ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿಸಬೇಕು: ಸೋಮಶೇಖರ ನಿಲೋಗಲ್

ಕೊಪ್ಪಳ/ ಕುಕನೂರ : ವಿದ್ಯಾರ್ಥಿಗಳ ಜೀವನದಲ್ಲಿ ನೀವು ನಡೆದ ಹಾದಿಯಂತೆ ನಿಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವುದರೊಂದಿಗೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿ ನೀಡಬೇಕು ಎಂದು ವಿದ್ಯಾನಂದ ಗುರುಕುಲ ಪ್ರೌಢಶಾಲೆಯ ಉಪ ಪ್ರಾಚಾರ್ಯರಾದ ಸೋಮಶೇಖರ್ ನಿಲೋಗಲ್ ಹೇಳಿದರು. ಅವರು ಕುಕನೂರು ಪಟ್ಟಣದ ವಿದ್ಯಾನಂದ ಗುರುಕುಲ ಬಯಲು ರಂಗ ಮಂದಿರದಲ್ಲಿ 2005-06 ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಂದ ಹಮ್ಮಿಕೊಂಡ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ನೀಡುವುದರೊಂದಿಗೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿ ಮಾಡಿ ವಿದ್ಯೆ ಕಲಿಸಿದ ಮತ್ತು ಹಿರಿಯರಿಗೆ ಗೌರವ ನೀಡುವುದರೊಂದಿಗೆ ಮನೆ ಆರ್ಥಿಕವಾಗಿ ಸಾಮಾಜಿಕವಾಗಿ ಮುನ್ನುಗ್ಗಲು ಮಹಿಳೆ ಮತ್ತು ಪುರುಷರು ಸಮಾನವಾಗಿ ದುಡಿದಾಗ ಆರ್ಥಿಕತೆ ಹೊಂದಲು ಸಾಧ್ಯವಾಗುತ್ತದೆ ಮತ್ತು ವಿದ್ಯಾನಂದ ಗುರುಕುಲ ಸಂಸ್ಥೆಯ ನೂರರ ಸಂಭ್ರಮಕ್ಕೆ ಎಲ್ಲಾ ಹಳೆಯ ವಿದ್ಯಾರ್ಥಿಗಳು ಕೈಜೋಡಿಸಿ ತನು ಮನ ಧನದಿಂದ ಸೇವೆಯನ್ನು ಸಲ್ಲಿಸಬೇಕು ಎಂದು ಹೇಳಿದರು.

ವಿದ್ಯಾನಂದ ಗುರುಕುಲ ವಿಶ್ವಸ್ಥ ಮಂಡಳಿಯ ಆಡಳಿತ ಅಧಿಕಾರಿ ಶರಣಪ್ಪ ಹೊಸಮನಿ ಮಾತನಾಡಿ ವಿದ್ಯೆಯ ಜೊತೆಗೆ ಬದುಕಿನ ಮಾರ್ಗ ತೋರಿಸಿದ ಗುರುವನ್ನು ಸ್ಮರಿಸುವುದು, ಗುರುವನ್ನು ಗೌರವಿಸುವ ಸಂಸ್ಕೃತಿ ಸಿಗುವುದು ಭಾರತೀಯ ಪರಂಪರೆಯಲ್ಲಿ ಮಾತ್ರ ಸಾಧ್ಯ ಪ್ರಪಂಚದ ಯಾವುದೇ ದೇಶದಲ್ಲೂ ಇರದೇ ಇರುವ ಸುಸಂಸ್ಕೃತಿ ನಮ್ಮ ದೇಶದಲ್ಲಿದೆ, ಗುರುವಂದನಾ ಕಾರ್ಯಕ್ರಮದ ಮೂಲಕ ಗುರುಗಳಿಗೆ ಗೌರವ ನಮನ ವನ್ನು ಸಲ್ಲಿಸುವ, ಸ್ಮರಿಸುವ ಕಾರ್ಯ ಶ್ಲಾಘನೀಯವಾಗಿದೆ, ಗುರು ಎಂದರೆ ಕೇವಲ ಪಾಠ ಮಾಡುವ ಬೋಧಕನಲ್ಲ ವಿದ್ಯಾರ್ಥಿಗಳ ಜೀವನದ ಮೇಲೆ ಪ್ರಭಾವ ಬೀರುವ ಒಂದು ಶಕ್ತಿ ಗುರು ಸ್ಥಾನ.
ಶಿಕ್ಷಕರು ಸೇವಾ ಮನೋಭಾವನೆ ಹೊಂದಿ ವಿದ್ಯಾರ್ಥಿಗಳನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ದಾರಿ ದೀಪವಾಗಬೇಕು ಎಂದರು.

1922 ರ ಜುಲೈ 27 ರಂದು ಪ್ರಾರಂಭವಾದ ಗುರುಕುಲ ಸಂಸ್ಥೆಗೆ 103 ನೇ ವರ್ಷ ತುಂಬಲಿದೆ. ಬರುವ ಡಿಸೆಂಬರ್ ತಿಂಗಳಲ್ಲಿ ಗುರುಕುಲ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಹಳೆಯ ವಿದ್ಯಾರ್ಥಿಗಳ ಸಹಕಾರ ಅಗತ್ಯವಾಗಿದೆ ಸುಮಾರು 5 ರಿಂದ 10 ಸಾವಿರ ಹಳೆಯ ವಿದ್ಯಾರ್ಥಿಗಳು ಈ ಶತಮಾನೋತ್ಸವ ಕಾರ್ಯಕ್ರಮದ ಜವಾಬ್ದಾರಿ ನಿರ್ವಹಿಸುವ ನಿರೀಕ್ಷೆ ಇದೆ ಎಂದರು.

ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೀರಿ, ತಾವು ಕೂಡಾ 2005- 06 ನೇ ಸಾಲಿನ ವಿದ್ಯಾರ್ಥಿಗಳು ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.

ನಂತರ ಗುರುಕುಲ ಸಂಸ್ಥೆಯ ವಿಠಲ್ ಜೋಶಿ ಮಾತನಾಡಿ ಹಳೆಯ ವಿದ್ಯಾರ್ಥಿಗಳೆಲ್ಲರೂ ಸ್ನೇಹ ಸಮ್ಮಿಲನದಲ್ಲಿ ಕೂಡುವುದು ಒಂದು ಸುಮಧುರ ಅನುಭವವಾಗಿದೆ, ಸಂಸ್ಥೆಯೊಂದಿಗೆ ಒಡನಾಟವನ್ನು ಇಟ್ಟುಕೊಳ್ಳಿ, ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಎಲ್ಲರೊಂದಿಗೆ ಭೇಟಿಯಾಗೋಣ ಎಂದು ಹೇಳಿದರು.

ಹಳೆಯ ವಿದ್ಯಾರ್ಥಿ ಬಳಗದ ಮಲ್ಲಿಕಾರ್ಜುನ ಗುಳಗಣ್ಣವರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ನಾಗರಾಜ್ ಬೆಣಕಲ್ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಜಗದೀಶ ಗುತ್ತಿ, ವನಜಾ ನೆರವೇರಿಸಿದರು ವಂದನಾರ್ಪಣೆಯನ್ನು ಭಾವನ ನೆರವೇರಿಸಿದರು.

ಶಾಲೆಗೆ ಉಡುಗೊರೆಯಾಗಿ ಶುದ್ಧ ಕುಡಿಯುವ ನೀರಿನ ಸಾಧನವನ್ನು ನೀಡಿದರು.

ಈ ಸಂದರ್ಭದಲ್ಲಿ ಪ್ರೌಢಶಾಲೆಯ ಉಪ ಪ್ರಾಚಾರ್ಯರಾದ ಸೋಮಶೇಖರ್ ನಿಲೋಗಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕರಾದ ಹೆಚ್. ಎಂ. ಮುಲ್ಲಾ, ಎ. ಪಿ. ಮುಧೋಳ್, ಎಲ್. ಕೆ. ಪಾಟೀಲ್, ದತ್ತುರಾವ್ ಕುಲಕರ್ಣಿ, ಕೆ. ಆರ್ ರಾವ್, ನರಹರಿ ದೀಕ್ಷಿತ್, ಅರುಂಧತಿ ದೀಕ್ಷಿತ್, ಶ್ರೀನಿವಾಸ್ ದೇಸಾಯಿ, ಹರಿಪ್ರಿಯಾ ಕುಲಕರ್ಣಿ, ಲಕ್ಷ್ಮಿ ಶಂಕರ್, ಶಿವಕುಮಾರ್ ಹೆಳವರ್, ಹನುಮಪ್ಪ ನೋಟಗಾರ, ಅನ್ವರ್ ಭಾಷಾ ಮಕಂದಾರ್, ಹೆಚ್ ಬಿ ಹಳೆಗೌಡರ್, ಶ್ರೀಕಾಂತ ಕುಲಕರ್ಣಿ, ರಾಜು ಪೂಜಾರ್, ವೆಂಕಟೇಶ್ ಕಾಟವಾ, ಬಿ ಪಿ ನಾಯ್ಕರ್, ಶ್ರೀಕಾಂತ್ ಜೋಶಿ ಸೇರಿದಂತೆ ಇತರರು ಇದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!