ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರಗತಿ ರಕ್ಷಾ ಕವಚ ಮತ್ತು ಆರೋಗ್ಯ ರಕ್ಷಾ ವಿಮೆ ಮಂಜೂರಾತಿ ಪತ್ರ ವಿತರಣೆ

ಬಳ್ಳಾರಿ / ಕಂಪ್ಲಿ : ಇತ್ತೀಚಿನ ಒತ್ತಡದ ಜೀವನದಲ್ಲಿ ಧಾರ್ಮಿಕ ಮತ್ತು ಆಧ್ಯಾತೀಕ ಮನೋಭಾವನೆಗಳನ್ನು ರೂಡಿಸಿಕೊಂಡಾಗ ಮಾತ್ರ ನೆಮ್ಮದಿ ಜೀವನ ನೆಡೆಸಲು ಸಾಧ್ಯ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.) ತಾಲೂಕು ಕಛೇರಿಯಲ್ಲಿ ಎಲ್.ಐ.ಸಿ.ಯಿಂದ ಪ್ರಗತಿ ರಕ್ಷ ಕವಚ ಮತ್ತು ಆರೋಗ್ಯ ರಕ್ಷಾ ವಿಮಾ ಯೋಜನೆಡಿಯಲ್ಲಿ ಮರಣ ಹೊಂದಿದ ಕುಟುಂಬದ ಸದ್ಯಸರ ನಾಮಿನಿದಾರರಿಗೆ ಇನ್ಸೋರೆನ್ಸ್ ರಕ್ಷಾ ಮಂಜೂರಾತಿ ಪ್ರತ ವಿತರಿಸಿ ಮಾತನಾಡಿ ಸದಸ್ಯರ ತಮ್ಮ ಕುಟುಂಬದಲ್ಲಿ ರಕ್ಷಾ ಮಂಜೂರಾತಿ ಸದುಪಯೋಗ ಪಡೆಯಿರಿ ಬಡ ಮತ್ತು ಮಾಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕವಾಗಿ ಸಬಲರಾಗಲು ಸಾಲ ನೀಡುತ್ತದೆ ಮಹಿಳೆಯರು ಸ್ವಯಂ ಉದ್ಯೋಗ ಪಡೆಯುವ ಮೂಲಕ ಆರ್ಥಿಕವಾಗಿ ಸದೃಡರಾಗಿ ಹಣವನ್ನು ಪೋಲು ಮಾಡದೆ ಉಳಿತಾಯ ಮಾಡಿ ಉತ್ತಮ ಜೀವನ ಹಾಗೂ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಗ್ರಾಮಾಭಿವೃದ್ದಿ ಯೋಜನೆ ಪ್ರತಿಯೋಬ್ಬ ಸದಸ್ಯರು ಸದುಪಯೋಗ ಪಡೆದುಕೊಳ್ಳಬೇಕು ಮರಣ ಹೊಂದಿದ 3ಜನ ಕುಟುಂಬ ಮತ್ತು 6ಜನ ಸದ್ಯಸರ ನಾಮಿನಿದಾರರಿಗೆ ಇನ್ಸೋರೆನ್ಸ್ ರಕ್ಷಾ ಮಂಜೂರಾತಿ ಪ್ರತದಲ್ಲಿ ಮೊತ್ತ 6ಲಕ್ಷ 60ಸಾವಿರ ರೂಪಾಯಿ ಮೊತ್ತ ವಿತರಿಸಲಾಯಿತು.
ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಮಾತನಾಡಿ ಸ್ವಸಹಾಯ ಸಂಘಗಳು ಉನ್ನತವಾಗಿ ಸಾಗಲು ಟ್ರಸ್ಟ್ ಶ್ರಮ ಹೆಚ್ಚಿದೆ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಂಡು ಉನ್ನತ ರಂಗದಲ್ಲಿ ಬೆಳೆಯಬೇಕು ಎಂದರು. ಡಾ. ವೆಂಕಟೇಶ ಭರಮಕ್ಕನವರ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾನವೀಯ ನೆಲೆಯಲ್ಲಿ ನಿಸ್ವಾರ್ಥ ಸೇವೆ ಮಾಡುವಲ್ಲಿ ಬಡ ಮತ್ತು ಮಧ್ಯಮ ಕುಟುಂಬಗಳಿಗೆ ವರದಾನವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಸಂಜುಕುಮಾರ್ ಮುಖಂಡರಾದ ಕ. ಮಾ. ಹೇಮಯ್ಯಸ್ವಾಮಿ ಮೇಲ್ಚಿಚಾರಕರಾದ ರಾಜು, ಪ್ರಭು ಮಂಜುನಾಥ, ಶ್ರೀಶೈಲ, ಅವಿನಾಶ, ಮಹಾಂತೇಶ, ರೇಖಾ, ಮಂಜುಳಾ ಜಯಲಕ್ಷೀ, ಸಿಬ್ಬಂದಿಗಳಾದ ಮುರ್ಗೇಶ ಹಾಗೂ ರಾಜೇಶ ಸೇರಿದಂತೆ ಅನೇಕರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!