ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಚೇಳಾೈರು ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ

ದಕ್ಷಿಣ ಕನ್ನಡ /ಮಂಗಳೂರು : ದಿನಾಂಕ 09/೦7/2025: ನಗರದ ಹೊರವಲಯದ ಚೇಳಾೈರು ಗ್ರಾಮದ ದ. ಕ. ಜಿಲ್ಲಾ ಪಂಚಾಯತ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಎಂ. ಆರ್. ಪಿ. ಎಲ್ ಸಂಸ್ಥೆಯಿಂದ 30 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ನೂತನ ಶಾಲಾ ಕೊಠಡಿಗಳನ್ನು ಮೂಡಬಿದ್ರೆ ಕ್ಷೇತ್ರದ ಶಾಸಕ ಶ್ರೀ ಉಮಾನಾಥ ಎ ಕೋಟ್ಯಾನ್ ರವರು ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಜಯಾನಂದ ವಹಿಸಿದ್ದರು.
ಎಂ. ಆರ್.ಪಿ.ಎಲ್ ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀ ಶ್ರೀನಿವಾಸ್ ಮತ್ತು ಇಂಜಿನಿಯರ್ ಶ್ರೀಮತಿ ಪವಿತ್ರ ಉಪಸ್ಥಿತರಿದ್ದರು.
ಮಾನ್ಯ ಶಾಸಕ ಉಮಾನಾಥ ಕೊಟ್ಯಾನರು ಈ ಕಟ್ಟಡ ನಿರ್ಮಾಣ ಆಗಲು ಶ್ರಮಿಸಿದ ಶಾರದಾ ವಿದ್ಯಾ ಸೇವಾ ಸಂಸ್ಥೆಯ ಸಾಧನೆಯನ್ನು ಮತ್ತು ಎಂ. ಆರ್. ಪಿ .ಎಲ್ ಸಂಸ್ಥೆಯನ್ನು ಶ್ಲಾಘಿಸಿದರು. ಶಾರದಾ ವಿದ್ಯಾ ಸೇವಾ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ವೀಣಾ ಟಿ ಶೆಟ್ಟಿ ಯವರು ಸಂಸ್ಥೆ ನಡೆದು ಬಂದ ಹಾದಿಯನ್ನು ಸಭೆಗೆ ವಿವರಿಸಿ ಶಾಲೆಯ ಉಳಿವಿಗೆ ಟ್ರಸ್ಟ್ ನ ಕಾರ್ಯ ಯೋಜನೆಗಳಲ್ಲಿ ಸಾರ್ವಜನಿಕರು, ಪೋಷಕರು ಮತ್ತು ಸರಕಾರದ ಸಹಕಾರವನ್ನು ಕೋರಿದರು. ಎಂ .ಆರ್. ಪಿ. ಎಲ್. ಸಂಸ್ಥೆಯ ಇಂಜಿನಿಯರ್ ಶ್ರೀಮತಿ ಪವಿತ್ರಾ ರವರು ಶುಭ ಕೋರಿದರು ಮತ್ತು ಮುಂದೆಯೂ ಸಂಸ್ಥೆ ಯಿಂದ ಸಾಧ್ಯ ಆಗುವ ಸಹಕಾರ ಕೊಡುವ ಭರವಸೆ ನೀಡಿದರು.
ಶಾಲೆಯ ಪರವಾಗಿ ಎಂ. ಆರ್. ಪಿ. ಎಲ್ ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀ ಶ್ರೀನಿವಾಸ್ ಮತ್ತು ಗುತ್ತಿಗೆದಾರ ಶ್ರೀ ವೆಂಕಟೇಶ ಶೆಟ್ಟಿಯವರನ್ನು ಫಲ ಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶಾರದಾ ವಿದ್ಯಾ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಶ್ರೀ ಚಂದ್ರಶೇಖರ ಹೆಬ್ಬಾರ್ ಕೊಲ್ಯ, ಕೋಶಾಧಿಕಾರಿ ಶ್ರೀ ಸುಧಾಕರ ಶೆಟ್ಟಿ, ತಾಲೂಕ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶ್ರೀ.ಮಹೇಶ್ ಹೊಳ್ಳ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀ ರಾಜ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ದೀಪಕ್, ಟ್ರಸ್ಟ್ ನ ಸದಸ್ಯರಾದ ಶ್ರೀ ಶ್ರೀನಿವಾಸ ಅಮೀನ್, ಶ್ರೀ ದಿವಾಕರ ಸಾಮಾನಿ, ಶ್ರೀ ಪ್ರತಾಪ್ ಶೆಟ್ಟಿ, ಶ್ರೀ ದಿವಾಕರ ಶೆಟ್ಟಿ, ಶ್ರೀ ಪ್ರಭಾಕರ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ರೇಖಾ, ಅಭಿವೃದ್ಧಿ ಅಧಿಕಾರಿ ಶ್ರೀ ನಿತ್ಯಾನಂದ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ವಜ್ರಾಕ್ಷಿ ಪಿ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀ ಪುಷ್ಪರಾಜ ಶೆಟ್ಟಿ, ಪಂಚಾಯತ್ ಸದಸ್ಯ ಶ್ರೀ ಬಾಲಕೃಷ್ಣ ಶೆಟ್ಟಿ, ಮಾಜಿ ಸದಸ್ಯ ಸುರೇಶ ಸಾಲ್ಯಾನ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಶ್ರೀಮತಿ ಜ್ಯೋತಿ ಚೇಳಾರು, ಉಪನ್ಯಾಸಕ ಶ್ರೀ ಚಂದ್ರನಾಥ್, ಶ್ರೀಮತಿ ಶೋಭಾ ಶರ್ಮ, ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ತೆರೇಸಾ ವೇಗಸ್, ಗಣ್ಯರಾದ ಶ್ರೀ ರಮೇಶ ಪೂಜಾರಿ, ಶ್ರೀ ವಿಶ್ವನಾಥ ಆಚಾರ್ಯ, ಶ್ರೀ ಭುಜಂಗ ಶೆಟ್ಟಿ, ಶ್ರೀ ಪ್ರಭಾಕರ ಶೆಟ್ಟಿ ಮಧ್ಯ, ಶ್ರೀ ಸದಾನಂದ ರೈ, ಶ್ರೀ ಜಯರಾಮ ಆಚಾರ್ಯ , ಶ್ರೀ ಅಚ್ಚುತ ಆಚಾರ್ಯ, ಶ್ರೀ ಚರಣ್ ಕುಮಾರ್, ಶ್ರೀ ಕಿರಣ್ ಶೆಟ್ಟಿ ಕೆರೆಮನೆ, ಶ್ರೀ ಸಂತೋಷ್ ಅಮೀನ್, ಶ್ರೀ ಚಂದ್ರಶೇಖರ ಶೆಟ್ಟಿ, ಶಾಲಾ ಶಿಕ್ಷಕಿ ಶ್ರೀಮತಿ ಪವಿತ್ರ, ಶ್ರೀಮತಿ ಸುನೀತಾ , ಅಂಗನವಾಡಿ ಶಿಕ್ಷಕಿ ಶ್ರೀಮತಿ ವಂದನಾ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಶ್ರೀಮತಿ ಸುರೇಖಾ ಮತ್ತು ಶ್ರೀಮತಿ ಮಣಿತ ಕಾರ್ಯಕ್ರಮ ನಿರ್ವಹಿಸಿದರು.
ಮುಖ್ಯ ಶಿಕ್ಷಕಿ ಶ್ರೀಮತಿ ವಿಶಾಲಾಕ್ಷಿ ಸ್ವಾಗತಿಸಿದರು ಮತ್ತು ವ್ಯವಸ್ಥಿತವಾಗಿ ಆಯೋಜಿಸಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!