ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇಂಡಿ :ಒಂದು ಲಕ್ಷ ಆರು ಸಾವಿರ ಎಕರೆ ನೀರಾವರಿ ಪ್ರದೇಶ ಲೋಕಾರ್ಪಣೆ

ವಿಜಯಪುರ : ಇಂಡಿ ಮತ್ತು ಚಡಚಣ ಭಾಗದ ರೈತರಿಗೆ ವರದಾನವಾಗಲಿರುವ ಇಂಡಿ ಭಾಗದ ೭೯ ಹಳ್ಳಿಗಳಿಗೆ ಮತ್ತು ಚಡಚಣ ಭಾಗದ ೪೦ ಹಳ್ಳಿಗಳಿಗೆ ಕೃಷಿ ಮತ್ತು ಕುಡಿಯುವ ನೀರು ಮತ್ತು ಜನ ಜಾನುವಾರುಗಳಿಗೆ ಉಪಯೋಗವಾಗುವ ೧೯ ಕೆರೆಗಳಿಂದ ಒಂದು ಲಕ್ಷ ಆರು ಸಾವಿರ ಎಕರೆ ಪ್ರದೇಶ ನೀರಾವರಿ ಒದಗಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಳವಾಡ ಏತ ನೀರಾವರಿಯ ಮೂರನೆಯ ಹಂತದ ಕಾಮಗಾರಿಯಲ್ಲಿ ತಿಡಗುಂದಿ ಎಕ್ಸಟೆನಷನ್ ಮೂಲಕ ಕಿ. ಮೀ ೫೬ ರಿಂದ ಕಿ.ಮಿ ೬೬ ರ ವರೆಗೆ ೧೦ ಕಿ. ಮೀ ಕಾಲುವೆ ಮಾಡಿ ಒಟ್ಟು ೧೪ ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುತ್ತಿದೆ. ೧೯ ಗ್ರಾಮದ ರೈತರಿಗೆ ಅನುಕೂಲವಾಗಲಿದ್ದು ಇದಕ್ಕಾಗಿ ೧. ೬೮ ಟಿ ಎಂ ಸಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
ಇದರ ಉದ್ದ ೮.೫೫ ಕಿ ಮಿ ಮತ್ತು ಜಾಲ ೩೧.೦೫ ಕಿಮಿ ಇದೆ. ಈ ಕಾರ್ಯ ಸ್ಕಾಡಾ ಒಳಗೊಂಡ ಕಾರ್ಯವಾಗಿದೆ. ಬಸನಾಳ ಗ್ರಾಮದ ೫೪೪ ಹೆಕ್ಟೇರ್ ಕೋಟ್ನಾಳ ಗ್ರಾಮದ ೮೧೫ ಹೆಕ್ಟೇರ್ ನಿಂಬಾಳ ಗ್ರಾಮದ ೯೩೫ ಹೆಕ್ಟೇರ್, ಅಥರ್ಗಾ ಗ್ರಾಮದ ೧೩೦೬ ಹೆಕ್ಟೇರ್, ಹಂಜಗಿ ಗ್ರಾಮದ ೨೧೫೬ ಹೆ. ಸೇರಿದಂತೆ ಒಟ್ಟು ೩೬೭೬೦ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸಲಿದೆ.
ಇದಕ್ಕೆ ಕೇವಲ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಮತ್ತು ರಾಜ್ಯ ಸರಕಾರ ಮಾತ್ರ ಹಣ ಒದಗಿಸಿದೆ. ಇದರಲ್ಲಿ ಕೇಂದ್ರದ ಹಣ ಸಹಾಯವಿಲ್ಲ ಎಂದರು.

ತಾಲೂಕಿನ ೧೯ ಕೆರೆಗಳಿಗೆ ರಾಜ್ಯ ಸರಕಾರದಿಂದ ೩೦ ಜೂನ್ ೨೦೧೩ ರಂದು ೧೯ ಕೋಟಿ ಹಣ ಬಿಡುಗಡೆ, ೧೨ ಅಕ್ಟೋಬರ್ ೨೦೨೩ ರಂದು ೪೧ ಕೋಟಿ, ೧೦ ಜನವರಿ ೨೦೨೪ ರಂದು ೩೧ ಕೋಟಿ ಮತ್ತು ೧೫ ಏಪ್ರೀಲ್ ೨೦೨೪ ರಂದು ೫೭ ಕೋಟಿ ಹೀಗೆ ಒಟ್ಟು ರಾಜ್ಯ ಸರಕಾರ ಮಾತ್ರ ಹಣ ನೀಡಿದೆ. ೨೩೨ ಕೋಟಿ ಹಣದಲ್ಲಿ ಕೆರೆಗಳಿಗೆ ನೀರು ತುಂಬುವ ಕಾರ್ಯ ಆಗಿದೆ ಎಂದರು.
ಇನ್ನು ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಕಾಂಗ್ರೆಸ್ ಸರಕಾರ ಮಾತ್ರ ಹಣ ನೀಡಿದೆ. ಮೊದಲ ಹಂತದ ಕಾಮಗಾರಿ ಬಿಜೆಪಿ ಸರಕಾರ ತರಾತುರಿಯಲ್ಲಿ ಕೇವಲ ಅನುಮೋದನೆ ನೀಡಿ ಮಾಜಿ ಮುಖ್ಯಮಂತ್ರಿಗಳು ಶಂಕು ಸ್ಥಾಪನೆ ಮಾಡಿದ್ದರು. ನಂತರ ನಾಮ ಮೋಹನ ವರದಿ ಕೇವಲ ಅನುಮೋದನೆ ನೀಡಿದ ಹಣ ನಿಡದೇ ಇರುವ ಯೋಜನೆಗಳನ್ನು ರದ್ದು ಮಾಡಿತ್ತು. ಕಾಂಗ್ರೆಸ್ ಸರಕಾರ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನವೊಲಿಸಿ ಮತ್ತೆ ಚಾಲನೆ ನೀಡಿ ಮೊದಲ ಹಂತದ ಕಾಮಗಾರಿಗೆ ೨೯ ಆಗಸ್ಟ್ ೨೩ ರಲ್ಲಿ ೫೦ ಕೋಟಿ, ೨೧ ಫೆ. ೨೪ ರಲ್ಲಿ ೯೦ ಕೋಟಿ, ೧೪ ಏಪ್ರೀಲ್ ೨೪ ರಂದು ೫೦ ಕೋಟಿ ೧೪ ಅಕ್ಟೋಬರ್ ೨೪ ರಂದು ೧೮ ಕೋಟಿ ಮತ್ತು ೨೯ ಜ. ಮತ್ತು ೨೯ ಮಾರ್ಚ ೨೦೨೫ ರಂದು ಎರಡು ಮತ್ತು ೧೨ ಕೋಟಿ ಹಣ ಬಿಡುಗಡೆ ರಾಜ್ಯ ಸರಕಾರ ಕಾಂಗ್ರೆಸ್ ಸರಕಾರ ಮಾಡಿದೆ ಎಂದರು.

ಮೊದಲ ಹಂತದಲ್ಲಿ ಜಾಕವೆಲ್ ನಂತರ ಪೈಪ್ ಲೈನ್ ಮೂಲಕ ನೀರು ನಂತರ ಮೂರನೆಯ ಹಂತದಲ್ಲಿ ಎತ್ತರದ ಸಾವಳಸಂಗ ಪ್ರದೇಶದಿಂದ ನೀರು ವಿತರಣೆ ಹೀಗೆ ಮೂರು ಹಂತದ ಕಾಮಗಾರಿಗೆ ೩೧೦೦ ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.
ಅದರಂತೆ ಪಂಡರಾಪುರ, ಗಾಣಗಾಪುರ ಜನರಿಗೆ ಅನುಕೂಲವಾಗಲು ಚಡಚಣ ಗಾಣಗಾಪುರ ರಸ್ತೆಗೆ ೫೪೦ ಕೋಟಿ ರೂ, ಇಂಡಿಯ ಹತ್ತಿರದ ಪಡನೂರ ಗ್ರಾಮದಿಂದ ಸೋಲಾಪುರಕ್ಕೆ ಹೋಗಲು ಒಂದು ಬ್ರಿಡ್ಜ್ ೪೮ ಕೋಟಿ ವೆಚ್ಚದಲ್ಲಿ ಅನುದಾನ ಕೇವಲ ರಾಜ್ಯ ಸರಕಾರ ನೀಡಿದೆ ಎಂದರು.

ಇಂಡಿಗೆ ಜಿಟಿಟಿಸಿ ಕಾಲೇಜು ೭೩ ಕೋಟಿ ವೆಚ್ಚದಲ್ಲಿ ಹೀಗೆ ೪೫೫೨ ಕೋಟಿ ರೂ. ವೆಚ್ಚದ ಕಾಮಗಾರಿಗೆ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನಡೆಯಲಿದೆ ಎಂದರು.
ಇಂಡಿಯಲ್ಲಿ ನೂತನ ಮೆಗಾ ಮಾರುಕಟ್ಟೆಗೆ ೩೦ ಕೋಟಿ ರೂ. ಜಲ ಜೀವನ ಮಿಷನ್ ಗೆ ೮೦ ಕೋಟಿ, ಆಳುರ ಗ್ರಾಮದಲ್ಲಿ ಬಾಂದಾರ ಒಂದು ಕೋಟಿ, ಇಂಡಿಯಲ್ಲಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಝಳಕಿಯಲ್ಲಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ , ಝಳಕಿಯಲ್ಲಿ ಸರಕಾರಿ ಪಾಲಿಟೆಕ್ನಿಕ್ ಅಗರಖೇಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಿಗೆ ವಸತಿ ಗ್ರಹಕ್ಕೆ ಒಂದು ಕೋಟಿ ಸೇರಿದಂತೆ ಹಲವಾರು ಕಾಮಗಾರಿ ಲೋಕಾರ್ಪಣೆ ಗೊಳ್ಳಲಿವೆ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಉಪಸ್ಥಿತರಿದ್ದರು.

ವರದಿ. ಅರವಿಂದ ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!