ಇಂದೋ ನಾಳೆಯೋ ಬೀಳುವಂತಹ ಮನೆಯಲ್ಲಿ ವಾಸ :ನೊಂದವರ ಆಕ್ರೋಶ
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಾರ್ಯಮೊಳ, ಚಿನ್ನಿಕಟ್ಟೆ, ಮದ್ದೂರು ಕಾಲೋನಿಯಲ್ಲಿ ಬೆಟ್ಟ ಕುರುಬ ಸೋಲಿಗರು ಈ ಹಾಡಿಗಳಲ್ಲಿ ವಾಸವಾಗಿರುವ ಮನೆಗಳು ಯಾವಾಗ ಕುಸಿದು ಬೀಳುತ್ತವೆಯೋ ಎಂಬ ಭಯದಿಂದಲೇ ದಿನದೂಡುವಂತಾಗಿದೆ ವಾಸ ಮಾಡಲು ಯೋಗ್ಯ ಮನೆಗಳಿಲ್ಲ, ಮೂಲಭೂತ ಸೌಕರ್ಯಗಳು ಸಹ ಇವರಿಗೆ ಯಾವುದೂ ದೊರಕುತ್ತಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಮತ ಭಿಕ್ಷೆಗಾಗಿ ಬಂದು ಆಶ್ವಾಸನೆಗಳನ್ನು ಕೊಟ್ಟು ಮತ ಭಿಕ್ಷೆ ಪಡೆದು ನಮ್ಮ ಜನಾಂಗವನ್ನು ಮರೆತೇ ಬಿಟ್ಟಿದ್ದಾರೆ ಇಲ್ಲಿಯವರೆಗೆ ನಮಗೆ ಸರಕಾರದ ಯಾವುದೇ ಯೋಜನೆಗಳಿಂದ ಮನೆ ದೊರೆತಿಲ್ಲ, ನಾವು ಬರೀ ಮತ ಹಾಕಲು ಮಾತ್ರ ಬೇಕಾ, ಅವರುಗಳು ತಂದು ಇಂತಹ ಮನೆಗಳಲ್ಲಿ ಇಟ್ಟರೆ ಇರುತ್ತಾರಾ? ಭಾಷಣಗಳಲ್ಲಿ ಮಾತ್ರ ಕೋಟಿಗಳ ಲೆಕ್ಕದಲ್ಲಿ ನಮ್ಮ ಜನಾಂಗಕ್ಕೆ ಏನೇನೋ ಅನುಕೂಲ ಮಾಡಿಕೊಟ್ಟಿದ್ದೀವಿ ಎಂದು ಬೊಂಬಡೆ ಹೊಡೆಯುವ ಅವರುಗಳು ಒಮ್ಮೆಯೂ ನಮ್ಮ ಸಮಸ್ಯೆ ಕೇಳಿಲ್ಲ,ಮತದಾನ ನಮ್ಮ ಹಕ್ಕು ಎಂದಾದರೆ ಮೂಲಭೂತ ಸೌಕರ್ಯ ಕೇಳುವ ಹಕ್ಕು ನಮಗಿಲ್ಲವೇ ಎಂದು ಸ್ಥಳೀಯ ರಾಜಕೀಯ ನಾಯಕರು ಹಾಗೂ ಅಧಿಕಾರಿಗಳ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಾ ಇವರ ಬಗ್ಗೆ ಸರಕಾರ ಆದಷ್ಟು ಬೇಗ ಗಮನಕ್ಕೆ ತೆಗೆದುಕೊಂಡು ಈ ಸಮಸ್ಯೆ ಬಗೆಹರಿಸಬೇಕೆಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತು (ರಿ.) ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.



















