ಬೆಂಗಳೂರು : ಕಾಲ ಬದಲಾಗಿದೆ, ಜನ ಬದಲಾಗಿದ್ದಾರೆ ಆದರೆ ಗ್ರಾಹಕ ಬದಲಾಗುವುದಿಲ್ಲ ಗ್ರಾಹಕ ಬದಲಾಗದೆ ಇರಬೇಕಾದರೆ ವ್ಯಾಪಾರಿಗೆ ನಿಯತ್ತು ಮತ್ತು ಗ್ರಾಹಕರನ್ನು ಉಳಿಸಿಕೊಳ್ಳುವ ಕಲೆಯ ಅರಿವಿರಬೇಕು.
ಬೃಹತ್ ಬೆಂಗಳೂರಿನ ಕೃಷ್ಣರಾಜಪುರಂ ಮೆಟ್ರೋ ಸ್ಟೇಷನ್ ಸಮೀಪದ ಎ. ನಾರಾಯಣಪುರ ವಾಟರ್ ಟ್ಯಾಂಕ್ ರಸ್ತೆ ಯಲ್ಲಿರುವ ” ಶ್ರೀ ಗಣೇಶ ಫ್ರುಟ್ ಜ್ಯೂಸ್ ಸೆಂಟರ್ ” ಒಂದು ತಾಜಾ ಉದಾಹರಣೆ ಎನ್ನಬಹುದು.
ಇದರ ಮಾಲೀಕ ಹಾಸನ ಮೂಲದ ಶ್ರೀ ಮಹೇಶ್ ಗೌಡ ಸರಳ ಸಜ್ಜನ ಸ್ವಭಾದವರಾಗಿದ್ದು ವ್ಯಾಪಾರಿ ಬುದ್ಧಿಯನ್ನು ಬದಿಗಿಟ್ಟು ಸೇವಾ ದೀಕ್ಷೆಯಿಂದ ರುಚಿ ಹಾಗೂ ಸ್ವಾಧಭರಿತ 100 ಕ್ಕೂ ಹೆಚ್ಚು ರೀತಿಯ ಜ್ಯೂಸ್, ಸೋಡಾ ಅಥವಾ ಯಾವುದೇ ಹಣ್ಣುಗಳ ಲಸ್ಸಿ ಶೇಕ್ ಅಥವಾ ಜ್ಯೂಸ್ ಶೇಕ್ ಗಳನ್ನು ತಯಾರಿಸುವಲ್ಲಿ ನಿಸ್ಸೀಮರಾಗಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ತಮ್ಮ ಜ್ಯೂಸ್ ಸೆಂಟರ್ ನಡೆಸುತ್ತಿರುವ ಇವರ ಕೈಗುಣದ ರುಚಿಗೆ ಗ್ರಾಹಕರಿಂದ ಮೆಚ್ಚುಗೆಯ ಸುರಿಮಳೆಯೇ ನಿಜಕ್ಕೂ ಒಂದು ಅಧ್ಬುತ ಸಾಧನೆಯಾಗಿದೆ ಎಂದು ಕಳೆದ 2 -3 ತಿಂಗಳಿನಿಂದ ಇವರ ಜ್ಯೂಸ್ ಸೆಂಟರ್ ನಲ್ಲಿ ರುಚಿ ಹಾಗೂ ಸ್ವಾದ ಭರಿತ ವಿವಿದ ಹಣ್ಣುಗಳ ಜ್ಯೂಸ್ ಹೀರುತ್ತಿರುವ ಸಂತೃಪ್ತ ಗ್ರಾಹಕ ಇಂಡಿಯನ್ ದಿವ್ಯಾಂಗ ಎಂಪವರ್ಮೆಂಟ್ ಇದರ ಸಂಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಪ್ರಶಂಸಿಸಿದ್ದಾರೆ.
- ಕರುನಾಡ ಕಂದ



















