
ಬಳ್ಳಾರಿ / ಕಂಪ್ಲಿ : ಮೊಹರಂ ಎಂದಾಕ್ಷಣ ಬರುವುದು ಹಲಿಗೆ ಬಡಿತ, ಹುಲಿ ವೇಷ ಕುಣಿತ ಶೀಳ್ಳೆ ಹಾಗೂ ಕುಣಿತ ಆದರೆ ಇವುಲ್ಲದಕ್ಕೂ ಮೀರಿದ ಸರ್ವ ಜನರು ಮೆಚ್ಚುವಂತ ಕಾರ್ಯಕ್ರಮ ಜರುಗಿದೆ.
ಪಟ್ಟಣದ 2ನೇ ವಾರ್ಡ್ ನಲ್ಲಿ 20 ವರ್ಷಗಳಿಂದ ಸತತವಾಗಿ ಛೋಟಾ ಮೊಹರಮ್ ಹಬ್ಬದ ಅಂಗವಾಗಿ ಕೌಡೆ ಪೀರಲ ದೇವರ ಪ್ರತಿಷ್ಟಾಪಿಸುತ್ತ ಬಂದಿರುವ ಮೌಲಾಲಿತಾತ ಯುವಕರ ಸೇವಾ ಟ್ರಸ್ಟ್ ವತಿಯಿಂದ ಜುಲೈ 12, ಶನಿವಾರ ಮಸೀದಿ ಆವರಣ ಹಾಗೂ ರಸ್ತೆಯ ಬದಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.
ಈ ಕಾರ್ಯಕ್ರಮಕ್ಕೆ ಪುರಸಭೆ ಸದಸ್ಯರಾದ ಸತ್ಯಪ್ಪ ಹಾಗೂ ವಸಂತ್ ರವರು ಚಾಲನೆ ನೀಡಿದರು.
ಪ್ರತಿ ವರ್ಷ ವಿಭಿನ್ನವಾಗಿ ಹಾಗೂ ವಿಶೇಷವಾಗಿ ಹಬ್ಬ ಆಚರಣೆ ಮಾಡುತ್ತಿದ್ದು, ಈ ಬಾರಿ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ಕೆ ಮುಂದಾಗಿದ್ದಾರೆ ಯುವಕರು, ಅನ್ನ ಸಂತರ್ಪಣೆ, ಗಿಡ ನೆಡುವ ಕಾರ್ಯಕ್ರಮ, ಸ್ವಚ್ಚತಾ ಆಂದೋಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮುಸ್ತಫಾ, ಅಂಬಾದಾಸ್, ವೆಂಕಟೇಶ್, ಮುಕ್ಕಣ್ಣ, ಬಂಡಾರಿ ಮಂಜು, ಬಂಡಿ ರಮೇಶ್, ಬಸವ ಸೇರಿದಂತೆ ಟ್ರಸ್ಟ್ ನ ಸದಸ್ಯರು ಭಾಗಿಯಾಗಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















