ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂದಗಲ್ಲ ಗ್ರಾಮದ ಹೆಮ್ಮೆಯ ಪುತ್ರರು ಬಾಗವಾನ : ಚಲವಾದಿ ಪ್ರಾಂಶುಪಾಲರು

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ ಗ್ರಾಮದ ಎಂ ಎ ಬಾಗವಾನ ಗುರುಗಳು ಇಲಕಲ್ಲನ ವಿಜಯ ಮಹಾಂತೇಶ ಮಹಿಳಾ ಕಾಲೇಜನಲ್ಲಿ ಇಲ್ಲಿವರೆಗೆ ಪ್ರೊಫೆಸರ ಆಗಿ ಉತ್ತಮ ಸೇವೆ ಸಲ್ಲಿಸಿ ಈಗ ಅದೇ ಕಾಲೇಜಿಗೆ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದಾರೆ ಅದೇ ರೀತಿ ಜೆ ಎನ್ ಎಸ್ ಪ. ಪೂ. ಯಾದವಾಡ ಕಾಲೇಜಿಗೆ ನಮ್ಮೂರಿನ ಇನ್ನೋರ್ವ ಗುರುಗಳಾದ ವಾಯ್. ಎಚ್. ಚಲವಾದಿ ಯವರು ಸಹ ಇಲ್ಲಿಯವರೆಗೆ ಪ್ರೊಫೆಸರ್ ಆಗಿ ಈಗ ಅದೇ ಕಾಲೇಜಿಗೆ ಪ್ರಾಂಶುಪಾಲರಾಗಿ ನೇಮಕಗೊಂಡು ನಮ್ಮ ಕಂದಗಲ್ಲ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿ ಗ್ರಾಮದ ಹೆಮ್ಮೆಯ ಪುತ್ರರಾಗಿ ಹೊರ ಹೊಮ್ಮಿರುವುದು ಬಹಳ ಸಂತಸ ತಂದಿದ್ದು ಇವರಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮ ಮತ್ತು ನಗರಗಳ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಇವರ ಮಾರ್ಗದರ್ಶನ ಸದಾ ದೊರೆಯುತ್ತಿರಲಿ, ಶಿಕ್ಷಣಕ್ಕೆ ಇವರ ಕೊಡುಗೆ ಅಪಾರವಾಗಿದ್ದು ನಿಷ್ಠೆ ಪ್ರಾಮಾಣಿಕತೆ ಸೌಹಾರ್ದ ಜೀವನ್ ಇವರನ್ನು ಈ ಮಟ್ಟಕ್ಕೆ ತಲುಪಿಸಿದೆ ಎಂದು ಗ್ರಾಮದ ಮಾಜಿ ತಾ. ಪಂ. ಅಧ್ಯಕ್ಷ ಮಹಾಂತೇಶ್ ಕಡಿವಾಲ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರುಗಳಾದ ಪಂಪಣ್ಣ ಸಜ್ಜನ ಹಾಗೂ ಮಹಮ್ಮದಸಾಬ ಭಾವಿಕಟ್ಟಿಯವರು ಕಂದಗಲ್ಲ ಗ್ರಾಮದ ಡಾ. ಬಾಬಾಸಾಹೇಬ ಅಂಬೇಡ್ಕರ್ ಜಯಂತೋತ್ಸವ ಸಮಿತಿ ಹಾಗೂ ಚಲವಾದಿ ಸಮಾಜದವರಿಂದ ಏರ್ಪಡಿಸಿದ್ದ ಸತ್ಕಾರ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಚಂದ್ರಶೇಖರ ಜಂಗ್ಲಿ ವಹಿಸಿದ್ದರು.
ಅಮರಪ್ಪ ಗೆಜ್ಜೆಲಗಟ್ಟಿ, ಶಂಕ್ರಪ್ಪ ಚಲವಾದಿ ಸಂಗಣ್ಣ ಹವಾಲ್ದಾರ ರವಿಕುಮಾರ್ ಕoಠಿ, ಎಸ್ ಡಿ ಎಂ ಸಿ ಅಧ್ಯಕ್ಷ ಶರಣಪ್ಪ ಬಳಿಗಾರ, ಆನಂದ ಜವಾನರ, ಸಂಗಮೇಶ್ ಗೋಡಿ, ಚಂದ್ರಶೇಖರ ಬಸರಗಿಡದ, ಚನ್ನಪ್ಪ ಚಲವಾದಿ, ಯಮನಪ್ಪ ಜಂಗ್ಲಿ ಗುರುಗಳಾದ ಮಂಜುನಾಥ್ ಮರಕಮದಿನ್ನಿ, ಬಸವರಾಜ್ ಜಂಗ್ಲಿ, ಬಸಪ್ಪ ಚಲವಾದಿ ಲಿಂಗರಾಜ ಶಿರಗುಂಪಿ ,ಮು ಅಥಿತಿಗಳಾಗಿ ಆಗಮಿಸಿದ್ದರು. ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿದ ಪ್ರಾಂಶುಪಾಲರಾದ ಎಂ ಎ ಬಾಗವಾನ ಗುರುಗಳು ಹಾಗೂ ವಾಯ ಎಚ್ ಚಲವಾದಿ ಗುರುಗಳು ಮಾತನಾಡಿ ಕಂದಗಲ್ಲ ಗ್ರಾಮದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಭವ್ಯವಾದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮದಲ್ಲಿ ಉನ್ನತ ಮಟ್ಟದ ಹುದ್ದೆಗಳನ್ನು ನಮ್ಮ ಕಂದಗಲ್ಲ ಗ್ರಾಮದವರು ಅಲಂಕರಿಸಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಲಿ ಎಂದರು.
ಕಾರ್ಯಕ್ರಮದಲ್ಲಿ ವಡ್ಡರ ಭೋವಿ ಸಮಾಜದವರು ವಾಲ್ಮೀಕಿ ಸಮಾಜದವರು ದಲಿತ ಯುವ ಸೇನೆ ಹಾಗೂ ಯಲ್ಲಪ್ಪ ಚಲವಾದಿ ಗುರುಗಳು ಈ ಇಬ್ಬರು ಪ್ರಾಂಶುಪಾಲರನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸಿದರು.
ರಮೇಶ್ ದಾಸರ ಕಾರ್ಯಕ್ರಮ ನಿರೂಪಿಸಿದರು. ಶಂಕರಾಕಾಳಿ ಪ್ರಸಾದ ಸ್ವಾಗತಿಸಿ ವಂದಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!