವಣಿಗೆ ನೋಡಲು ಎರಡು ಕಣ್ಣುಗಳು ಸಾಲದು.
ಹೌದು, ಹರಕೆ ಹೊತ್ತ ನೂರಾರು ಮಕ್ಕಳು ಹಾಗೂ ಯುವಕರು ಹುಲಿ ವೇಷ ಹಾಕಿಕೊಂಡು ಕುಣಿದು ಹರಕೆ ತೀರಿಸುವುದನ್ನು ನೋಡುವುದೇ ಒಂದು ಖುಷಿ. ಹಲಗೆ ಸೌಂಡ್ಗೆ ಹುಲಿ ವೇಷಧಾರಿಗಳು ಸಖತ್ ಸ್ಟೆಪ್ ಹಾಕುವುದು, ಜನ ಕೇಕೆ, ಸಿಳ್ಳೆ ಹೊಡೆಯುವುದು. ನೋಡಲು ತುಂಬಾ ಚೆನ್ನಾಗಿರುತ್ತದೆ. ಸಾರ್ವಜನಿಕರು ಸಂತೋಷಕ್ಕಾಗಿ ಹಣವನ್ನು ಕುಣಿತದವರಿಗೆ ನೀಡುತ್ತಾರೆ. ತಮಗೆ ಕಷ್ಟಗಳು ಬಂದಾಗ ಬೇಡಿಕೊಂಡಿದ್ದು, ಹರಕೆ ಕಟ್ಟಿಕೊಂಡಿದ್ದೆವು. ಕಷ್ಟಗಳು ದೂರವಾಗಿ, ಬೇಡಿಕೆಗಳು ಇಷ್ಟಾರ್ಥಗಳು ಈಡೇರಿದ್ದರಿಂದ ಪ್ರತಿ ವರ್ಷ ಹುಲಿ ವೇಷ ಹಾಕಿ ಕುಣಿದು ನಮ್ಮ ಹರಕೆ ತೀರುಸುತ್ತೇವೆ ಅಂತಿದ್ದಾರೆ ಹುಲಿ ವೇಷಧಾರಿಗಳು. ಹಿಂದೂ- ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರುವ ಮೊಹರಂ ಹಬ್ಬವನ್ನು ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸುತ್ತಿರುವುದು ತುಂಬಾ ಖುಷಿ ವಿಚಾರವಾಗಿದೆ.
ಮೊಹರಂ ಹಬ್ಬದ ಕತ್ತಲು ರಾತ್ರಿ ಈ ದಿನದಂದು ರಾತ್ರಿ ಪಂಜಾದ (ದೇವರು) ಮುಜುವಾರರವರು ಕೆಂಡವನ್ನು ತುಳಿದು ಮಸೀದಿಗಳಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಂಜಗಳ ಮೆರವಣಿಗೆ ನಡೆಸುತ್ತಾರೆ.
ವರದಿ : ಜಿಲಾನಸಾಬ್ ಬಡಿಗೇರ



















