ಬಾಗಲಕೋಟೆ ಜಿಲ್ಲೆಯ ಬಾದಾಮಿ ಪೊಲೀಸ್ ಠಾಣೆಯ ಸಿ. ಪಿ. ಐ ಕರಿಯಪ್ಪ ಬನ್ನೇ ಹಾಗೂ ಪಿ.ಎಸ್. ಐ.ವಿಠಲ್ ನಾಯಕ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಹೆಲ್ಮೆಟ್ ಹಾಕದೆ ಇನ್ನು ಮುಂದೆ ದ್ವಿಚಕ್ರ ವಾಹನ ಸಂಚಾರ ಮಾಡಿದರೆ ಸ್ಥಳದಲ್ಲಿಯೇ ಜಿ.ಪಿ.ಎಸ್. ಲೊಕೇಶನ್ ಸಹಿತ ಫೋಟೋ ತೆಗೆದು ಇಲಾಖೆಗೆ ಕಳಿಸಿ ವಾಹನದ ನಂಬರ್ ಮೂಲಕ ವಾಹನ ಮಾಲಿಕರ ಮನೆಗೆ ದಂಡದ ರಸೀದಿ ಬಂದು ತಲುಪುತ್ತದೆ. ಈಗಾಗಲೇ ಬಾಗಲಕೋಟೆ ನಗರದಲ್ಲಿ ಈ ನಿಯಮ ಚಾಲನೆಯಲ್ಲಿದ್ದು ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಸ್ಥಳದಲ್ಲಿಯೇ ಕ್ಯಾಮರಾಗಳು ಫೋಟೋ ಕ್ಲಿಕ್ಕಿಸಿ ದಂಡ ವಿಧಿಸುವ ಕ್ರಮ ಜಾರಿಯಲ್ಲಿದ್ದು ಈಗ ಬಾದಾಮಿ ಪೊಲೀಸ್ ಠಾಣೆ ಇಂದಿನಿಂದ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಮನೆ ಮನೆಗೆ ದಂಡ ತಲುಪಿಸುವ ಕ್ರಮ ಜಾರಿಯಾಗಿದೆ.
ಈ ಬಗ್ಗೆ ಸಾರ್ವಜನಿಕರು ಹಾಗು ದ್ವಿಚಕ್ರ ವಾಹನ ಸವಾರರು ನಮ್ಮ ಜೀವ ಉಳಿಸುವ ಈ ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸುವ ಕ್ರಮ ತಂದಿರುವುದು ಜನರ ಪ್ರಾಣ ರಕ್ಷಣೆ ಮಾಡಿದಂತಾಗುತ್ತದೆ ಈ ಬಗ್ಗೆ ಪೊಲೀಸ್ ಇಲಾಖೆಯ ಈ ಕ್ರಮಕ್ಕೆ ನಮ್ಮ ವಾಹಿನಿಯ ಜೊತೆ ಮಾತನಾಡಿ ಶ್ಲಾಘನೆ ವ್ಯಕ್ತಪಡಿಸಿದರು.
ವರದಿ:ನಿಂಬಯ್ಯ ಕುಲಕರ್ಣಿ, ಬಾದಾಮಿ



















