ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಗಳು ನಿಗದಿತ ಸಮಯಕ್ಕೆ ಬಾರದೆ ಬೇಕಾ ಬಿಟ್ಟಿಯಾಗಿ ಸಂಚರಿಸುತ್ತಿವೆ. ಕೊಪ್ಪದಿಂದ ಬೆಳಿಗ್ಗೆ 7:40ಕ್ಕೆ ಹರಿಹರಪುರ, ಬೆಳಗದ್ದೆ ಮಾರ್ಗವಾಗಿ ಶೃಂಗೇರಿಗೆ ತಲುಪುವ ಬಸ್ಸು ಕೆಲವೊಂದು ದಿನ ಬರುವುದೇ ಇಲ್ಲ ಶಾಲಾ ಮಕ್ಕಳಿಗೆ, ಕೆಲಸಕ್ಕೆ ತೆರಳುವ ಜನರಿಗೆ ತೊಂದರೆ ಉಂಟಾಗಿದೆ ಎಂದು ಶಾನೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್ ಕುಮಾರ್ ರವರು ಕೆ ಎಸ್ ಆರ್ ಟಿ ಸಿ ಚಾಲಕ ನಿರ್ವಾಹಕರಿಗೆ ತರಾಟೆಗೆ ತೆಗೆದುಕೊಂಡರು. ಸರಿಯಾದ ಸಮಯಕ್ಕೆ ಬಸ್ ಬಾರದಿದ್ದರೆ , ಮುಂದಿನ ದಿನಗಳಲ್ಲಿ ಕೆ ಎಸ್ ಆರ್ ಟಿ ಸಿ ಕಚೇರಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ವರದಿ :ಪ್ರಸಾದ್ ಹೆಚ್ ಬಿ, ತೀರ್ಥಹಳ್ಳಿ.



















