
ಬೆಳಗಾವಿ/ ಅಥಣಿ ನಗರದ ವಾರ್ಡ್ 21ರಲ್ಲಿ ಧರ್ಮವೀರ ಛತ್ರಪತಿ ಶ್ರೀ ಸಂಭಾಜಿ ಮಹಾರಾಜರ ಉದ್ಯಾನವನದ ಉದ್ಘಾಟನೆ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿಯವರು ಉದ್ಘಾಟನೆಯನ್ನು ನೆರವೇರಿಸಿದರು.
ಇದೇ ಕಾರ್ಯಕ್ರಮದಲ್ಲಿ ಅಥಣಿಯ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಶಿವಲೀಲಾ ಬುಟಾಳಿ, ಉಪಾಧ್ಯಕ್ಷರಾದ ಶ್ರೀಮತಿ ಭುವನೇಶ್ವರಿ ಯಂಕಚ್ಚಿ, ಹಾಗೂ ವಾರ್ಡ್ 21ರ ಪುರಸಭೆಯ ಸದಸ್ಯರಾದ ಶ್ರೀ ವಿಲಿನರಾಜ ಯಳಮಲಿ ಪುರಸಭೆ ಸದಸ್ಯರಾದ ಶ್ರೀ ಸಂತೋಷ ಸಾವಡಕರ,ಶ್ರೀ ದತ್ತಾ ವಾಸ್ಟರ, ಶ್ರೀ ಮಲ್ಲೇಶ ಹುದ್ದಾರ, ಶ್ರೀ ರಾಜು ಗುಡೊಡಗಿ, ವಾರ್ಡ್ ನ ಹಿರಿಯ ಮುಖಂಡರಾದ ಶ್ರೀ ಶಂಕರರಾವ ದೇಸಾಯಿ, ಶ್ರೀ ಬಾವು ಜಾಧವ ಹಾಗೂ ಹಿರಿಯ ಮುಖಂಡರು ಮತ್ತು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ವರದಿ. ವಿಠ್ಠಲ ಖೋಕಾಟೆ ಅಥಣಿ.



















